ETV Bharat / sports

ಟೀಂ ಇಂಡಿಯಾ ವನಿತೆಯರ ಗೆಲುವಿನ ನಾಗಾಲೋಟ: ಲಂಕಾ ವಿರುದ್ಧ 7 ವಿಕೆಟ್ ಜಯ - ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತೀಯ ವನಿತೆಯರ ತಂಡ ಶ್ರೀಲಂಕಾವನ್ನು ಬಗ್ಗುಬಡಿದಿದೆ.

India defeat Sri Lanka by 7 wickets,ಟೀಂ ಇಂಡಿಯಾ ವನಿತೆಯರ ಗೆಲುವಿನ ನಾಗಾಲೋಟ
ಟೀಂ ಇಂಡಿಯಾ ವನಿತೆಯರ ಗೆಲುವಿನ ನಾಗಾಲೋಟ
author img

By

Published : Feb 29, 2020, 12:46 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ): ರಾಧಾ ಯಾದವ್ ಬಿಗಿ ಬೌಲಿಂಗ್ ದಾಳಿ ಮತ್ತು ಶೆಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ವನಿತೆಯರು ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಶ್ರೀಲಂಕಾ ನೀಡಿದ್ದ 114 ರನ್​ಗಳ ಗುರಿ ಬೆನ್ನತ್ತಿದ್ದ ಭಾರತೀಯ ವನಿತೆಯರ ತಂಡಕ್ಕೆ ಶೆಫಾಲಿ ಮತ್ತು ಸ್ಮೃತಿ ಮಂಧಾನ ಆಸರೆಯಾದರು. ಮೊದಲ ವಿಕೆಟ್​ಗೆ ಈ ಜೋಡಿ 34 ರನ್ ಪೇರಿಸಿತು. ಮಂಧಾನ ಔಟ್​ ಆದ ಬಳಿಕ ಮೈದಾನಕ್ಕಿಳಿದ ನಾಯಕಿ ಹರ್ಮನ್ ಪ್ರೀತ್ ಕೌರ್, ಶೆಫಾಲಿ ಜೊತೆ ಸೇರಿ 47 ರನ್ ಪೇರಿಸಿದ್ರು.

ಎಂದಿನಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶೆಫಾಲಿ 34 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 47 ರನ್​ ಗಳಿಸಿದ್ರು. ಅರ್ಧಶತಕ ಸಿಡಿಸುವ ಅವಕಾಶ ಇದ್ದರೂ ರನ್ಔಟ್​ ಆಗಿ ನಿರಾಸೆ ಅನುಭವಿಸಿದ್ರು. ಜೆಮ್ಮಿ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ತಲಾ 15 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ ಟೀಂ ಇಂಡಿಯಾ ವನಿತೆಯರು 14.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 116 ರನ್​ ಗಳಿಸಿದ್ರು.

ಇದಕ್ಕೂ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡಕ್ಕೆ ದೀಪ್ತಿ ಶರ್ಮಾ ಆಘಾತ ನೀಡಿದ್ರು. ಆರಂಭಿಕ ಆಟಗಾರ್ತಿ ಉಮೇಶಾ ತಿಮಾಶಿನಿ ಕೇವಲ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ರು. ನಂತರ ಜೊತೆಯಾದ ಚಮರಿ ಅಟಪಟ್ಟು ಮತ್ತು ಹರ್ಷಿತಾ ಮಾದವಿ ಕೊಂಚ ಚೇತರಿಕೆ ನೀಡಿದು.

ಭರ್ಜರಿಯಾಗಿ ಬ್ಯಾಟ್​ ಬೀಸಿದ ನಾಯಕಿ ಚಮರಿ ಅಟಪಟ್ಟು 33 ರನ್​ ಸಿಡಿಸಿ ಔಟ್​ ಆದ್ರು. ಬಿಗಿ ಬೌಲಿಂಗ್ ದಾಳಿ ನಡೆಸಿದ ಭಾರತೀಯ ವನಿತೆಯರು ಲಂಕಾ ಆಟಗಾರ್ತಿಯರಿಗೆ ಪ್ರತಿರೋಧ ಒಡ್ಡಲು ಅವಕಾಶ ನೀಡಲಿಲ್ಲ.

ಕೊನೆಯಲ್ಲಿ ಅಬ್ಬರಿಸಿದ ಕವಿಶ ದಿಲ್ಹಾರಿ 25ರನ್ ಸಿಡಿಸಿ ತಂಡದ ಮೊತ್ತ ನೂರರ ಗಡಿ ದಾಟಿಸಿದ್ರು. ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 113 ರನ್​ ಗಳಿಸಿತ್ತು. ಬಿಗಿ ಬೌಲಿಂಗ್ ದಾಳಿ ನಡೆಸಿದ ರಾಧಾ ಯಾದವ್ 4 ವಿಕೆಟ್, ರಾಜೇಶ್ವರಿ ಗಾಯಕ್ವಾಡ್ 2, ಪೂನಮ್ ಯಾದವ್, ದೀಪ್ತಿ ಶರ್ಮಾ ಮತ್ತು ಶಿಖಾ ಪಾಂಡೆ ತಲಾ ಒಂದು ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.