ನವದೆಹಲಿ: ಪ್ರಸ್ತುತ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಯಾರು ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಕೊಹ್ಲಿ ಅಥವಾ ಸ್ಮಿತ್, ಇನ್ನು ಕೆಲವರು ಪಾಕಿಸ್ತಾನದ ಬಾಬರ್ ಅಜಮ್ ಅವರ ಹೆಸರನ್ನು ಸೂಚಿಸುತ್ತಾರೆ.
ಆದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಈ ಪ್ರಶ್ನೆಗೆ ಸಂದೇಯವಿಲ್ಲದೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ.
ಜಿಂಬಾಬ್ವೆ ಮಾಜಿ ಕ್ರಿಕೆಟಿಗರ ಪಮ್ಮಿ ಎಂಬಾಂಗ್ವ ಅವರೊಡನೆ ಇನ್ಸ್ಟಾಗ್ರಾಮ್ ಲೈವ್ ಸಂವಾದದಲ್ಲಿ ಕಾಣಿಸಿಕೊಂಡ ಪೀಟರ್ಸನ್, ಎಂಬಾಗ್ವಾ ಕೇಳಿದ ಸ್ಮಿತ್-ಕೊಹ್ಲಿ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಎಂಬ ಪ್ರಶ್ನೆಗೆ ಕೆವಿನ್ ಕೊಹ್ಲಿ ಹೆಸರನ್ನ ಆಯ್ಕೆ ಮಾಡಿದ್ದಾರೆ.
"ಕೊಹ್ಲಿ, ಅವರ ಚೇಸಿಂಗ್ ದಾಖಲೆಗಳು ಭಯಾನಕವಾಗಿವೆ. ಅವರು ಭಾರತಕ್ಕೆ ಹಲವು ಒತ್ತಡದ ಪರಿಸ್ಥಿತಿಯಲ್ಲೂ ಹೋರಾಡಿ ಗೆಲುವು ತಂದುಕೊಟ್ಟಿದ್ದಾರೆ. ಸ್ಮಿತ್ ಅವರ ದಾಖಲೆಗಳ ಸನಿಹವೂ ಬರಲು ಸಾಧ್ಯವಿಲ್ಲ" ಎಂದು ಪೀಟರ್ಸನ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಎಂಬಾಂಗ್ವ ಅವರ ಸಚಿನ್-ಕೊಹ್ಲಿ ನಡುವೆ ನಿಮ್ಮ ಆಯ್ಕೆ ಯಾರು ಎಂಬ ಪ್ರಶ್ನೆಗೂ ಪೀಟರ್ಸನ್ ಕೊಹ್ಲಿಯನ್ನೆ ಆಯ್ಕೆ ಮಾಡಿದ್ದಾರೆ.
"ಮತ್ತೆ, ವಿರಾಟ್ ಕೊಹ್ಲಿ, ಕಾರಣ ಅವರ ಚೇಸಿಂಗ್ ಸಂಖ್ಯೆ, ಅವರ ಚೇಸಿಂಗ್ ಸಂಖ್ಯೆಗಳು ಭಯ ಹುಟ್ಟಿಸುತ್ತವೆ. ಚೇಸ್ನಲ್ಲಿ ಅವರ 80ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ. ಅವರ ಹೆಚ್ಚಿನ ಶತಕಗಳು ಚೇಸಿಂಗ್ ವೇಳೆಯೇ ಬಂದಿವೆ. ಅವರ ಸ್ಥಿರತೆ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದೆ. ಅವರು ಚೇಸಿಂಗ್ ವೇಳೆ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ.
ಚೇಸಿಂಗ್ ವೇಳೆ ಸಚಿನ್ 42.22 ಸರಾಸರಿಯಲ್ಲಿ ರನ್ಗಳಿಸಿದ್ದರೆ, ಕೊಹ್ಲಿ 68.33 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಕೊಹ್ಲಿಯ 11,867 ಏಕದಿನ ರನ್ಗಳ ಪೈಕಿ 7039 ರನ್ಗಳು ಎರಡನೇ ಬ್ಯಾಟಿಂಗ್ ವೇಳೆ ಬಂದಿವೆ. ಈ ಅಂಕಿ ಅಂಶಗಳೇ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ತೋರಿಸುತ್ತದೆ.