ETV Bharat / sports

ಕುಂಬ್ಳೆ-ರಾಹುಲ್​ರನ್ನು ಬದಲಿಸುವುದಿಲ್ಲ, ಅವರೊಂದಿಗೆ 3 ವರ್ಷದ ಯೋಜನೆಯಿದೆ: ನೆಸ್​ ವಾಡಿಯಾ - ಕೆಎಲ್ ರಾಹುಲ್ ನಾಯಕತ್ವ

13ನೇ ಆವೃತ್ತಿಯ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪಯಣ ಏಳುಬೀಳಿನಿಂದ ಕೂಡಿತ್ತು. ಮೊದಲ 7 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಹುಲ್ ಪಡೆ ನಂತರ ಸತತ 5 ಪಂದ್ಯಗಳಲ್ಲಿ ಅದ್ಭುತ ಜಯ ಸಾಧಿಸಿತ್ತು. ಪ್ಲೇ ಆಫ್​ ಸನಿಹ ಬಂದಿತ್ತು. ಆದರೆ ನಿರ್ಣಾಯಕವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ
author img

By

Published : Nov 19, 2020, 6:41 PM IST

ನವದೆಹಲಿ: ಪದೇ ಪದೆ ಕೋಚ್​ ಮತ್ತು ನಾಯಕನನ್ನು ಬದಲಾಯಿಸುವ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡ ಈಗಾಗಲೇ ಸಾಕಷ್ಟು ಹೊಡೆತ ತಿಂದಿದೆ. ಹಾಗಾಗಿ ಪ್ರಸ್ತುತ ಕನ್ನಡಿಗರಾದ ಅನಿಲ್​ ಕುಂಬ್ಳೆ ಮತ್ತು ಕೆ.ಎಲ್.ರಾಹುಲ್​ ಜೊತೆ ಮೂರು ವರ್ಷಗಳ ಯೋಜನೆ ಹೊಂದಿದ್ದು, ಅವರೊಂದಿಗೆ ಮುಂದುವರಿಯಲಿದ್ದೇವೆ ಎಂದು ಪಂಜಾಬ್ ತಂಡದ ಸಹ ಮಾಲೀಕ ನೆಸ್​ ವಾಡಿಯಾ ತಿಳಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪಯಣ ಏಳುಬೀಳಿನಿಂದ ಕೂಡಿತ್ತು. ಮೊದಲ 7 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಹುಲ್ ಪಡೆ ನಂತರ ಸತತ 5 ಪಂದ್ಯಗಳಲ್ಲಿ ಅದ್ಭುತ ಜಯ ಸಾಧಿಸಿತ್ತು. ಪ್ಲೇ ಆಫ್​ ಸನಿಹ ಬಂದಿತ್ತು. ಆದರೆ ನಿರ್ಣಾಯಕವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ನೆಸ್​ ವಾಡಿಯಾ
ನೆಸ್​ ವಾಡಿಯಾ

ವಾಡಿಯಾ ಪ್ರಕಾರ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅಂಪೈರ್​ರಿಂದಾದ ಶಾರ್ಟ್ ರನ್ ಪ್ರಮಾದ ಅವರ ಪ್ಲೇ ಆಫ್​ ಕನಸನ್ನು ನುಚ್ಚುನೂರು ಮಾಡಿತು ಎಂದಿದ್ದಾರೆ. ಆದರೂ ರಾಹುಲ್ ನಾಯಕತ್ವ ಮತ್ತು ಕುಂಬ್ಳೆ ಅವರಂತಹ ತರಬೇತುದಾರರ ಸಂಯೋಜನೆಯಡಿಯಲ್ಲಿ ಮೊದಲ ವರ್ಷದಲ್ಲಿ ಅಗತ್ಯವಾದ ಸ್ಥಿರತೆಯನ್ನು ತೋರಿಸಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಹೊಸ ನಾಯಕ, ಹೊಸ ತಂಡ ಹಾಗೂ ಸಾಕಷ್ಟು ಹೊಸ ಮುಖಗಳು ಈ ಬಾರಿ ತಂಡದಲ್ಲಿದ್ದರು. ಆದರೆ ಇದು ಒಮ್ಮೊಮ್ಮೆ ಇದು ಕ್ಲಿಕ್​ ಆಗುತ್ತದೆ. ಕೆಲವೊಮ್ಮೆ ಆಗುವುದಿಲ್ಲ. ಮುಂದಿನ ಐಪಿಎಲ್​ಗೂ ಮುನ್ನ ಹರಾಜು ನಡೆಯಲಿದ್ದು, ಈ ಬಾರಿ ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವಿಭಾಗದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಿದ್ದೇವೆ ಎಂದು ವಾಡಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಂಬ್ಳೆ-ರಾಹುಲ್​ ನಾಯಕತ್ವದ ಭವಿಷ್ಯದ ಬಗ್ಗೆ ಮಾತನಾಡಿರುವ ಅವರು, ನಾವು ಕುಂಬ್ಳೆ ಜೊತೆಗೆ ಮೂರು ವರ್ಷದ ಯೋಜನೆಯನ್ನು ಹೊಂದಿದ್ದೇವೆ. ನಾವು ಈ ಸೀಸನ್​ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಸೋಲಿನಿಂದ ಪ್ಲೇ ಆಫ್​ ತಪ್ಪಿಸಿಕೊಂಡಿರುವುದ್ದೇವೆ. ಅವರಿಬ್ಬರು ತಂಡದಲ್ಲಿ ಮುಂದುವರೆಯಲಿದ್ದಾರೆ ಎಂದರು.

ಇನ್ನು ರಾಹುಲ್, ಗೇಲ್​, ಪೂರನ್​, ಶಮಿ, ಅಗರ್ವಾಲ್​ ಈ ಬಾರಿ ಉತ್ತಮ ಪ್ರದರ್ಶನ ತೋರಿರುವುದು ತಂಡಕ್ಕೆ ಬಹುದೊಡ್ಡ ಯಶಸ್ಸಾಗಿದೆ. ಹಾಗಾಗಿ ಮಧ್ಯಮ ಕ್ರಮಾಂಕ ಮತ್ತು ಡೆತ್​ ಬೌಲಿಂಗ್​ ಬಲಿಷ್ಠ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಕಾಟ್ರೆಲ್​ರನ್ನು ಗುರಿಯಾಗಿಸಿ, ಈ ಬಾರಿ ಹೆಚ್ಚು ಹಣ ಪಡೆದಿದ್ದ ಅಂತಾರಾಷ್ಟ್ರೀಯ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡದಿರವುದು ಕೂಡ ತಂಡದ ಹಿನ್ನಡೆಗೆ ಕಾರಣ ಎಂದಿದ್ದಾರೆ. ಜೊತೆಗೆ ಕ್ರಿಸ್​ ಗೇಲ್​ರನ್ನು ಮೊದಲಾರ್ಧದಲ್ಲಿ ಆಡಿಸದಿರುವುದು ಕೂಡ ಆಶ್ಚರ್ಯಕ್ಕೀಡಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.