ETV Bharat / sports

ವಿಶ್ವಕಪ್​ನಲ್ಲಿ ಅತ್ಯಧಿಕ ರನ್​, ವಿಕೆಟ್​, ಕ್ಯಾಚ್​ ದಾಖಲೆಗಳ ವೀರರು ಇವರು

ವಿಶ್ವಕಪ್​ನಲ್ಲಿ ಬ್ಯಾಟಿಂಗ್, ಬೌಲಿಂಗ್​ ಹಾಗೂ ಫೀಲ್ಡಿಂಗ್​ನಲ್ಲಿ ದಾಖಲೆ ನಿರ್ಮಿಸಿದ ಆಟಗಾರರು

World Cup 2019
author img

By

Published : Jul 15, 2019, 9:44 AM IST

ಲಾರ್ಡ್ಸ್​: 45 ದಿನಗಳ ಕೂತೂಹಲಕ್ಕೆ ತೆರೆಬಿದ್ದಿದ್ದು,12ನೇ ವಿಶ್ವಕಪ್​ ಇಂಗ್ಲೆಂಡ್​ ಕೈಸೇರಿದೆ. ಈ ಸುದೀರ್ಘ ಬಹುರಾಷ್ಟ್ರಗಳ ಟೂರ್ನಿಯಲ್ಲಿ ರೋಹಿತ್​ ಶರ್ಮಾ ಗರಿಷ್ಠ ರನ್​ಗಳಿಸಿದ್ದರೆ, ಮಿಶೆಲ್​ ಸ್ಟಾರ್ಕ್​ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ.

ವಿಶ್ವಕಪ್​ನಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​:
ಭಾರತದ ರೋಹಿತ್​ ಶರ್ಮಾ ಟೂರ್ನಿಯಲ್ಲಿ ಗರಿಷ್ಠ ರನ್​ ಸರದಾರರಾಗಿದ್ದಾರೆ. ಹಿಟ್​ಮ್ಯಾನ್​ ಈ ಟೂರ್ನಿಯಲ್ಲಿ 5 ಶತಕ ಹಾಗೂ ಒಂದು ಅರ್ಧಶತಕದ ಸಹಿತ 648 ರನ್​ಗಳಿಸಿ ಗರಿಷ್ಠ ಸ್ಕೋರರ್​ ಆಗಿದ್ದಾರೆ. ಇವರಿಗಿಂತ ಕೇವಲ ಒಂದು ರನ್​ ಕಡಿಮೆ ಗಳಿಸಿರುವ ಡೇವಿಡ್​ ವಾರ್ನರ್​ ಎರಡನೇ ಸ್ಥಾನದಲ್ಲಿದ್ದಾರೆ.

ಟೂರ್ನಿಯ ಗರಿಷ್ಠ ರನ್​ ಸರದಾರರು:
ರೋಹಿತ್​ ಶರ್ಮಾ 648
ಡೇವಿಡ್​ ವಾರ್ನರ್​ 647
ಶಕಿಬ್​ ಅಲ್​ ಹಸನ್​ 606
ಕೇನ್​ ವಿಲಿಯಮ್ಸನ್​ 578
ಜೋ ರೂಟ್​ 556

2015ರ ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್​ ಪಡೆದಿದ್ದ ಆಸ್ಟ್ರೇಲಿಯಾ ಮಿಶೆಲ್​ ಸ್ಟಾರ್ಕ್​ ಈ ಬಾರಿಯೂ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು 27 ವಿಕೆಟ್​ ಪಡೆಯುವ ಮೂಲಕ ಮೆಕ್​ಗ್ರಾತ್​(26)ರ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಗರಿಷ್ಠ ವಿಕೆಟ್​ ಪಡೆದ ಬೌಲರ್​ಗಳು
ಮಿಶೆಲ್​ ಸ್ಟಾರ್ಕ್​ 27
ಲೂಕಿ ಫರ್ಗ್ಯುಸನ್​ 21
ಮುಸ್ತಫಿಜುರ್​ ರೆಹಮಾನ್​ 20
ಜೋಫ್ರಾ ಆರ್ಚರ್​ 20
ಜಸ್ಪ್ರೀತ್​ ಬುಮ್ರಾ 18

ಇಂಗ್ಲೆಂಡ್​ನ ಜೋ ರೂಟ್​ ಟೂರ್ನಿಯಲ್ಲಿ ಗರಿಷ್ಠ ಕ್ಯಾಚ್(13 ಕ್ಯಾಚ್​)​​ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 2003ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್​ 11 ಕ್ಯಾಚ್​ ಪಡೆದಿದ್ದುಈವರೆಗಿನ ವಿಶ್ವದಾಖಲೆಯಾಗಿತ್ತು. ಇದೀಗ ಆ ದಾಖಲೆ ರೂಟ್​ ಪಾಲಾಗಿದೆ.

ಟೂರ್ನಿಯಲ್ಲಿ ಹೆಚ್ಚು ಕ್ಯಾಚ್​ ಪಡೆದವರು
ಜೋ ರೂಟ್​ 13
ಫಾಫ್​ ಡು ಪ್ಲೆಸಿಸ್​ 10
ಜಾನಿ ಬೈರ್ಸ್ಟೋವ್​ 9
ಶೆಲ್ಡಾನ್​ ಕಾಟ್ರೆಲ್​ 8
ಮಾರ್ಟಿನ್​ ಗಪ್ಟಿಲ್​ 8

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.