ಹೈದರಾಬಾದ್: ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿ ಪಡೆ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿದ್ದು, ಸೆಮಿಫೈನಲ್ ಲಗ್ಗೆ ಹಾಕುವುದು ಬಹುತೇಕ ಖಚಿತವಾಗಿದೆ. ಇದರ ಮಧ್ಯೆ ಪಾಕಿಸ್ತಾನ ಸ್ಥಿತಿ ಹೀನಾಯವಾಗಿದ್ದು,ಇದನ್ನ ಅರಿತುಕೊಂಡಿರುವ ಶೋಯೆಬ್ ಅಖ್ತರ್ ಟೀಂ ಇಂಡಿಯಾ ಬಳಿ ಮನವಿ ಮಾಡಿಕೊಂಡಿದ್ದಾರೆ.
ಪಾಕಿಸ್ತಾನ ವಿಶ್ವಕಪ್ನಲ್ಲಿ ಈಗಾಗಲೇ ತಾನಾಡಿರುವ 7 ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿ, ಮತ್ತೆ ಮೂರು ಪಂದ್ಯ ಸೋತು, ಒಂದರಲ್ಲಿ ಡ್ರಾ ಸಾಧಿಸಿ 7ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ನಾಲ್ಕನೇ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಹಾಕಬೇಕಾದರೆ ಪಾಕ್ ಮುಂದಿನ ಬಾಂಗ್ಲಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಬೇಕಾಗಿದೆ. ಇದರ ಜತೆಗೆ ಭಾರತ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಸಿದಾಗ ಮಾತ್ರ ಇದು ಸಾಧ್ಯ. ಹೀಗಾಗಿ ಅಖ್ತರ್ ಟೀಂ ಇಂಡಿಯಾ ಬಳಿ ಮನವಿ ಮಾಡಿದ್ದಾರೆ.
ಅಖ್ತರ್ ವಿಡಿಯೋದಲ್ಲಿ ಹೇಳಿದ್ದೇನು?
ಮೊದಲು ಸೋಲು ಕಂಡಿದ್ದ ಪಾಕಿಸ್ತಾನ ಇದೀಗ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದೆ. ಹೀಗಾಗಿ ಭಾರತ ಸಹಾಯ ಮಾಡಬೇಕಾಗಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೀವೂ ಗೆಲುವು ದಾಖಲು ಮಾಡಿ. ಮುಂದಿನ ಎರಡು ಪಂದ್ಯಗಳಲ್ಲಿ ನಮ್ಮ ತಂಡ ಗೆಲುವು ಪಡೆದುಕೊಂಡು ಸೆಮಿಫೈನಲ್ಗೆ ಬರಲಿದೆ ಎಂದಿದ್ದಾರೆ. ಇದರ ಜತೆಗೆ ಸೆಮಿಫೈನಲ್ನಲ್ಲಿ ನಾವು ನಿಮ್ಮನ್ನ ಸೋಲಿಸಲಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಪಾಕ್ ಜೂನ್ 29ರಂದು ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಸೆಣಸಾಟ ನಡೆಸಲಿದೆ.
- " class="align-text-top noRightClick twitterSection" data="">