ಒಂಟಾರಿಯೋ: ಕಳೆದ ಬಾರಿಗಿಂತ ಹೆಚ್ಚು ಸದ್ದು ಮಾಡಿದ ಕೆನಡಾದ ಗ್ಲೋಬಲ್ ಟಿ-20 ಲೀಗ್ಗೆ ತೆರೆಬಿದ್ದಿದ್ದು ರಿಯಾದ್ ಎಮ್ರಿಟ್ ನೇತೃತ್ವದ ವಿನ್ನಿಂಗ್ ಹಾಕ್ಸ್ ಸೂಪರ್ ಓವರ್ನಲ್ಲಿ ಶೋಯಬ್ ಮಲಿಕ್ ನೇತೃತ್ವದ ವಾಂಕೋವರ್ ನೈಟ್ಸ್ ವಿರುದ್ಧ ಗೆಲುವು ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
2018ರ ಆವೃತ್ತಿಯಲ್ಲಿ ಕೇವಲ ವಿಂಡೀಸ್ ಆಟಗಾರರು ಸ್ಥಳೀಯ ಆಟಗಾರರು ಇದ್ದರು. ಆದರೆ, ಈ ಬಾರಿ ಭಾರತದ ಯುವರಾಜ್ ಸಿಂಗ್, ಪಾಕಿಸ್ತಾನ ಶಾಹಿದ್ ಆಫ್ರಿದಿ, ಮಲಿಕ್, ಶದಾಬ್ ಖಾನ್, ದಕ್ಷಿಣ ಆಫ್ರಿಕಾದ ಮ್ಯಾರ್ಕ್ರಮ್, ಡುಮಿನಿ, ಆಸೀಸ್ನ ಕ್ರಿಸ್ ಲಿನ್, ಕಿವೀಸ್ನ ಸೋಧಿ, ನಿಶಾಮ್ ಸೇರಿದಂತೆ ವಿಶ್ವದ ಎಲ್ಲ ತಂಡಗಳ ಪ್ರಮುಖ ಆಟಗಾರರು ಪಾಲ್ಗೊಳ್ಳುವ ಮೂಲಕ ಟೂರ್ನಿಗೆ ಮೆರುಗು ತಂದುಕೊಟ್ಟಿದ್ದರು.
17 ದಿನಗಳ ಕಾ ನಡೆದ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸಿದ್ದವು. ಭಾನುವಾರ ಹಾಲಿ ಚಾಂಪಿಯನ್ ವಾಂಕೋವರ್ ನೈಟ್ಸ್ ತಂಡವನ್ನು ಸೂಪರ್ ಓವರ್ನಲ್ಲಿ ವಿನ್ನಿಂಗ್ ಹಾಕ್ಸ್ ಮಣಿಸಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿತು.
-
#GT2019 CHAMPIONS!
— GT20 Canada (@GT20Canada) August 12, 2019 " class="align-text-top noRightClick twitterSection" data="
Congratulations to @WinnipegGT20 for winning the second season of GT20 Canada. #VKvsWH pic.twitter.com/r9jXGTnS2x
">#GT2019 CHAMPIONS!
— GT20 Canada (@GT20Canada) August 12, 2019
Congratulations to @WinnipegGT20 for winning the second season of GT20 Canada. #VKvsWH pic.twitter.com/r9jXGTnS2x#GT2019 CHAMPIONS!
— GT20 Canada (@GT20Canada) August 12, 2019
Congratulations to @WinnipegGT20 for winning the second season of GT20 Canada. #VKvsWH pic.twitter.com/r9jXGTnS2x
ಮೊದಲು ಬ್ಯಾಟಿಂಗ್ ನಡೆಸಿದ್ದ ಹಾಕ್ಸ್ 20 ಓವರ್ಗಳಲ್ಲಿ 192 ರನ್ಗಳಿಸಿತ್ತು. ಶಾಹಿಮ್ ಅನ್ವರ್ 90, ಕ್ರಿಸ್ ಲಿನ್ 37, ಡುಮಿನಿ 33 ರನ್ಗಳಿಸಿದ್ದರು.
193 ರನ್ಗಳನ್ನು ಬೆನ್ನತ್ತಿದ ವಾಂಕೋವರ್ ನೈಟ್ಸ್ 2 ರನ್ಗೆ 2 ವಿಕೆಟ್ ಕಳೆದುಕೊಂಡರು ಮಲಿಕ್ 64, ಆ್ಯಂಡ್ರೆ ರಸೆಲ್ 20 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್ ಸಿಡಿಸಿ ಸೋಲುತ್ತಿದ್ದ ಪಂದ್ಯವನ್ನು ಗೆಲುವಿನತ್ತ ತಂದರೂ, ಕೊನೆಗೆ ಟೈ ಸಾಧಿಸಲಷ್ಟೇ ಶಕ್ತರಾದರು.
ಆದರೆ ಸೂಪರ್ ಓವರ್ನಲ್ಲಿ ನೈಟ್ಸ್ ಕೇವಲ 9 ರನ್ ಮಾತ್ರಗಳಿಸಿತು. 10 ರನ್ ಗುರಿ ಪಡೆದ ಹಾಕ್ಸ್ 4 ಎಸೆತಗಳಲ್ಲಿ ಗುರಿ ತಲುಪಿ 2ನೇ ಗ್ಲೋಬಲ್ ಟಿ20 ಚಾಂಪಿಯನ್ ಆಗಿ ಹೊರ ಹೊಮ್ಮಿತು.
8 ಪಂದ್ಯಗಳಲ್ಲಿ 332 ರನ್ಗಳಿಸಿದ ಜೆಪಿ ಡುಮಿನಿ ಟೂರ್ನಿ ಶ್ರೇಷ್ಠ ಹಾಗೂ ಅತ್ಯಮೂಲ್ಯ ಆಟಗಾರ ಪ್ರಶಸ್ತಿ ಪಡದರು. ಇಶ್ ಸೋಧಿ 6 ಪಂದ್ಯಗಳಿಂದ 12 ವಿಕೆಟ್ ಪಡೆದು ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.