ಪರ್ತ್: ಮಹಿಳೆಯರ ಟಿ-20 ವಿಶ್ವಕಪ್ನ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸಿದ ಥಾಯ್ಲೆಂಡ್ ಮಹಿಳಾ ತಂಡ 7 ವಿಕೆಟ್ಗಳ ಸೋಲು ಕಂಡಿದೆ.
ಇದೇ ಮೊದಲ ಬಾರಿಗೆ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಥಾಯ್ಲೆಂಡ್ ತಂಡ ಇಂದು ವಿಂಡೀಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. 20 ಓವರ್ಗಳನ್ನು ಪೂರ್ತಿಗೊಳಿಸಿದ ಥಾಯ್ ತಂಡ ಗಳಿಸಿದ್ದು ಕೇವಲ 78 ರನ್.
ವಿಂಡೀಸ್ ನಾಯಕಿ ಸ್ಟೆಫನಿ ಟೇಲರ್ 13ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಅನಿಸಾ ಮೊಹಮ್ಮದ್, ಶಮಿಲಿಯಾ ಕಾನೆಲ್, ಚಿನೆಲ್ಲೆ ಹೆನ್ರಿ, ಹೇಲಿ ಮ್ಯಾಥ್ಯೂಸ್ ಹಾಗೂ ಅಫಿ ಪ್ಲೆಚೆರ್ ತಲಾ ಒಂದು ವಿಕೆಟ್ ಪಡೆದು ಥಾಯ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.
-
👉 3/13
— T20 World Cup (@T20WorldCup) February 22, 2020 " class="align-text-top noRightClick twitterSection" data="
👉 26*
✅ One happy captain!
A selfie with Stafanie Taylor, Player of the Match for her all-round performance. #T20WorldCup | #WIvTHA pic.twitter.com/LsPkpBwFKM
">👉 3/13
— T20 World Cup (@T20WorldCup) February 22, 2020
👉 26*
✅ One happy captain!
A selfie with Stafanie Taylor, Player of the Match for her all-round performance. #T20WorldCup | #WIvTHA pic.twitter.com/LsPkpBwFKM👉 3/13
— T20 World Cup (@T20WorldCup) February 22, 2020
👉 26*
✅ One happy captain!
A selfie with Stafanie Taylor, Player of the Match for her all-round performance. #T20WorldCup | #WIvTHA pic.twitter.com/LsPkpBwFKM
ಕೇವಲ 79 ರನ್ಗಳ ಟಾರ್ಗೆಟ್ ಬೆನ್ನತ್ತಿದ ವಿಂಡೀಸ್ 16.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕಿ ಟೇಲರ್ ಔಟಾಗದೆ 26, ವಿಕೆಟ್ ಕೀಪರ್ ಶೆಮೈನ್ ಕ್ಯಾಂಪ್ಬೆಲ್ ಔಟಾಗದೆ 25 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮ್ಯಾಥ್ಯೂಸ್ 16 ರನ್ ಗಳಿಸಿದರು.
ಪಂದ್ಯ ಸೋತರೂ ಥಾಯ್ಲೆಂಡ್ನ ಉದಯೋನ್ಮುಖ ಬೌಲರ್ಗಳಾದ ಸುಲೀಪಾರ್ನ್ ಲಾವೋಮಿ 4 ಓವರ್ಗಳಲ್ಲಿ ಒಂದು ಮೇಡನ್ ಪಡೆದು ಕೇವಲ 14 ರನ್ ನೀಡಿ ವಿಂಡೀಸ್ ಬ್ಯಾಟ್ಸ್ಮನ್ಗಳನ್ನು ಕಾಡಿದರು. ಸೊರಾಯಾ ಲೇತ್ಹ್ 21 ರನ್ ನೀಡಿ 1 ವಿಕೆಟ್ ಪಡೆದರು. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಮಿಂಚಿದ ವೆಸ್ಟ್ ಇಂಡೀಸ್ ತಂಡದ ನಾಯಕಿ ಸ್ಟೆಫನಿ ಟೇಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.