ಸಾತಮ್ಟನ್: ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ 62 ರನ್ಗಳಿಂದ ಸೋಲುವ ಮೂಲಕ ವಿಶ್ವಕಪ್ನಲ್ಲಿ 7ನೇ ಸೋಲು ಕಂಡಿದೆ.
ಬಾಂಗ್ಲಾದೇಶ ನೀಡಿದ್ದ 263 ರನ್ಗಳನ್ನು ಬೆನ್ನತ್ತಿದ್ದ ಅಫ್ಘಾನಿಸ್ತಾನ 47 ಓವರ್ಗಳಲ್ಲಿ 200ರನ್ಗಳಿಗೆ ಆಲೌಟ್ ಆಗುವ ಮೂಲಕ 62ರನ್ಗಳಿಂದ ಸೋಲೊಪ್ಪಿಕೊಂಡಿತು.
ಮೊದಲ ವಿಕೆಟ್ಗೆ 49 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಪಡೆದಿದ್ದ ಅಫ್ಘನ್ ಆರಂಭಿಕರಾದ ರಹ್ಮರ್ ಶಾ(24) ಹಾಗೂ ಗುಲ್ಬದಿನ್ ನೈಬ್(47) ಪತನದ ನಂತರ ನಿರಂತವಾಗಿ ವಿಕೆಟ್ ಕಳೆದುಕೊಂಡಿತು. ಹಸ್ಮತ್ತುಲ್ಹಾ ಶಾಹಿದಿ 11, ಅಸ್ಘರ್ ಅಫ್ಘನ್ 20 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಭರವಸೆಯ ಬ್ಯಾಟ್ಸ್ಮನ್ ನಬಿ ಡಕೌಟ್ ಆಗಿ ನಿರಾಸೆ ಮೂಡಿಸಿದರು.
-
Bangladesh win for the third time in #CWC19!
— Cricket World Cup (@cricketworldcup) June 24, 2019 " class="align-text-top noRightClick twitterSection" data="
Not for the first time this tournament, Shakib Al Hasan is their star man 🌟 #CWC19 | #BANvAFG | #RiseOfTheTigers pic.twitter.com/qGULklaNj3
">Bangladesh win for the third time in #CWC19!
— Cricket World Cup (@cricketworldcup) June 24, 2019
Not for the first time this tournament, Shakib Al Hasan is their star man 🌟 #CWC19 | #BANvAFG | #RiseOfTheTigers pic.twitter.com/qGULklaNj3Bangladesh win for the third time in #CWC19!
— Cricket World Cup (@cricketworldcup) June 24, 2019
Not for the first time this tournament, Shakib Al Hasan is their star man 🌟 #CWC19 | #BANvAFG | #RiseOfTheTigers pic.twitter.com/qGULklaNj3
ಶಕಿಬ್(29/5) ದಾಳಿಗೆ ಉತ್ತರಿಸಲಾಗದೆ ಅಫ್ಘಾನಿಸ್ತಾನದ ಬ್ಯಾಟ್ಸ್ಮಮನ್ಗಳು ವಿಕೆಟ್ ಒಪ್ಪಿಸುತ್ತಿದ್ದರೆ, ಮತ್ತೊಂದು ಕಡೆ ಇನ್ನಿಂಗ್ಸ್ನ ಕೊನೆಯವರೆಗೂ ಔಟಾಗದೆ ಉಳಿದ ಸಮೀವುಲ್ಹಾ ಶೆನ್ವಾರಿ 53 ಎಸೆತಗಳಲ್ಲಿ 49 ರನ್ಗಳಿಸಿದರು. ನಜೀಬುಲ್ಹಾ 23 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ರಶೀದ್ 2, ದವ್ಲಾತ್ ಜಾಡ್ರನ್ ಹಾಗೂ ಮುಜೀಬ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ 47 ಓವರ್ಗಳಲ್ಲಿ 200 ರನ್ಗಳಿಗೆ ಅಫ್ಘನ್ ಇನ್ನಿಂಗ್ಸ್ಗೆ ತೆರೆ ಎಳೆದರು.
-
Shakib's figures today were the best ever recorded by a Bangladeshi player in a World Cup match 🙌 #CWC19 | #RiseOfTheTigers pic.twitter.com/jv7LKmj93Q
— Cricket World Cup (@cricketworldcup) June 24, 2019 " class="align-text-top noRightClick twitterSection" data="
">Shakib's figures today were the best ever recorded by a Bangladeshi player in a World Cup match 🙌 #CWC19 | #RiseOfTheTigers pic.twitter.com/jv7LKmj93Q
— Cricket World Cup (@cricketworldcup) June 24, 2019Shakib's figures today were the best ever recorded by a Bangladeshi player in a World Cup match 🙌 #CWC19 | #RiseOfTheTigers pic.twitter.com/jv7LKmj93Q
— Cricket World Cup (@cricketworldcup) June 24, 2019
ಬ್ಯಾಟಿಂಗ್ನಲ್ಲಿ 51 ರನ್ಗಳಿಸಿದ್ದ ಶಕಿಬ್ ಅಲ್ ಹಸನ್ 29 ರನ್ಗಳಿಗೆ 5 ವಿಕೆಟ್ ಪಡೆದರು. ಇವರಿಗೆ ಬೆಂಬಲ ನೀಡಿದ ಮುಸ್ತಫಿಜುರ್ ರಹಮಾನ್ 2, ಸೈಫುದ್ದೀನ್ ಹಾಗೂ ಮೊಸದ್ದೆಕ್ ಹುಸೈನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನ ಮೂಲಕ ಬಾಂಗ್ಲಾದೇಶ 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಜತೆಗೆ ಸೆಮಿಫೈನಲ್ಗೆ ಲಗ್ಗೆಯಿಡುವ ಆಸೆ ಜೀವಂತವಾಗಿಟ್ಟುಕೊಂಡಿದೆ.