ಲಂಡನ್: ಐಸಿಸಿ ಏಕದಿನ ವಿಶ್ವಕಪ್ ಮಹಾ ಟೂರ್ನಿಯಲ್ಲಿ ರನ್ ಮಳೆಗರೆದು ಗೆಲುವಿನ ದಾಖಲೆ ಬರೆಯುತ್ತಿದ್ದ ಇಂಗ್ಲೆಂಡ್ಗೆ ಶ್ರೀಲಂಕಾ ದಿಢೀರ್ ಶಾಕ್ ನೀಡಿದ್ದು, ಮಹತ್ವದ ಪಂದ್ಯದಲ್ಲಿ ಸೋಲಿನ ರುಚಿ ತೋರಿಸಿದೆ. ಇದರಿಂದ ಕ್ರಿಕೆಟ್ ಪಂಡಿತರ ಲೆಕ್ಕಾಚಾರವೇ ತಲೆಕೆಳಗಾಗಿದೆ.
ಪ್ರಸಕ್ತ ವಿಶ್ವಕಪ್ನಲ್ಲಿ ಏಷ್ಯಾದ ತಂಡಗಳ ವಿರುದ್ಧ ಇಂಗ್ಲೆಂಡ್ ಎರಡು ಸೋಲು ಕಂಡಿದೆ. ಈ ಮೊದಲು ಪಾಕ್ ವಿರುದ್ಧ 14ರನ್ಗಳ ಸೋಲು ಕಂಡಿದ್ದ ಆಂಗ್ಲ ಪಡೆ, ಇದೀಗ ಶ್ರೀಲಂಕಾ ವಿರುದ್ಧ ಕೂಡ 20 ರನ್ಗಳ ಸೋಲಿನ ರುಚಿ ಕಂಡಿದೆ. ವಿಶೇಷವೆಂದರೆ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧವೇ ಇಂಗ್ಲೆಂಡ್ ಸತತ 4ನೇ ಸೋಲು ಕಂಡಿದೆ.
ಈ ಹಿಂದೆ, 1999ರಲ್ಲಿ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್ 8 ವಿಕೆಟ್ಗಳ ಸೋಲಿನ ರುಚಿ ತೋರಿಸಿತ್ತು. ಇದಾದ ಬಳಿಕ 2007, 2011, 2015 ಹಾಗೂ 2019ರಲ್ಲೂ ಶ್ರೀಲಂಕಾ ಮೆಲುಗೈ ಸಾಧಿಸಿದ್ದು, ಸತತ ನಾಲ್ಕು ಗೆಲುವು ದಾಖಲಿಸಿದೆ.
2007ರಲ್ಲಿ ಲಂಕಾ 2 ರನ್ಗಳ ಗೆಲುವು, 2011ರಲ್ಲಿ 10 ವಿಕೆಟ್ಗಳಿಂದ, 2015ರಲ್ಲಿ 9 ವಿಕೆಟ್ಗಳಿಂದ ಹಾಗೂ ಇದೀಗ 20 ರನ್ಗಳ ಗೆಲುವು ದಾಖಲಿಸಿದೆ. ಹೀಗಾಗಿ ಆಂಗ್ಲರ ತಂಡಕ್ಕೆ ಏಷ್ಯಾ ಬೌಲಿಂಗ್ ಶಕ್ತಿ ಎದುರಿಸುವ ಶಕ್ತಿ ಇಲ್ಲವೇ ಎಂಬ ಮಾತು ಸಹ ಕೇಳಿ ಬರುತ್ತಿವೆ.
-
✅ 2007
— Cricket World Cup (@cricketworldcup) June 21, 2019 " class="align-text-top noRightClick twitterSection" data="
✅ 2011
✅ 2015
✅ 2019
Sri Lanka have beaten England every time they've faced them at men's World Cups this century... and one man has starred in all four wins!#CWC19 | #LionsRoar pic.twitter.com/bNLSFGXZrg
">✅ 2007
— Cricket World Cup (@cricketworldcup) June 21, 2019
✅ 2011
✅ 2015
✅ 2019
Sri Lanka have beaten England every time they've faced them at men's World Cups this century... and one man has starred in all four wins!#CWC19 | #LionsRoar pic.twitter.com/bNLSFGXZrg✅ 2007
— Cricket World Cup (@cricketworldcup) June 21, 2019
✅ 2011
✅ 2015
✅ 2019
Sri Lanka have beaten England every time they've faced them at men's World Cups this century... and one man has starred in all four wins!#CWC19 | #LionsRoar pic.twitter.com/bNLSFGXZrg
ಬಾಂಗ್ಲಾ ವಿರುದ್ಧ 386 ರನ್ ಪೇರಿಸಿದ್ದ ಆಂಗ್ಲರು, ಅಫ್ಘಾನಿಸ್ತಾನದ ವಿರುದ್ಧ 397 ರನ್ ಮಾಡಿ ಭರ್ಜರಿ ಗೆಲುವು ದಾಖಲು ಮಾಡಿತ್ತು. ಜತೆಗೆ ವೆಸ್ಟ್ ಇಂಡೀಸ್ ನೀಡಿದ್ದ 212 ರನ್ಗಳನ್ನ ಕೇವಲ 33.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ್ದ ಬಲಿಷ್ಠ ತಂಡ, ಶ್ರೀಲಂಕಾ ವಿರುದ್ಧ ಏಕಾಏಕಿಯಾಗಿ ಕುಸಿತ ಕಂಡಿದೆ.
ಇನ್ನು ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲೂ ಭಾರತ ಬೌಲಿಂಗ್ ಶಕ್ತಿ ಎದುರು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದರ ಬಗ್ಗೆ ಈಗಾಗಲೇ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.