ಪೋರ್ಟ್ ಆಫ್ ಸ್ಪೇನ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದರೆ ಏಕದಿನ ಕ್ರಿಕೆಟ್ನಲ್ಲಿ ವೆಗವಾಗಿ 100 ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಲಿದ್ದಾರೆ.
ಭಾರತ ತಂಡದಲ್ಲಿನ ಸ್ಪಿನ್ ಬೌಲಿಂಗ್ನಲ್ಲಿ ಪ್ರಮುಖ ಅಸ್ತ್ರವಾಗಿರುವ ಕುಲ್ದೀಪ್ ಯಾದವ್ ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆಯಲು ಕೇವಲ 4 ವಿಕೆಟ್ಗಳ ಅವಶ್ಯಕತೆಯಿದೆ. ಇಂದು ಪೋರ್ಟ್ ಆಪ್ ಸ್ಪೇನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡುವ ಅವಕಾಶವಿದೆ.
ಭಾರತ ತಂಡದ ವೇಗಿ ಮೊಹಮ್ಮದ್ ಶಮಿ 56 ಪಂದ್ಯಗಳಲ್ಲಿ 100 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ ಈ ಸಾಧನೆ ಮಾಡಿರುವ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇದೀಗ 24 ವರ್ಷದ ಕುಲ್ದೀಪ್ ಶಮಿಯನ್ನು ಹಿಂದಿಕ್ಕಲು ಇನ್ನು 2 ಪಂದ್ಯಗಳ ಬಾಕಿ ಇದೆ.
ಒಂದು ವೇಳೆ ಇಂದೇ ಕುಲ್ದೀಪ್ 4 ವಿಕೆಟ್ ಪಡೆದರೆ ಬಾಂಗ್ಲಾದೇಶದ ಮುಸ್ತಫಿಜುರ್ ರಹಮಾನ್ ಹಾಗೂ ನ್ಯೂಜಿಲ್ಯಾಂಡ್ನ ಶೇನ್ ಬಾಂಡ್ ಜೊತೆ ವೇಗವಾಗಿ 100 ವಿಕೆಟ್ ಪಡೆದ 4ನೇ ಬೌಲರ್ ಎಂಬ ದಾಖಲೆಯನ್ನು ಹಂಚಿಕೊಳ್ಳಲಿದ್ದಾರೆ.