ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕಪಟ್ಟಿಯಲ್ಲಿ ನಂಬರ್ 1ಸ್ಥಾನಕ್ಕೆ ಲಗ್ಗೆಹಾಕಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 318ರನ್ ಹಾಗೂ ಎರಡನೇ ಟೆಸ್ಟ್ ಪಂದ್ಯದಲ್ಲಿ 257ರನ್ಗಳ ಅಂತರದ ಗೆಲುವು ದಾಖಲು ಮಾಡಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 120 ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಿಯಲ್ಲಿ ನಂಬರ್ 1ಸ್ಥಾನ ಅಂಲಕಾರ ಮಾಡಿದೆ. ಜತೆಗೆ ವೆಸ್ಟ್ ಇಂಡೀಸ್ ವಿರುದ್ಧ 8ನೇ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲು ಮಾಡಿರುವ ರೆಕಾರ್ಡ್ ಬರೆದಿದೆ.
ಇದಾದ ಬಳಿಕ 2 ಟೆಸ್ಟ್ ಪಂದ್ಯ ಆಡಿರುವ ನ್ಯೂಜಿಲ್ಯಾಂಡ್ 1ರಲ್ಲಿ ಗೆಲುವು ದಾಖಲು ಮಾಡಿ 60 ಅಂಕಗಳೊಂದಿಗೆ ಎರಡನೇ ಸ್ಥಾನ,ಅಷ್ಟೇ ಪಂದ್ಯಗಳನ್ನಾಡಿರುವ ಶ್ರೀಲಂಕಾ ಮೂರನೇ ಸ್ಥಾನ, 3 ಪಂದ್ಯಗಳನ್ನಾಡಿ ಒಂದರಲ್ಲಿ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ 4ನೇ ಸ್ಥಾನ ಹಾಗೂ ಇಂಗ್ಲೆಂಡ್ 5ಸ್ಥಾನದಲ್ಲಿದ್ದು, ಉಳಿಂದತೆ ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ,ಬಾಂಗ್ಲಾದೇಶ ಹಾಗೂ ಪಾಕ್ ಇನ್ನು ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆಯಬೇಕಾಗಿದೆ.