ಮೆಲ್ಬೋರ್ನ್: ಫೆಬ್ರವರಿ ಕೊನೆಯ ವಾರದಿಂದ ಆರಂಭವಾಗಲಿರುವ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಭಾರತವೂ ಕೂಡ ಫೇವರೆಟ್ ತಂಡಗಳಲ್ಲಿ ಒಂದಾಗಿದೆ ಎಂದು ಟೀಮ್ ಇಂಡಿಯಾದ ಕೋಚ್ ಡಬ್ಲ್ಯೂವಿ ರಾಮನ್ ಅಭಿಪ್ರಾಯಪಟ್ಟಿದ್ದಾರೆ.
1983 ರ ವಿಶ್ವಕಪ್ನಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಹೇಗೆ ಏಕದಿನ ವಿಶ್ವಕಪ್ ಜಯಿಸಿ ಇತಿಹಾಸ ನಿರ್ಮಿಸಿತ್ತೋ, ಅದೇ ರೀತಿ ಭಾರತ ಮಹಿಳಾ ತಂಡ ಕೂಡ ಚಾಂಪಿಯನ್ ಆಗಲಿದೆ ಎಂದು ರಾಮನ್ ಹೇಳಿದರು.
![1983 world cup](https://etvbharatimages.akamaized.net/etvbharat/prod-images/0582890609883878_1302newsroom_1581573906_885.jpeg)
ಆಸ್ಟ್ರೇಲಿಯಾದಲ್ಲಿ ಫೆಬ್ರವರಿ 21 ರಿಂದ ಮಾರ್ಚ್ 8ರವರೆಗೆ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ವನಿತೆಯರು ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರ ವಿರುದ್ಧ ಕಾದಾಡಲಿದ್ದಾರೆ.
![Women's T20 World Cup](https://etvbharatimages.akamaized.net/etvbharat/prod-images/5979909_add-a-heading-5_1302newsroom_1581573906_507.jpg)
ಭಾರತ ತಂಡ ಖಂಡಿತವಾಗಿಯೂ ಚಾಂಪಿಯನ್ ಆಗುವ ತಂಡಗಳಲ್ಲಿ ಪ್ರಮುಖ ತಂಡವಾಗಿದೆ. ಈಗಾಗಲೇ 2017ರ ಏಕದಿನ ವಿಶ್ವಕಪ್ ಹಾಗೂ 2018ರ ಟಿ20 ವಿಶ್ವಕಪ್ನಲ್ಲಿ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅಲ್ಲಿಂದಲೂ ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದ್ದಾರೆ. ಫಿಟ್ನೆಸ್, ಮೈದಾನದಲ್ಲಿ ಚುರುಕುತನ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ನಲ್ಲೂ ಸ್ಥಿರತೆ ಕಂಡುಕೊಂಡಿದ್ದಾರೆ.ಕಳೆದ 6 ತಿಂಗಳಿಂದ ಭಾರತ ತಂಡ ಉತ್ತಮ ಆಯಾಮದಲ್ಲಿದೆ ಎಂದು ರಾಮನ್ ಗುಣಗಾನ ಮಾಡಿದ್ದಾರೆ.
![Women's T20 World Cup](https://etvbharatimages.akamaized.net/etvbharat/prod-images/5979909_add-a-heading-6_1302newsroom_1581573906_921.jpg)
ವಿಶ್ವಕಪ್ಗೂ ಮೊದಲು ನಡೆದ ತ್ರಿಕೋನ ಟಿ20 ಸರಣಿಯಲ್ಲೂ ಭಾರತ ತಂಡ ಅದ್ಭುತ ಪ್ರದರ್ಶನ ತೋರಿತ್ತು. ಫೈನಲ್ ಪಂದ್ಯದಲ್ಲೂ ಗೆಲುವಿನ ಸನಿಹ ಬಂದರೂ ಕೊನೆಯ ನಾಲ್ಕು ಓವರ್ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು 11 ರನ್ಗಳ ಸೋಲನುಭವಿಸಿತ್ತು.
![Women's T20 World Cup](https://etvbharatimages.akamaized.net/etvbharat/prod-images/5979909_add-a-heading-7_1302newsroom_1581573906_923.jpg)
ವಿಶ್ವಕಪ್ಗೂ ಮುನ್ನ ಭಾರತ ತಂಡ ಫೆಬ್ರವರಿ 16 ರಂದು ಪಾಕಿಸ್ತಾನ ಹಾಗೂ 18 ರಂದು ವೆಸ್ಟ್ ಇಂಡೀಸ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ.