ETV Bharat / sports

ಮಾಹಿ, ಇನ್ಮುಂದೆ ವಿಶ್ವ ಕ್ರಿಕೆಟ್​ ನಿಮ್ಮ ಹೆಲಿಕಾಪ್ಟರ್​ ಶಾಟ್​ ಮಿಸ್​ ಮಾಡಿಕೊಳ್ಳಲಿದೆ: ಅಮಿತ್​ ಶಾ

ಭಾರತ ತಂಡದ ಮಾಜಿ ಕ್ಯಾಪ್ಟನ್​, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರ ಮುಂದಿನ ಭವಿಷ್ಯಕ್ಕೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವಿಶ್​ ಮಾಡ್ತಿದ್ದಾರೆ.

MS Dhoni
MS Dhoni
author img

By

Published : Aug 15, 2020, 11:18 PM IST

ನವದೆಹಲಿ: ಟೀಂ ಇಂಡಿಯಾ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರು ವಿದಾಯ ಘೋಷಣೆ ಮಾಡ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಶುಭ ಹಾರೈಕೆ ಮಾಡಿ ಟ್ವೀಟ್​ ಮಾಡ್ತಿದ್ದಾರೆ.

  • .@msdhoni has mesmerized millions through his unique style of cricket. I hope he will continue to contribute towards strengthening Indian cricket in the times to come. Best wishes for his future endeavours.

    World cricket will miss the helicopter shots, Mahi!

    — Amit Shah (@AmitShah) August 15, 2020 " class="align-text-top noRightClick twitterSection" data=" ">

ಇದೀಗ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ ಟ್ವೀಟ್​ ಮಾಡಿದ್ದಾರೆ. ಮಾಹಿ ಇನ್ಮುಂದೆ ವಿಶ್ವ ಕ್ರಿಕೆಟ್​ ನಿಮ್ಮ ಹೆಲಿಕಾಪ್ಟರ್​​ ಶಾಟ್​ ಮಿಸ್​ ಮಾಡಿಕೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

ವಿಶಿಷ್ಟ ಶೈಲಿಯ ಕ್ರಿಕೆಟ್​ ಮೂಲಕ ಲಕ್ಷಾಂತರ ಜನರನ್ನ ಮಂತ್ರಮುಗ್ಧಗೊಳಿಸಿದ್ದೀರಿ. ವಿಭಿನ್ನ ಆಟದ ಶೈಲಿಯಿಂದ ಅನೇಕ ಅಭಿಮಾನಿಗಳ ಮನಸಲ್ಲಿ ಉಳಿದಿದ್ದೀರಿ. ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್​ ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ಸಹಕಾರ ಮುಂದುವರಿಯಲಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭಾಶಯಗಳು ಎಂದು ಗೃಹ ಸಚಿವರು ಶುಭ ಹಾರೈಸಿದ್ದಾರೆ.

Amit Shah
ಅಮಿತ್​ ಶಾ, ಕೇಂದ್ರ ಗೃಹ ಸಚಿವ

ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಮಹೇಂದ್ರ ಸಿಂಗ್​ ಧೋನಿ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಹೆಲಿಕಾಪ್ಟರ್​ ಶಾಟ್​ಗಳ ಮೂಲಕ ಲಕ್ಷಾಂತರ ಕ್ರಿಕೆಟಿಗರ ಮನ ಗೆದ್ದಿರುವ ಮಹೇಂದ್ರ ಸಿಂಗ್​ ಧೋನಿ ವಿಶೇಷ ಆಟದ ಶೈಲಿ ಹೊಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.