ಅಹಮದಾಬಾದ್(ಗುಜರಾತ್): ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ಗಳ ಗೆಲುವು ದಾಖಲು ಮಾಡುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಂಬರ್ 1 ಸ್ಥಾನಕ್ಕೆ ಲಗ್ಗೆ ಹಾಕಿದೆ.
-
India top the table 👏
— ICC (@ICC) February 25, 2021 " class="align-text-top noRightClick twitterSection" data="
They now need to win or draw the last Test to book a place in the #WTC21 final 👀#INDvENG pic.twitter.com/FQcBTw6dj6
">India top the table 👏
— ICC (@ICC) February 25, 2021
They now need to win or draw the last Test to book a place in the #WTC21 final 👀#INDvENG pic.twitter.com/FQcBTw6dj6India top the table 👏
— ICC (@ICC) February 25, 2021
They now need to win or draw the last Test to book a place in the #WTC21 final 👀#INDvENG pic.twitter.com/FQcBTw6dj6
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನ 112 ರನ್ಗಳಿಗೆ ಆಲೌಟ್ ಮಾಡಿದ್ದ ಭಾರತ 145 ರನ್ಗಳಿಸಿತು. ಎರಡನೇ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆಂಗ್ಲರ ಪಡೆ 81 ರನ್ಗಳಿಗೆ ಕುಸಿತ ಕಂಡಿದ್ದರಿಂದ ಟೀಂ ಇಂಡಿಯಾ ಗೆಲುವಿಗೆ ಕೇವಲ 49 ರನ್ಗಳ ಗುರಿ ಪಡೆದುಕೊಂಡಿತ್ತು. ಈ ಗುರಿಯನ್ನ ಯಾವುದೇ ವಿಕೆಟ್ ನಷ್ಟವಿಲ್ಲದೇ ಮುಟ್ಟಿತು.
ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ
ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಟೀಂ ಇಂಡಿಯಾ 2-1 ಅಂತರದ ಮುನ್ನಡೆ ಪಡೆದುಕೊಂಡಿದ್ದು, ಈ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ. ಇದೀಗ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೆಣಸಾಟ ನಡೆಸಬೇಕಾದ್ರೆ ಮುಂದಿನ ಪಂದ್ಯದಲ್ಲಿ ಡ್ರಾ ಸಾಧಿಸಬೇಕಾದ ಅನಿವಾರ್ಯತೆ ನಿಎದುರಾಗಿದೆ. ಒಂದು ವೇಳೆ ಕೊಹ್ಲಿ ಪಡೆ ಪಂದ್ಯ ಕೈಚೆಲ್ಲಿದ್ರೆ ಆಸ್ಟ್ರೇಲಿಯಾ ಅವಕಾಶ ಪಡೆದುಕೊಳ್ಳಲಿದೆ. ಇನ್ನು 64.1 ಪಾಯಿಂಟ್ ಹೊಂದಿರುವ ಇಂಗ್ಲೆಂಡ್ ರೇಸ್ನಿಂದ ಹೊರಬಿದ್ದಿದೆ.
ಸದ್ಯ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ 71.0 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್ 70.0 ಅಂಕಗಳೊಂದಿಗೆ ಎರಡನೇ ಸ್ಥಾನ ಹಾಗೂ 69.2 ಪಾಯಿಂಟ್ಗಳೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡರೆ ಆಸ್ಟ್ರೇಲಿಯಾ ನೇರವಾಗಿ ಪ್ರವೇಶ ಪಡೆದುಕೊಂಡು ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಟ ನಡೆಸಲಿದೆ.