ಕೋಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ಟಿ-20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ಟೀಂ ಇಂಡಿಯಾ ಕನಸು ಭಗ್ನಗೊಂಡಿದೆ.
ಸೋತು ನಿರಾಸೆಯಲ್ಲಿರುವ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮಹಿಳಾ ತಂಡಕ್ಕೆ ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಅನೇಕರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಟ್ವಿಟ್

ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ನಿಮ್ಮ ಪ್ರಯತ್ನ ಎಲ್ಲರೂ ಹೆಮ್ಮೆ ಪಡುವಂತಹದ್ದು. ಮುಂದಿನ ದಿನಗಳಲ್ಲಿ ನೀವು ಖಂಡಿತವಾಗಿ ಪುಟಿದ್ದೇಳುತ್ತೀರಿ ಎಂಬ ವಿಶ್ವಾಸ ನನ್ನಲ್ಲಿದೆ ಎಂದಿದ್ದಾರೆ.
ಸೌರವ್ ಗಂಗೂಲಿ

ತುಂಬಾ ಚೆನ್ನಾಗಿ ಆಡಿದ್ದೀರಿ. ಬ್ಯಾಕ್ ಟು ಬ್ಯಾಕ್ ವಿಶ್ವಕಪ್ ಫೈನಲ್ಗೇರಿದ್ದೀರಿ. ಆದರೆ ಸೋಲು ಕಂಡಿದ್ದೀರಿ. ನೀವು ಸೂಪರ್. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ.
ಗೌತಮ್ ಗಂಭೀರ್

ಕಳೆದ ಐದು ವರ್ಷಗಳ ಹಿಂದೆ ಯಾರಿಗೂ ಗೊತ್ತಿರಲಿಲ್ಲ. ಇದೀಗ ಲಕ್ಷಾಂತರ ಜನರು ನೀವು ವಿಶ್ವಕಪ್ ಆಡುವುದನ್ನ ನೋಡ್ತಿದ್ದಾರೆ. ಪ್ರಶಸ್ತಿಗಳು ಬರುತ್ತವೆ, ಹೋಗುತ್ತವೆ. ಆದರೆ ಇದು ಭಾರತದ ಪ್ರತಿಯೊಬ್ಬ ನಾರಿಯ ಗೆಲುವು.
ಮಯಾಂಕ್ ಅಗರ್ವಾಲ್
-
This was heartbreaking. Well played @BCCIWomen. Sometimes, it's just not your day! Congratulations @AusWomenCricket. May this World Cup inspire many more to take up the sport! 🙌🏼 #INDvAUS #T20WorldCup
— Mayank Agarwal (@mayankcricket) March 8, 2020 " class="align-text-top noRightClick twitterSection" data="
">This was heartbreaking. Well played @BCCIWomen. Sometimes, it's just not your day! Congratulations @AusWomenCricket. May this World Cup inspire many more to take up the sport! 🙌🏼 #INDvAUS #T20WorldCup
— Mayank Agarwal (@mayankcricket) March 8, 2020This was heartbreaking. Well played @BCCIWomen. Sometimes, it's just not your day! Congratulations @AusWomenCricket. May this World Cup inspire many more to take up the sport! 🙌🏼 #INDvAUS #T20WorldCup
— Mayank Agarwal (@mayankcricket) March 8, 2020
ನಿಜಕ್ಕೂ ಅತಿ ದುಃಖಕರ. ಚೆನ್ನಾಗಿ ಆಡಿದ್ದೀರಿ. ನಿನ್ನೆಯ ದಿನ ನಿಮ್ಮದಾಗಿರಲಿಲ್ಲ. ಈ ವಿಶ್ವಕಪ್ ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 99 ರನ್ಗಳಿಗೆ ಆಲೌಟ್ ಆಗುವ ಮೂಲಕ 85 ರನ್ಗಳ ಸೋಲು ಕಂಡಿತ್ತು.