ಮುಂಬೈ: ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ವಿಶ್ವಕಪ್ ಮುಗಿದ ಮೇಲೆ ತಮ್ಮ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.
2019ರ ವಿಶ್ವಕಪ್ನಲ್ಲಿ ಭರ್ಜರಿ 5 ಶತಕದ ಸಹಿತ 647 ರನ್ ಗಳಿಸಿದ್ದ ಭಾರತ ತಂಡದ ಉಪ ನಾಯಕರೂ ಆಗಿರುವ ರೋಹಿತ್ ಶರ್ಮಾ, ಮೂಲಗಳ ಪ್ರಕಾರ ದಿನವೊಂದಕ್ಕೆ ಒಂದು ಕೋಟಿ ಚಾರ್ಜ್ ಮಾಡುತ್ತಿದ್ದಾರಂತೆ. ಅದು ಖಾಸಗಿ ಕಾರ್ಯಕ್ರಮವಾಗಿರಲಿ, ಜಾಹೀರಾತು ಚಿತ್ರೀಕರಣವಿರಲಿ ಅಥವಾ ಪ್ರಮೋಷನ್ ಇವೆಂಟ್ಗಳಿರಲಿ. ರೋಹಿತ್ ಬರೋಬ್ಬರಿ ಒಂದು ಕೋಟಿ ಪಡೆಯಲಿದ್ದಾರಂತೆ.
ರೋಹಿತ್ ಮ್ಯಾನೇಜ್ಮೆಂಟ್ ಟೀಂ ಪ್ರಕಾರ, ರೋಹಿತ್ ಶರ್ಮಾ 20ಕ್ಕೂ ಹೆಚ್ಚು ಬ್ರಾಂಡ್ಗಳಿಗೆ ರಾಯಭಾರಿಯಾಗಿದ್ದಾರಂತೆ. ಅದರಲ್ಲೂ ಅಡಿಡಾಸ್, ಹ್ಯೂಬ್ಲಟ್ ವಾಚ್, ರಿಲಿಸ್ಪ್ರೇ, ರಸ್ನ, ಟ್ರಕ್ಸ್, ಶಾರ್ಪ್ ಎಲೆಕ್ಟ್ರಾನಿಕ್ಸ್, ಡ್ರೀಮ್ 11 ಸೀಟ್ ಟಯರ್ಸ್ ಕಪಂನಿಗಳು ಪ್ರಮುಖವಾಗಿವೆ.
32 ವರ್ಷದ ರೋಹಿತ್ ಶರ್ಮಾ ವಾರ್ಷಿಕವಾಗಿ ಜಾಹೀರಾತು ಮೂಲಗಳಿಂದ ಸುಮಾರು 75 ಕೋಟಿ ಆದಾಯ ಗಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.