ನವದೆಹಲಿ: ನಾಸಿರ್ ಹುಸೇನ್ ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ಭಾರತ ತಂಡದ ಚಾಂಪಿಯನ್ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡುವುದಕ್ಕೆ ಸಾಕಷ್ಟು ಟೀಮ್ ಮೀಟಿಂಗ್ ನಡೆಸುತ್ತಿದ್ದೆವು ಎಂದು ಬಹಿರಂಗಪಡಿಸಿದ್ದಾರೆ.
ಸಚಿನ್ ಎದುರಾಳಿಗಳನ್ನು ಬಲವಾದ ತಂತ್ರಗಾರಿಕೆಯ ಮೂಲಕ ಎದುರಿಸುತ್ತಿದ್ದರು. ಅವರು ಜಗತ್ತಿನ ಯಾವುದೇ ಭಾಗದಲ್ಲಿ ರನ್ಗಳಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಚೆಂಡನ್ನು ತನ್ನ ಬಳಿಗೆ ಬರಲು ಅನುಮತಿಸುವ ಹಾಗೂ ಸಾಫ್ಟ್ ಹ್ಯಾಂಡ್ ಮೂಲಕ ಆಡುವ ಆಟಗಾರನನ್ನು ನಾನು ಇಷ್ಟಪಡುತ್ತೇನೆ. ನನ್ನ ಜೀವನದಲ್ಲಿ ನಾನು ಬೌಲ್ ಮಾಡಿದ ಅತ್ಯಂತ ಕಠಿಣ ಬ್ಯಾಟ್ಸ್ಮನ್ಗಳಲ್ಲಿ ಸಚಿನ್ ಒಬ್ಬರು. ಅವರು ಯಾವಾಗಲೂ ಸ್ಟ್ರೈಟ್ಲೈನ್ನಲ್ಲಿ ಹೊಡೆಯುತ್ತಿದ್ದರು ಎಂದು ನಾಸೀನ್ ಹೇಳುತ್ತಾರೆ.
ಭಾರತ ತಂಡದ ಮಾಜಿ ನಾಯಕ ಗಂಗೂಲಿ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿರುವ ನಾಸಿರ್ ಹುಸೇನ್, ಭಾರತ ತಂಡವನ್ನು ಕಠಿಣ ತಂಡವಾಗಿಸಿದ್ದು ಗಂಗೂಲಿ. ನಾನು ಅವರ ಅತಿದೊಡ್ಡ ಅಭಿಮಾನಿ. ಅವರ ವಿರುದ್ಧ ಆಡುವುದಕ್ಕೆ ಸದಾ ಖುಷಿಯಾಗುತ್ತಿತ್ತು. ನಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯ ನನ್ನ ವೃತ್ತಿ ಜೀವನದಲ್ಲಿ ಆಡಿದ ಅತ್ಯಂತ ಪ್ರಿಯವಾದ ಪಂದ್ಯ. ಆ ಪಂದ್ಯದಲ್ಲಿ ಗಂಗೂಲಿ ಟೀ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು ಕ್ರಿಕೆಟ್ನ ಒಂದು ಟ್ರೇಡ್ಮಾರ್ಕ್ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.