ಕೊಚ್ಚಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿ ಏಳು ವರ್ಷಗಳಿಂದ ಕ್ರಿಕೆಟ್ಗೆ ದೂರವಿದ್ದ ವೇಗಿ ಎಸ್.ಶ್ರೀಶಾಂತ್ ಅವರು, ಇಂಡಿಯನ್ ಪ್ರೀಮಿಯರ್ ಲೀಗ್ಗೆ (ಐಪಿಎಲ್) ಮರಳಲು ಬಯಸಿದ್ದಾರೆ.
ಏಳು ವರ್ಷಗಳ ಬಳಿಕ ಐಪಿಎಲ್ಗೆ ಮರಳುವ ಮಹದಾಸೆ ಹೊಂದಿರುವ ಶ್ರೀಶಾಂತ್, ಮುಂದಿನ ಐಪಿಎಲ್ಗಾಗಿ ನಡೆಯಲಿರುವ ಹರಾಜಿನಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ತನ್ನ ನೆಚ್ಚಿನ ಮೂರು ತಂಡಗಳನ್ನು ಬಹಿರಂಗಪಡಿಸಿ, ಆ ತಂಡಗಳಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಶ್ರೀಶಾಂತ್ ಭಾಗಿಯಾಗಿರುವ ಆರೋಪಕ್ಕೆ ಒಳಗಾಗಿದ್ದರು. ಮುಂಬರುವ ಸೆಪ್ಟೆಂಬರ್‌ಗೆ ಶ್ರೀಶಾಂತ್ಗೆ ಎಲ್ಲ ನಿಷೇಧಗಳು ದೂರವಾಗಲಿವೆ.
ಇನ್ಸ್ಟಾಗ್ರಾಂ ಲೈವ್ ಸೆಷನ್ನಲ್ಲಿ ಮಾತನಾಡಿರುವ ಅವರು ಅವರು, 2021 ಐಪಿಎಲ್ ಟೂರ್ನಿಗೆ ನಡೆಲಿರುವ ಹರಾಜಿಗೆ ಅರ್ಜಿ ಸಲ್ಲಿಸುತ್ತೇನೆ. ನನ್ನನ್ನು ಆಯ್ಕೆ ಮಾಡುವ ಯಾವುದೇ ತಂಡದ ಪರವಾಗಿ ನಿಷ್ಠೆಯಿಂದ ಆಡುತ್ತೇನೆ ಎಂದರು.
ಅದು ಮುಂಬೈ ಇಂಡಿಯನ್ಸ್ ತಂಡವಾದರೆ ಮತ್ತಷ್ಟು ಖುಷಿ. ಏಕೆಂದರೆ ಅದಕ್ಕೆ ಸಚಿನ್ ಪಾಜಿ ಕಾರಣ. ಅವರನ್ನು ಭೇಟಿಯಾಗಲೆಂದೇ ಕ್ರಿಕೆಟ್ ಆಡಿದ್ದೇನೆ. ಸಚಿನ್ರಿಂದ ಕಲಿಯುವುದು ಬೆಟ್ಟದಷ್ಟಿದೆ. ಅಲ್ಲದೆ, ನಾನು ಧೋನಿ ಭಾಯ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಡಿಯಲ್ಲಿ ಆಡಲು ಇಷ್ಟಪಡುತ್ತೇನೆ ಎಂದು ಅವರು ಹೇಳಿದರು.
37 ವರ್ಷದ ಶ್ರೀಶಾಂತ್ ಈವರೆಗೂ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 87, 75 ಮತ್ತು 7 ವಿಕೆಟ್ಗಳನ್ನು ಪಡೆದಿದ್ದಾರೆ.