ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳು ಸಾಮಾಜಿಕ ಜಾಲಾತಾಣದಲ್ಲಿ ತನ್ನ ಅಪ್ಪನಷ್ಟೇ ಪ್ರಚಲಿತದಲ್ಲಿರುವುದು ಹಳೆಯ ಮಾತು. ಇದೀಗ ಧೋನಿ ಜೀವಾ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಸಂಬಂಧಿಸಿದ ಆಸಕ್ತಿಕರ ವಿಚಾರ ಬಹಿರಂಗಪಡಿಸಿದ್ದಾರೆ.
ಜೀವಾ ಧೋನಿ ಬಳಿ ಬಂದು, ಅವರ(ರಣವೀರ್ ಸಿಂಗ್) ನನ್ನ ಸನ್ಗ್ಲಾಸ್ ಏಕೆ ತೊಟ್ಟಿದ್ದಾರೆ ಎಂದು ಹೇಳಿ, ನಂತರ ಮಹಡಿಯ ಮೇಲೆ ಹೋಗಿ ತನ್ನ ಗ್ಲಾಸ್ ಹುಡಕಿ, ನನ್ನ ಗ್ಲಾಸ್ ನನ್ನ ಹತ್ತಿರ ಇದೆ ಎಂದಿದ್ದಾಳೆ.
- " class="align-text-top noRightClick twitterSection" data="
">
ಇದನ್ನೆಲ್ಲಾ ಗಮನಿಸಿರುವ ಧೋನಿ, ಇಂದಿನ ದಿನದಲ್ಲಿ ಮಕ್ಕಳು ತುಂಬಾ ವಿಭಿನ್ನರಾಗಿದ್ದಾರೆ. ಜೀವಾಗೆ ಕೇವಲ ನಾಲ್ಕೂವರೆ ವಯಸ್ಸಿಗೆ ಇಷ್ಟೆಲ್ಲಾ ನೆನೆಪಿಟ್ಟುಕೊಂಡಿದ್ದಾಳೆ. ಆದರೆ, ನನಗೆ ನನ್ನ ಬಳಿಯಿರುವ ಸನ್ಗ್ಲಾಸ್ಗಳೆ ನೆನೆಪಿಲ್ಲ. ಆದರೆ ಮುಂದಿನ ಸಲ ರಣವೀರ್ ಸಿಕ್ಕಾಗ ಖಂಡಿತ ಅವಳು ತನ್ನ ಬಳಿಯೂ ನಿಮ್ಮ ಹತ್ತಿರವಿರುವ ಸನ್ಗ್ಲಾಸ್ ತರಹದ್ದು ಇದೆ ಎಂದು ಹೇಳುತ್ತಾಳೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ರಣವೀರ್ ಸಿಂಗ್ ಪ್ರತಿಕ್ರಿಯಿಸಿದ್ದು, ಜೀವಾ ತುಂಬಾ 'ಫ್ಯಾಷನಿಸ್ಟಾ'ಎಂದಿದ್ದಾರೆ. ಇವರ ಜೊತೆಗೆ ಹಾರ್ದಿಕ್ ಪಾಂಡ್ಯ, ಸ್ಯಾಮ್ ಬಿಲ್ಲಿಂಗ್ಸ್ ಕೂಡ ಧೋನಿ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಫೋಟೋವನ್ನು ಸುಮಾರು 22 ಲಕ್ಷ ಜನರು ಲೈಕ್ ಮಾಡಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.