ETV Bharat / sports

ಧೋನಿ ಜರ್ಸಿ ನಂಬರ್​ 7ನ್ನು ನಿವೃತ್ತಿಗೊಳಿಸಿ: ಬಿಸಿಸಿಐ ಮುಂದೆ ಬೇಡಿಕೆಯಿಟ್ಟ ದಿನೇಶ್​ ಕಾರ್ತಿಕ್​, ಮಿಥಾಲಿ ರಾಜ್​

author img

By

Published : Aug 16, 2020, 4:18 PM IST

Updated : Aug 16, 2020, 4:30 PM IST

ಭಾರತದ ವಿಕೆಟ್​ ಕೀಪರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ನಾಯಕ ದಿನೇಶ್​ ಕಾರ್ತಿಕ್​ ತಮ್ಮ ಟ್ವಿಟರ್​ನಲ್ಲಿ , ಧೋನಿ ಜರ್ಸಿ ನಂಬರ್​ 7 ಅನ್ನು ನಿವೃತ್ತಿಗೊಳಿಸಬೇಕೆಂದು ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದಾರೆ.

ಧೋನಿ ಜರ್ಸಿ ನಂಬರ್​ 7
ಧೋನಿ ಜರ್ಸಿ ನಂಬರ್​ 7

ಮುಂಬೈ: ಭಾರತ ತಂಡದ ನಾಯಕ ಎಂಎಸ್​ ಧೋನಿ ಶನಿವಾರ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಕ್ರಿಕೆಟ್​ಗೆ 16 ವರ್ಷ ಸೇವೆ ಸಲ್ಲಿಸಿರುವ ಧೋನಿ ಅವರ ಜರ್ಸಿ ನಂಬರ್​ 7 ಅನ್ನು ಬಿಸಿಸಿಐ ನಿವೃತ್ತಿಗೊಳಿಸಬೇಕೆಂದು ಹಲವಾರು ಹಾಲಿ-ಮಾಜಿ ಕ್ರಿಕೆಟಿಗರು ಆಗ್ರಹಪಡಿಸಿದ್ದಾರೆ.

ಭಾರತದ ವಿಕೆಟ್​ ಕೀಪರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ನಾಯಕ ದಿನೇಶ್​ ಕಾರ್ತಿಕ್​ ತಮ್ಮ ಟ್ವಿಟರ್​ನಲ್ಲಿ , ಧೋನಿ ಜರ್ಸಿ ನಂಬರ್​ 7 ಅನ್ನು ನಿವೃತ್ತಿಗೊಳಿಸಬೇಕೆಂದು ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದಾರೆ.

  • This is the last photo taken after our semis at the World Cup.lots of great memories through this journey. I hope the @bcci retire the #7 jersey in white ball cricket ❤️

    Good luck with your second innings in life , I’m sure you’ll have a lot of surprises for us there too 🙂💖 pic.twitter.com/4kX4uPhPOO

    — DK (@DineshKarthik) August 16, 2020 " class="align-text-top noRightClick twitterSection" data=" ">

ಧೋನಿಯ ಜೊತೆ 2019ರ ವಿಶ್ವಕಪ್​ ಸಂದರ್ಭದಲ್ಲಿ ತೆಗೆದುಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿರುವ ಕಾರ್ತಿಕ್, ಬಿಸಿಸಿಐ ಜರ್ಸಿ ನಂಬರ್​ 7 ಅನ್ನು ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ನಿವೃತ್ತಿಗೊಳಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿರುವ ಅವರು, ಧೋನಿ ಜೀವನದ 2ನೇ ಇನ್ನಿಂಗ್ಸ್​ಗೆ ಶುಭಾಶಯ ಕೋರಿದ್ದಾರೆ.

ದಿನೇಶ್​ ಕಾರ್ತಿಕ್​ 2004ರಲ್ಲಿ ಧೋನಿಗಿಂತಲೂ 3 ತಿಂಗಳು ಮೊದಲು ಟೀಮ್​ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಆದರೆ ಧೋನಿ ಯಶಸ್ವಿಯಾಗಿದ್ದರಿಂದ ದಿನೇಶ್ ಕಾರ್ತಿಕ್​ ಭಾರತೀಯ ಕ್ರಿಕೆಟ್​ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಆದರೂ ಅವರು 94 ಏಕದಿನ ಪಂದ್ಯ, 32 ಟಿ20 ಹಾಗೂ 26 ಟೆಸ್ಟ್​ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

  • The man who immortalised jersey no.7, whose sharp mind and a cool head earned him the tag of #CaptionCool , the man who fulfilled billion indian dreams by two World Cup trophies and who bid adieu in his inimitable style. Congratulations #MSDhoni on an outstanding career #Thala pic.twitter.com/3mpjVX268l

    — Mithali Raj (@M_Raj03) August 16, 2020 " class="align-text-top noRightClick twitterSection" data=" ">

ದಿನೇಶ್ ಕಾರ್ತಿಕ್​ ಹೊರತುಪಡಿಸಿ ಭಾರತ ಮಹಿಳಾ ತಂಡದ ಮಾಜಿ ಕೋಚ್​, ಶಾಂತ ರಂಗಸ್ವಾಮಿ ಕೂಡ ಧೋನಿ ಜರ್ಸಿ ನಂಬರ್​ 7 ಅನ್ನು ಬಿಸಿಸಿಐ ನಿವೃತ್ತಿಗೊಳಿಸಬೇಕು. ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂದಿದ್ದಾರೆ.

ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್​ ಕೂಡ ತನ್ನ ಚಾಣಾಕ್ಷ್ಯ ನಾಯಕತ್ವದಿಂದ ಕೋಟ್ಯಂತರ ಅಭಿಮಾನಿಗಳ ಕನಸಾದ ವಿಶ್ವಕಪ್​ ಗೆಲ್ಲಿಸಿಕೊಟ್ಟ ಧೋನಿ ಜರ್ಸಿ ನಂಬರ್​ ಅನ್ನು ನಿವೃತ್ತಿಗೊಳಿಸಬೇಕೆಂದು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.

ಈ ಕ್ರಿಕೆಟಿಗರನ್ನು ಹೊರೆತುಪಡಿಸಿ ಕೋಟ್ಯಂತರ ಅಭಿಮಾನಿಗಳು ಕೂಡ ಧೋನಿ ಜರ್ಸಿ ನಂಬರ್​ ನಿವೃತ್ತಿಗಳಿಸಬೇಕೆಂದು ಬಿಸಿಸಿಐ ಮೇಲೆ ಒತ್ತಡ ಹೇರಿದ್ದಾರೆ. ಭಾರತೀಯ ಕ್ರಿಕೆಟ್​ ಜಗತ್ತಿನಲ್ಲಿ ಕ್ರಿಕೆಟ್​ ದೇವರಾದ ಸಚಿನ್​ ತೆಂಡೂಲ್ಕರ್​ ಅವರ ಜರ್ಸಿ ನಂಬರ್​ 10 ಅನ್ನು ಮಾತ್ರ ಬಿಸಿಸಿಐ ನಿವೃತ್ತಿಗೊಳಿಸಿದೆ.

Last Updated : Aug 16, 2020, 4:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.