ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುವ ೩ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ಆಟಗಾರರು ‘ ಬ್ಲಾಕ್ ಲೈವ್ ಮ್ಯಾಟರ್’ ಲೋಗೋ ಇರುವ ಜರ್ಸಿ ತೊಟ್ಟು ಆಡಲಿದ್ದಾರೆ. ಸಮಾನತೆ ಮತ್ತು ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ.
“ಒಗ್ಗಟ್ಟು ಪ್ರದರ್ಶಿಸುವುದು ಮತ್ತ ವರ್ಣಭೇದದ ವಿರುದ್ದ ಜಾಗೃತಿ ಮೂಡಿಸುವು ನಮ್ಮ ಕರ್ತವ್ಯ ಎಂದು ನಾವು ಭಾವಿಸಿದ್ದೇವೆ ” ಎಂದು ವಿಂಡೀಸ್ ನಾಯಕ ಜಾಸನ್ ಹೋಲ್ಡರ್ ತಿಳಿಸಿದ್ದಾರೆ.
ಕ್ರೀಡೆಗಳ ಪುನಾರಂಭದ ನಂತರ ಎಲ್ಲ 20 ಪ್ರೀಮಿಯರ್ ಲೀಗ್ ಫುಟ್ಬಾಲ್ ಕ್ಲಬ್ಗಳು ಬ್ಲಾಕ್ ಲೈವ್ ಮ್ಯಾಟರ್ ಲೋಗೊ ಇರುವ ಶರ್ಟ್ಗಳಲ್ಲಿ ಧರಿಸಿದ ಬೆನ್ನಲ್ಲೇ ಐಸಿಸಿ ಕ್ರಿಕೆಟ್ ನಲ್ಲೂ ಬಳಸಲು ಅನುಮತಿ ನೀಡಿದೆ.
ಈ ಜರ್ಸಿಯನ್ನು ಅಲಿಸಾ ಹೊಸನ್ಹಾ ಎಂಬುವವರು ಡಿಸೈನ್ ಮಾಡಿದ್ದಾರೆ. ಸರಣಿಯ ಮೊದಲ ಟೆಸ್ಟ್ ಸೌತಂಪ್ಟನ್ನಲ್ಲಿ ಜುಲೈ 8ರಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್ ಮ್ಯಾಂಚೆಸ್ಟರ್ನಲ್ಲಿ ಜುಲೈ 16-20, ಮೂರನೇ ಟೆಸ್ಟ್ ಜುಲೈ 24ರಿಂದ 28ರವರೆಗೆ ನಡೆಯಲಿದೆ.
ವೆಸ್ಟ್ ಇಂಡೀಸ್ ತಂಡ:
ಜಾಸನ್ ಹೋಲ್ಡರ್(ನಾಯಕ) ಜಮೈನ್ ಬ್ಲಾಕ್ವುಡ್, ನಕ್ರುಮ್ ಬಾನ್ನರ್, ಕ್ರೈಗ್ ಬ್ರಾಥ್ವೇಟ್, ಸರ್ಮಥ್ ಬ್ರೂಕ್ಸ್, ಜಾನ್ ಕ್ಯಾಂಪ್ಬೆಲ್, ರಾಸ್ಟನ್ ಚಸ್, ರಖೀಮ್ ಕಾರ್ನ್ವಾಲ್, ಶೇನ್ ಡೋರಿಚ್, ಚೆಮರ್ ಹೋಲ್ಡರ್, ಶಾಯ್ ಹೋಪ್, ಅಲ್ಝಾರಿ ಜೋಸೆಫ್ ರೇಮನ್ ರೀಫರ್, ಕೆಮರ್ ರೋಚ್