ETV Bharat / sports

ವಿಂಡೀಸ್​ ವಿರುದ್ಧ 2-0 ರಲ್ಲಿ ಟೆಸ್ಟ್​ ಸರಣಿ ಗೆದ್ದ ಭಾರತ ಎ

373 ರನ್​ಗಳ ಟಾರ್ಗೆಟ್​ ಪಡೆದಿದ್ದ ವಿಂಡೀಸ್​ ಎ ಕೊನೆಯ ದಿನದಂತ್ಯದ ವೇಳೆಗೆ 6 ವಿಕೆಟ್​ ಕಳೆದುಕೊಂಡು 314 ರನ್​ಗಳಿಸಿ ಕ್ಲೀನ್​ಸ್ವೀಪ್​ ತಪ್ಪಿಸಿಕೊಂಡಿದೆ.

India A
author img

By

Published : Aug 10, 2019, 10:45 AM IST

ಟ್ರಿನಿಡಾಡ್​: ಭಾರಿ ಕುತೂಹಲ ಕೆರಳಿಸಿದ್ದ ಕೊನೆಯ ಅನಧಿಕೃತ ಟೆಸ್ಟ್​ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶ ಕಂಡ ವೆಸ್ಟ್​ ಇಂಡೀಸ್​ ಎ ತಂಡ ಸರಣಿ ಕ್ಲೀನ್​ಸ್ವೀಪ್​ ಮುಖಭಂಗದಿಂದ ಪಾರಾಗಿದೆ.

373 ರನ್​ಗಳ ಟಾರ್ಗೆಟ್​ ಪಡೆದಿದ್ದ ವಿಂಡೀಸ್​ ಎ ಕೊನೆಯ ದಿನದಂತ್ಯದ ವೇಳೆಗೆ 6 ವಿಕೆಟ್​ ಕಳೆದುಕೊಂಡು 314 ರನ್​ಗಳಿಸಿ ಡ್ರಾ ಸಾಧಿಸಿತು.

ವಿಂಡೀಸ್​ ತಂಡದ ಮಾಂಟ್ಸಿನ್​ ಹಾಡ್ಜ್​ 14, ಜೆರೆಮಿ ಸೊಲೋಜನೊ 92, ಬ್ರೆಂಡನ್​ ಕಿಂಗ್​ 77, ಸುನಿಲ್​ ಆ್ಯಂಬ್ರಿಸ್​ 69 ರನ್​ಗಲಿಸಿ ವಿಂಡೀಸ್​ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಭಾರತದ ಶವಬಾಜ್​ ನದೀಮ್​ 5 ವಿಕೆಟ್​ ಪಡೆದು ಮಿಂಚಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 201, ಎರಡನೇ ಇನ್ನಿಂಗ್ಸ್​ನಲ್ಲಿ 365 ರನ್​ಗಳಿಸಿತ್ತು. ವಿಂಡಿಸ್​ ಮೊದಲ ಇನ್ನಿಂಗ್ಸ್​ನಲ್ಲಿ ಕನ್ನಡಿಗ ಗೌತಮ್(6 ವಿಕೆಟ್​)​ ದಾಳಿಗೆ ತತ್ತರಿಸಿ 194 ರನ್​ಗಳಿಗೆ ಸರ್ವಪತನಗೊಂಡಿತು.

ಮೂರು ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ ತಂಡ 2-0ಯಲ್ಲಿ ಅನಧಿಕೃತ ಟೆಸ್ಟ್ ಸರಣಿ ಜಯಿಸಿದೆ.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.