ಗಯಾನ(ವೆಸ್ಟ್ ಇಂಡೀಸ್): ಮಾರ್ಚ್ 3ರಿಂದ ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದ್ದು, 41 ವರ್ಷದ ಕ್ರಿಸ್ ಗೇಲ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಲಂಕಾ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗಾಗಿ ಬಲಿಷ್ಠ ತಂಡ ಪ್ರಕಟಗೊಂಡಿದ್ದು, ಟಿ20 ತಂಡದಲ್ಲಿ ಕ್ರಿಸ್ ಗೇಲ್ ಹಾಗೂ ವೇಗದ ಬೌಲರ್ ಫಿಡೆಲ್ ಎಡ್ವರ್ಡ್ಸ್ ಚಾನ್ಸ್ ಪಡೆದುಕೊಂಡಿದ್ದಾರೆ.
2021ರಲ್ಲಿ ಭಾರತದಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಹಿಂದೆ 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿದಿದ್ದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಅವರು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದು, ವೆಸ್ಟ್ ಇಂಡೀಸ್ ಪರ 58 ಟಿ-20 ಪಂದ್ಯಗಳನ್ನಾಡಿರುವ ಅವರು 1627ರನ್ಗಳಿಸಿದ್ದಾರೆ.
ಇನ್ನು ಫಿಡೆಲ್ 2012ರಲ್ಲಿ ಕೊನೆ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದೇಶಿ ಪಂದ್ಯಗಳಲ್ಲಿ ಹಾಗೂ ಲೀಗ್ಗಳಲ್ಲಿ ಮಿಂಚು ಹರಿಸಿರುವ ಕಾರಣ ಅವಕಾಶ ಪಡೆದುಕೊಂಡಿದ್ದಾರೆ. ಮಾರ್ಚ್ 3,5,7ರಂದು ಟಿ-20 ಪಂದ್ಯ ಹಾಗೂ ಮಾರ್ಚ್ 10,12 ಹಾಗೂ 14ರಂದು ಏಕದಿನ ಕ್ರಿಕೆಟ್ ಪಂದ್ಯ ನಡೆಯಲಿವೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿ: ಏಕದಿನ, ಟಿ-20 ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ
ಟಿ-20 ತಂಡ: ಕೀರನ್ ಪೊಲಾರ್ಡ್(ಕ್ಯಾಪ್ಟನ್) ನಿಕೋಲಸ್ ಪೂರನ್(ಉ.ನಾಯಕ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಫಿಡೆಲ್ ಎಡ್ವರ್ಡ್ಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಎವಿನ್ ಲೂಯಿಸ್, ಒಬೆಡ್ ಮೆಕಾಯ್, ರೋವ್ಮನ್ ಪೊವೆಲ್, ಲೆಂಡ್ಲ್ ಸಿಮನ್ಸ್, ಕೆವಿನ್ ಸಿಂಕ್ಲೇರ್
ಏಕದಿನ ತಂಡ: ಕೀರನ್ ಪೊಲಾರ್ಡ್(ನಾಯಕ), ಶೈ ಹೋಪ್(ಉ.ನಾಯಕ) ಫ್ಯಾಬಿಯನ್ ಅಲೆನ್, ಡೇರನ್ ಬ್ರಾವೋ, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಎವಿನ್ ಲೂಯಿಸ್, ಕೈಲ್ ಮೇಯರ್ಸ್,ಜೇಸನ್ ಮೊಹಮ್ಮದ್, ನಿಕೋಲಸ್ ಪೂರನ್, ಶೆಫರ್ಡ್, ಕೆವಿನ್ ಸಿಂಕ್ಲೇರ್