ವಡೋದರ: ತಂಡದ ಕೋಚ್ ಡೇವ್ ವಾಟ್ಮೋರ್ ಅವರನ್ನು ತರಬೇತಿಯಲ್ಲಿ ತೊಡಗಿಸಿಕೊಳ್ಳಲು ಪ್ರಸ್ತುತ ಕಷ್ಟವಾಗಿದೆ. ಬಿಸಿಸಿಐನ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದಲ್ಲಿ 60 ವರ್ಷ ಮೇಲ್ಪಟ್ಟವರು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳವುದನ್ನು ನಿರ್ಬಂಧಿಸಲಾಗಿದೆ ಎಂದು ಬರೋಡ ಕ್ರಿಕೆಟ್ ಅಸೋಸಿಯೇಷನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ಬಿಸಿಸಿಐ ತರಬೇತಿ ಶಿಬಿರ ಆರಂಭಿಸುವುದಕ್ಕಾಗಿ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಎಸ್ಒಪಿಯನ್ನು ಕಳುಹಿಸಿದೆ. ಕೊರೊನಾ ಮಧ್ಯೆಯೆ ತರಬೇತಿ ಆರಂಭಿಸುತ್ತಿರುವುದರಿಂದ 60 ವಯಸ್ಸು ಮೇಲ್ಪಟ್ಟವರ ಪಾಲ್ಗೊಳ್ಳುವಿಕೆ ನಿರ್ಭಂದ ಏರಲಾಗಿದೆ. " ವಾಟ್ಮೋರ್ ಅವರನ್ನು ತರಬೇತಿಯಲ್ಲಿ ತೊಡಗಿಸಿಕೊಳ್ಳುವುದು ನಮಗೆ ಈಗ ಕಷ್ಟವಾಗಿದ" ಎಂದು ಬಿಸಿಎ ಅಧಿಕಾರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
66 ವರ್ಷದ ಆಸ್ಟ್ರೇಲಿಯಾದ ಡೇವ್ ವಾಟ್ಮೋರ್ ಬರೋಡದ ರಣಜಿ ತಂಡದ ಕೋಚ್ ಹಾಗೂ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕಗೊಂಡಿದ್ದಾರೆ.
" 60 ವರ್ಷಕ್ಕಿಂತ ಮೇಲ್ಪಟ್ಟ ಸಹಾಯಕ ಸಿಬ್ಬಂದಿ, ಅಂಪೈರ್ಗಳು, ಗ್ರೌಂಡ್ ಸ್ಟಾಫ್ಗಳು ಮತ್ತು ಸಕ್ಕರೆ ಕಾಯಿಲೆ, ಶ್ವಾಸ ಸಂಬಂಧಿ ಕಾಯಿಲೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರು ಕೋವಿಡ್-19 ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ಅವರನ್ನು ತರಬೇತಿ ಶಿಬಿರದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲು" ಬಿಸಿಸಿಐ ಎಸ್‌ಒಪಿಯಲ್ಲಿ ತಿಳಿಸಿದೆ.
"ಸರ್ಕಾರವು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸುವವರೆಗೆ ಅಂತಹ(60 ದಾಟಿ ವ್ಯಕ್ತಿಗಳೂ) ಎಲ್ಲ ವ್ಯಕ್ತಿಗಳು ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ನಿರುತ್ಸಾಹ ತೋರಬೇಕು" ಎಂದು ಬಿಸಿಸಿಐನ 100 ಪುಟಗಳ ಎಸ್‌ಒಪಿಯಲ್ಲಿ ಸೂಚಿಸಿದೆ.
ವಾಟ್ಮೋರ್ ಬಿಟ್ಟರೆ ಬೆಂಗಾಲ್ ತಂಡದ ಕೋಚ್ ಅರುಣ್ಲಾಲ್ ಕೂಡ 65 ವರ್ಷ ದಾಟಿರುವುದರಿಂದ ತರಬೇತಿ ಶಿಬಿರದಿಂದ ದೂರ ಉಳಿಯಬೇಕಾಗಿದೆ.