ETV Bharat / sports

ನಾವು ಕೆಲವು ಬಾರಿ ಭಾರತೀಯರ ಬಲೆಗೆ ಬಿದ್ದಿದ್ದೇವೆ: ಅಶ್ವಿನ್ ಬಗ್ಗೆ ಲಾಬುಶೇನ್ ಪ್ರತಿಕ್ರಿಯೆ - ಅಶ್ವಿನ್ ಬಗ್ಗೆ ಲಾಬುಶೇನ್ ಹೇಳಿಕೆ

ಭಾರತೀಯರು ತಮ್ಮ ಬೌಲಿಂಗ್‌ನಲ್ಲಿ ಬಹಳ ಶಿಸ್ತುಬದ್ಧರಾಗಿದ್ದಾರೆ ಮತ್ತು ಸ್ಪಿನ್ ಮತ್ತು ವೇಗ ಎರಡರಲ್ಲೂ ಒಂದು ಯೋಜನೆಯನ್ನು ರೂಪಿಸಿದ್ದಾರೆ ಎಂದು ಆಸೀಸ್ ಆಟಗಾರ ಮಾರ್ನಸ್ ಲಾಬುಶೇನ್ ಹೇಳಿದ್ದಾರೆ.

We have fallen into India's trap few times
ಅಶ್ವಿನ್ ಬಗ್ಗೆ ಲಾಬುಶೇನ್ ಪ್ರತಿಕ್ರಿಯೆ
author img

By

Published : Jan 1, 2021, 1:20 PM IST

ಮೆಲ್ಬೋರ್ನ್: ರವಿಚಂದ್ರನ್ ಅಶ್ವಿನ್ ನೇತೃತ್ವದ ಭಾರತೀಯ ಬೌಲರ್‌ಗಳು ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಬಲೆಗೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಸೀಸ್ ಆಟಗಾರ ಮಾರ್ನಸ್ ಲಾಬುಶೇನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರರಲ್ಲಿ 191, 195 ಮತ್ತು 200 ರನ್‌ಗಳಿಗೆ ಆಲೌಟ್ ಆಗಿದ್ದು, ಅಶ್ವಿನ್ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದುವರೆಗೂ ಸ್ಮಿತ್ ಅವ‌ರನ್ನು ಎರಡು ಬಾರಿ ಮತ್ತು ಲಾಬುಶೇನ್​ರನ್ನು ಒಂದು ಬಾರಿ ಔಟ್ ಮಾಡಿದ್ದಾರೆ.

"ಈ ಸರಣಿಗೂ ಮೊದಲು ನಾನು ಹಿಂದೆಂದೂ ಅಶ್ವಿನ್ ಅವ‌ರನ್ನು ಎದುರಿಸಿರಲಿಲ್ಲ. ಉತ್ತಮ ಬೌಲರ್ ಮತ್ತು ಉತ್ತಮ ಚಿಂತಕ ಎಂದು ಅಶ್ವಿನ್ ಅವರ ಅಂಕಿ -ಅಂಶಗಳು ಹೇಳುತ್ತಿವೆ" ಎಂದಿದ್ದಾರೆ.

"ಅಶ್ವಿನ್ ನಿಜವಾಗಿಯೂ ಮೊದಲೇ ಸಿದ್ದರಾಗಿ ಬರುತ್ತಾರೆ, ಅದಕ್ಕೆ ತಕ್ಕಂತೆ ಫೀಲ್ಡಿಂಗ್​ ಕೂಡ ನಿಲ್ಲಿಸಿಕೊಂಡು ವಂಚಕನಂತೆ ವಿಕೆಟ್ ಪಡೆಯುತ್ತಾರೆ. ನಾವು ಅವರ ಬಲೆಗೆ ಬಿದ್ದಿದ್ದೇವೆ" ಎಂದಿರುವ ಲಾಬುಶೇನ್ ವೇಗಿಗಳು ಮತ್ತು ಸ್ಪಿನ್ ಬೌಲರ್ ಇಬ್ಬರನ್ನೂ ಎದುರಿಸುವಲ್ಲಿ ಆಸ್ಟ್ರೇಲಿಯಾದ ಅಸಮರ್ಥತೆಯನ್ನು ಒಪ್ಪಿಕೊಂಡಿದ್ದಾರೆ.

ಓದಿ ಪಾಕ್ - ಕಿವೀಸ್ ಟೆಸ್ಟ್ ಸರಣಿ : ಗಾಯಳು ನೈಲ್​ ವ್ಯಾಗ್ನರ್ ಬದಲು ಮ್ಯಾಟ್ ಹೆನ್ರಿ ಕಣಕ್ಕೆ

ಮತ್ತೊಂದೆಡೆ, ಭಾರತೀಯ ಬೌಲಿಂಗ್ ದಾಳಿಯು ತನ್ನ ಯೋಜನೆಗಳನ್ನು ಪರಿಪೂರ್ಣವಾಗಿ ಸಾಧಿಸಿದೆ. ಎರಡೂ ಟೆಸ್ಟ್ ಪಂದ್ಯಗಳಲ್ಲಿ 200 ರನ್​ಗಳನ್ನು ದಾಟಲು ಆಸೀಸ್ ಅಟಗಾರರಿಗೆ ಅವಕಾಶ ನೀಡಲಿಲ್ಲ. ಭಾರತೀಯರು ತಮ್ಮ ಬೌಲಿಂಗ್‌ನಲ್ಲಿ ಬಹಳ ಶಿಸ್ತುಬದ್ಧರಾಗಿದ್ದಾರೆ ಮತ್ತು ಸ್ಪಿನ್ ಮತ್ತು ವೇಗ ಎರಡರಲ್ಲೂ ಒಂದು ಯೋಜನೆಯನ್ನು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.