ETV Bharat / sports

ಪೋಷಕರು ಫೋನ್​ ಬಿಲ್​ ಕಟ್ಟದಿದ್ದರೆ ಹೀಗಿರುತ್ತೆ ಪರಿಸ್ಥಿತಿ... ಯುವಿ ಶೇರ್​ ಮಾಡಿದ ಫೋಟೋ ನೋಡಿ - 2002 ಭಾರತ-ಶ್ರೀಲಂಕಾ

ಭಾರತ ತಂಡದ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್​ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ದಶಕಗಳ ಹಿಂದಿನ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಆಶೀಶ್​ ನೆಹ್ರಾ, ವಿರೇಂದ್ರ ಸೆಹ್ವಾಗ್, ವಿವಿಎಸ್​ ಲಕ್ಷ್ಮಣ್​ ಹಾಗೂ ಯುವರಾಜ್​ ಸಿಂಗ್​ ಕಾಯಿನ್ ಬೂತ್​ ವೊಂದರಲ್ಲಿ ಮಾತನಾಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಯುವರಾಜ್​ ಸಿಂಗ್​
ಯುವರಾಜ್​ ಸಿಂಗ್​
author img

By

Published : May 25, 2020, 1:25 PM IST

Updated : May 25, 2020, 1:32 PM IST

ಮುಂಬೈ: ದೇಶದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮುಂದುವರಿದಿರುವುದರಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೀರ್ಘ ಸಮಯದವರೆಗೆ ಯಾವುದೇ ಮಾದರಿಯ ಕ್ರಿಕೆಟ್​ ಚಾಲ್ತಿಯಲ್ಲಿಲ್ಲದ ಈ ಸಂದರ್ಭದಲ್ಲಿ ಆಟಗಾರರು ತಮ್ಮ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಭಾರತ ತಂಡದ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್​ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ದಶಕಗಳ ಹಿಂದಿನ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಆಶೀಶ್​ ನೆಹ್ರಾ, ವಿರೇಂದ್ರ ಸೆಹ್ವಾಗ್, ವಿವಿಎಸ್​ ಲಕ್ಷ್ಮಣ್​ ಹಾಗೂ ಯುವರಾಜ್​ ಸಿಂಗ್​ ಕಾಯಿನ್ ಬೂತ್​ ವೊಂದರಲ್ಲಿ ಮಾತನಾಡುತ್ತಿರುವ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ಸದಾ ಸಹ ಆಟಗಾರರೊಂದಿಗೆ ತಮಾಷೆ ಮಾಡುವ ಯುವಿ ಈ ಫೋಟೋಗೆ, ‘ಉತ್ತಮ ಪ್ರದರ್ಶನ ತೋರದೇ, ನಿಮ್ಮ ಪೋಷಕರು ಫೋನ್​ ಬಿಲ್​ ಕಟ್ಟದ ಸಂದರ್ಭದಲ್ಲಿನ ಪರಿಸ್ಥಿತಿ ಹೀಗಿರುತ್ತದೆ, ಮೊಬೈಲ್​ ಇಲ್ಲದ ದಿನಗಳು’ ಎಂದು ಶೀರ್ಷಿಕೆ ನೀಡಿ ಫೋಟೋ ಶೇರ್​ ಮಾಡಿದ್ದಾರೆ.

ಈ ಫೋಟೋಗೆ ಹರ್ಭಜನ್​ ಸಿಂಗ್ ಹಾಗೂ ಮುನಾಫ್​ ಪಟೇಲ್ ಸೇರಿದಂತೆ ಸಾವಿರಾರು ಜನರು​ ಪ್ರತಿಕ್ರಿಯಿಸಿದ್ದಾರೆ.

Last Updated : May 25, 2020, 1:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.