ರಾಜ್ಕೋಟ್: ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ರಾಜ್ಕೋಟ್ ಮೈದಾನದಲ್ಲಿ ಎರಡನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಮಾಡಿರುವ ಯಡವಟ್ಟು ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ಬಾಂಗ್ಲಾ ತಂಡದ ಲಿಟನ್ ದಾಸ್ ಹಾಗೂ ನಯೀಮ್ ಟೀಂ ಇಂಡಿಯಾ ಬೌಲರ್ಗಳ ಬೆವರಿಳಿಸಿದರು. ಈ ಜೋಡಿ 5 ಓವರ್ಗಳಲ್ಲೇ 10 ರನ್ನುಗಳ ಸರಾಸರಿಯಲ್ಲಿ 50 ರನ್ ಗಳಿಸಿದ್ರು.
-
#RishabhPant messes up !! 🤦🏻♂️🤦🏻♂️🤦🏻♂️ pic.twitter.com/3rEVqnNG7Z
— Nishant Barai (@barainishant) November 7, 2019 " class="align-text-top noRightClick twitterSection" data="
">#RishabhPant messes up !! 🤦🏻♂️🤦🏻♂️🤦🏻♂️ pic.twitter.com/3rEVqnNG7Z
— Nishant Barai (@barainishant) November 7, 2019#RishabhPant messes up !! 🤦🏻♂️🤦🏻♂️🤦🏻♂️ pic.twitter.com/3rEVqnNG7Z
— Nishant Barai (@barainishant) November 7, 2019
ಪಂದ್ಯದ 6ನೇ ಓವರ್ ಮಾಡಲು ಕಣಕ್ಕಿಳಿದ ಚಹಾಲ್ ಸ್ಪಿನ್ ಮೋಡಿ ಮೂಲಕ ಬ್ಯಾಟ್ಸ್ಮನ್ಗಳಲ್ಲಿ ನಡುಕ ಹುಟ್ಟಿಸಿದರು. ಈ ವೇಳೆ ಅವರು ಎಸೆದ 5.3ನೇ ಓವರಿನ ಎಸೆತದಲ್ಲಿ ಲಿಟನ್ ದಾಸ್ ಕ್ರೀಸ್ ಬಿಟ್ಟು ದೊಡ್ಡ ಹೊಡೆತಕ್ಕೆ ಮುಂದಾಗುತ್ತಾರೆ. ಆದರೆ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಸೇರಿಕೊಂಡಿದೆ. ಈ ವೇಳೆ ಆತುರಗೇಡಿಗೆ ಬುದ್ದಿ ಮಂದ ಅನ್ನೊ ಮಾತಿನ ಹಾಗೆ ಚೆಂಡು ಸ್ಟಂಪ್ ದಾಟುವುದಕ್ಕೂ ಮುಂಚಿತವಾಗಿ ರಿಷಭ್ ಪಂತ್ ಸ್ಟಂಪ್ ಔಟ್ ಮಾಡುತ್ತಾರೆ. ಆದರೆ ಈ ವೇಳೆ ಅಂಪೈರ್ 'ನೋ ಬಾಲ್' ಎಂದು ಘೋಷಣೆ ಮಾಡಿಬಿಟ್ಟರು.
ರಿಷಭ್ ಪಂತ್ ಮಾಡಿರುವ ಈ ತಪ್ಪಿನಿಂದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಬೌಲರ್ ಯಜುವೇಂದ್ರ ಚಹಾಲ್ ಬೇಸರ ವ್ಯಕ್ತಪಡಿಸಿದರು. ಐಸಿಸಿ ನಿಯಮದ ಪ್ರಕಾರ, ವಿಕೆಟ್ ಕೀಪರ್ ಸ್ಟಂಪ್ಗೂ ಮೊದಲೇ ಚೆಂಡು ಕಲೆಕ್ಟ್ ಮಾಡಿಕೊಂಡು ಸ್ಟಂಪಿಂಗ್ ಮಾಡುವ ಹಾಗಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರಿಷಭ್ ಈ ರೀತಿಯಾಗಿ ಮಾಡಿದ್ದು ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.