ETV Bharat / sports

ನಮ್ಮ ಮಗುವನ್ನು ಸಾಮಾಜಿಕ ಜಾಲಾತಾಣದಿಂದ ದೂರವಿಡುತ್ತೇವೆ: ಅನುಷ್ಕಾ ಶರ್ಮಾ - virat first child

ಎರಡು ದಿನಗಳ ಹಿಂದೆಯಷ್ಟೇ ತಮ್ಮ ಬೇಬಿ ಬಂಪ್​ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಶೇರ್​ ಮಾಡಿಕೊಂಡಿದ್ದ ಅನುಷ್ಕಾ, ಇದೀಗ ಮತ್ತೊಂದು ವಿಶೇಷ ಸುದ್ದಿ ನೀಡಿದ್ದಾರೆ.

ಅನುಷ್ಕಾ ಶಾರ್ಮಾ - ವಿರಾಟ್​ ಕೊಹ್ಲಿ
ಅನುಷ್ಕಾ ಶಾರ್ಮಾ - ವಿರಾಟ್​ ಕೊಹ್ಲಿ
author img

By

Published : Dec 31, 2020, 9:31 PM IST

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮಗುವನ್ನು ಸಾಮಾಜಿಕ ಜಾಲತಾಣದಿಂದ ದೂರವಿಡುವುದಾಗಿ ಹೇಳಿಕೊಂಡಿದ್ದಾರೆ.

ಜನವರಿಯಲ್ಲಿ ಅನುಷ್ಕಾ ಶರ್ಮಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇದಕ್ಕಾಗಿಯೇ ಕೊಹ್ಲಿ ಆಸೀಸ್​ ವಿರುದ್ಧದ ಬಾರ್ಡರ್ ಗವಾಸ್ಕರ್​ ಸರಣಿಯಿಂದ ಹಿಂದೆ ಸರಿದು ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ತಮ್ಮ ಬೇಬಿ ಬಂಪ್​ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಶೇರ್​ ಮಾಡಿಕೊಂಡಿದ್ದ ಅನುಷ್ಕಾ, ಇದೀಗ ಮತ್ತೊಂದು ವಿಶೇಷ ಸುದ್ದಿ ನೀಡಿದ್ದಾರೆ.

"ನಾವು ನಮ್ಮ ಮಗುವನ್ನು ಸಾಮಾಜಿಕ ಜಾಲಾತಾಣದಿಂದ ದೂರ ಇಡುತ್ತೇವೆ. ಸಾರ್ವಜನಿಕ ಜೀವನದಲ್ಲಿ ನಮ್ಮ ಮಗುವನ್ನು ಬೆಳೆಸಲು ನಾವು ಬಯಸುವುದಿಲ್ಲ. ಅಲ್ಲದೇ ನಮ್ಮ ಮಗುವನ್ನೂ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ ಗೊಳಿಸುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ. ಏಕೆಂದರೆ ನಿಮ್ಮ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನಿಮಗೆ ಬಿಟ್ಟಿದ್ದ ಎಂದು ಅವರು ಹೇಳಿದ್ದಾರೆ.

ಹಾಗೆ ಮಾತು ಮುಂದುವರಿಸಿ ಯಾವುದೇ ಮಗುವನ್ನು ಇತರರಿಗಿಂತ ವಿಶೇಷವಾಗಿ ಬೆಳೆಸಬಾರದು. ವಯಸ್ಕರಿಗೆ ಇದನ್ನು ಎದುರಿಸಲು ಕಷ್ಟವೇ, ಆದರೂ ನಾವು ಇನ್ದನ್ನು ಅನುಸರಿಸಲು ಬಯಸಿದ್ದೇವೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.