ETV Bharat / sports

ಈ ಕಾರಣಕ್ಕಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಬುಮ್ರಾ-ಶಮಿ ಒಟ್ಟಿಗೆ ಆಡುತ್ತಿಲ್ಲ!

author img

By

Published : Nov 18, 2020, 5:52 PM IST

ಡಿಸೆಂಬರ್​ 17ರಂದು ಟೆಸ್ಟ್​ ಸರಣಿ ಆರಂಭವಾಗುವುದರಿಂದ ಟೀಮ್​ ಮ್ಯಾನೇಜ್​ಮೆಂಟ್​ ಅವರಿಬ್ಬರಿಗೆ ಕೆಲಸದೊತ್ತಡ ಕಡಿಮೆ ಮಾಡಲು ಚಿಂತಿಸುತ್ತಿದೆ. ಜೊತೆಗೆ ಟೆಸ್ಟ್​ ಸರಣಿಗಾಗಿ ಅವರಿಬ್ಬರಿಗೆ ಅಭ್ಯಾಸ ಪಂದ್ಯದಲ್ಲಿ ಆಡುವ ಸಲುವಾಗಿ ವೈಟ್​ ಬಾಲ್​ ಟೂರ್ನಿಯಲ್ಲಿ ರೊಟೇಶನ್​ ಮಾಡಬಹುದು ಎನ್ನಲಾಗುತ್ತಿದೆ.

ಜಸ್​ ಪ್ರೀತ್​ ಬುಮ್ರಾ
ಜಸ್​ ಪ್ರೀತ್​ ಬುಮ್ರಾ

ನವದೆಹಲಿ: ಭಾರತ ತಂಡದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ 6 ವೈಟ್ ಬಾಲ್​ ಪಂದ್ಯಗಳಲ್ಲಿ ಒಟ್ಟಿಗೆ ಆಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಡಿಸೆಂಬರ್​ 17ರಂದು ಟೆಸ್ಟ್​ ಸರಣಿ ಆರಂಭವಾಗುವುದರಿಂದ ಟೀಮ್​ ಮ್ಯಾನೇಜ್​ಮೆಂಟ್​ ಅವರಿಬ್ಬರಿಗೆ ಕೆಲಸದೊತ್ತಡ ಕಡಿಮೆ ಮಾಡಲು ಚಿಂತಿಸುತ್ತಿದೆ. ಜೊತೆಗೆ ಟೆಸ್ಟ್​ ಸರಣಿಗಾಗಿ ಅವರಿಬ್ಬರಿಗೆ ಅಭ್ಯಾಸ ಪಂದ್ಯದಲ್ಲಿ ಆಡುವ ಸಲುವಾಗಿ ವೈಟ್​ ಬಾಲ್​ ಟೂರ್ನಿಯಲ್ಲಿ ರೊಟೇಶನ್​ ಮಾಡಬಹುದು ಎನ್ನಲಾಗುತ್ತಿದೆ.

ಭಾರತ ತಂಡ ಆಸ್ಟ್ರೇಲಿಯಾದಲ್ಲಿ 2 ತಿಂಗಳ ಕಾಲ ಇರಲಿದ್ದು, ಈ ವೇಳೆ 3 ಏಕದಿನ, 3 ಟಿ-20 ಹಾಗೂ 4 ಟೆಸ್ಟ್​ ಪಂದ್ಯಗಳನ್ನಾಡಲಿದೆ. ನವೆಂಬರ್​ 27ರಿಂದ ಡಿಸೆಂಬರ್​ 8ರವರೆಗೆ ವೈಟ್ ಬಾಲ್​ ಸರಣಿ ನಡೆಯಲಿದೆ.

ಇಶಾಂತ್​ ಶರ್ಮಾ ಟೆಸ್ಟ್​ ಸರಣಿಗೆ ಲಭ್ಯವಿರದಿದ್ದರೆ ಬುಮ್ರಾ ಮತ್ತು ಶಮಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಹೆಡ್​ ಕೋಚ್​ ರವಿ ಶಾಸ್ತ್ರಿ ಮತ್ತು ಬೌಲಿಂಗ್ ತರಬೇತುದಾರ ಭರತ್​ ಅರುಣ್ ಅವರ ಮುಖ್ಯ ಕೆಲಸವಾಗಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

ಮೊದಲ ಟೆಸ್ಟ್​ ಅಭ್ಯಾಸ ಪಂದ್ಯ ಡಿಸೆಂಬರ್​ 6ರಿಂದ 8ರವರೆಗೆ ಡ್ರಮೋಯ್ನ್​ ಓವೆಲ್​ನಲ್ಲಿ ನಡೆಯಲಿದೆ. ಈ 3 ದಿನಗಳ ಅಭ್ಯಾಸ ಪಂದ್ಯದ ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2 ಟಿ-20 ಪಂದ್ಯವನ್ನಾಡಲಿವೆ. ಹಾಗಾಗಿ ಕೇವಲ 12 ದಿನಗಳ ಅಂತರದಲ್ಲಿ 6 ಪಂದ್ಯಗಳಿರುವುದರಿಂದ ಆಡಳಿತ ಮಂಡಳಿ (ರವಿಶಾಸ್ತ್ರಿ, ವಿರಾಟ್​ ಕೊಹ್ಲಿ, ಭರತ್​ ಅರುಣ್​) ಬುಮ್ರಾ ಮತ್ತು ಶಮಿ ವಿಚಾರದಲ್ಲಿ ಸಮಸ್ಯೆ ತಂದುಕೊಳ್ಳಲು ಇಷ್ಟ ಪಡುವುದಿಲ್ಲ ಎನ್ನಲಾಗುತ್ತಿದೆ.

"ಅವರಿಬ್ಬರು(ಶಮಿ ಮತ್ತು ಬುಮ್ರಾ) ಟಿ-20 ಸರಣಿಯಲ್ಲಿ ಆಡಿದರೆ ಒಂದು ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಳ್ಳುತ್ತಾರೆ. ಹಾಗಾಗಿ ತಂಡದ ಆಡಳಿತ ಮಂಡಳಿ ಅವರಿಬ್ಬರನ್ನು ಒಟ್ಟಿಗೆ ಆಡಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಕಾರಣಗಳಿಂದ ಶಮಿ ಮತ್ತು ಬುಮ್ರಾರನ್ನು ವೈಟ್​ ಬಾಲ್ ಪಂದ್ಯಗಳ ವೇಳೆ ವಿಶ್ರಾಂತಿ ನೀಡಿ ಮತ್ತೊಬ್ಬರಿಗೆ ಆಡುವ ಅವಕಾಶ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಒಂದು ವೇಳೆ ಏಕದಿನ ಸರಣಿಯಲ್ಲಿ ಇಬ್ಬರೂ ಆಡಿದರೆ ಟಿ-20 ಸರಣಿಯಲ್ಲಿ ಮಾತ್ರ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.