ಲಂಡನ್:ಆಸ್ಟ್ರೇಲಿಯಾ ಮೊದಲ ಆ್ಶಶಸ್ ಟೆಸ್ಟ್ ಗೆದ್ದು ಉತ್ತಮ ಆರಂಭ ಪಡೆದರು, ಎರಡನೇ ಟೆಸ್ಟ್ನಲ್ಲಿ ಸೋಲಿನ ಸುಳಿಗೆ ಸಿಲುಕಿತ್ತಾದರೂ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳನ್ನು ಕಾಡುತ್ತಿರುವ ಆರ್ಚರ್ ರನ್ ಬಿಟ್ಟುಕೊಡದೆ, ವಿಕೆಟ್ ಕೀಳುವುದರ ಜೊತೆಗೆ ಕಾಂಗರೂಗಳಿಗೆ ಬೌನ್ಸರ್ ಭಯ ಹುಟ್ಟಿಸುತ್ತಿದ್ದಾರೆ.
ಶನಿವಾರ ಆರ್ಚರ್ ಬೌನ್ಸರ್ ತಗುಲಿ ಗಂಭೀರ ಗಾಯಗೊಂಡ ಸ್ಮಿತ್ ಬದಲಿಗೆ ತಂಡ ಸೇರಿಕೊಂಡಿದ್ದ ಮಾರ್ನಸ್ ಲಾಬುಶೇನ್ ತಾವೆದುರಿಸಿದ ಜೋಫ್ರಾ ಆರ್ಚರ್ರ ಎರಡನೇ ಎಸೆತದಲ್ಲಿ ಹೆಲ್ಮೆಟ್ಗೆ ಬಡಿಸಿಕೊಂಡು ಬಿದ್ದಿದ್ದರು. ಈ ಘಟನೆಯನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಆರ್ಚರ್ ಬೌಲಿಂಗ್ಗೆ ಆಡುವುದಕ್ಕಿಂದ, ಅವರು ಬೌಲಿಂಗ್ ಮಾಡುವುದನ್ನು ನೋಡುವುದೇ ಹೆಚ್ಚು ಭಯಂಕರವಾಗಿರುತ್ತದೆ ಎಂದು ತಿಳಿಸಿದ್ದಾರೆ.
-
Jofra Archer breaks the helmet of substitute marnus labschagne... terrific bowling🔥🔥🔥 #Ashes2019 #JofraArcher #ENGvAUS pic.twitter.com/etYXM4LjiU
— Ⓥⓘⓚⓐⓢⓗ😍🙏 (@vikash11497) August 18, 2019 " class="align-text-top noRightClick twitterSection" data="
">Jofra Archer breaks the helmet of substitute marnus labschagne... terrific bowling🔥🔥🔥 #Ashes2019 #JofraArcher #ENGvAUS pic.twitter.com/etYXM4LjiU
— Ⓥⓘⓚⓐⓢⓗ😍🙏 (@vikash11497) August 18, 2019Jofra Archer breaks the helmet of substitute marnus labschagne... terrific bowling🔥🔥🔥 #Ashes2019 #JofraArcher #ENGvAUS pic.twitter.com/etYXM4LjiU
— Ⓥⓘⓚⓐⓢⓗ😍🙏 (@vikash11497) August 18, 2019
ಕ್ರೀಸ್ಗೆ ಆಗಮಿಸಿದ ಹೊಸ ಬ್ಯಾಟ್ಸ್ಮನ್ಗಳು ವೇಗಿಗಳನ್ನು ಎದುರಿಸಿಬೇಕಾದರೆ ಇಂತಹ ಸನ್ನಿವೇಶ ಸಾಮಾನ್ಯವಾಗಿದೆ. ಆದರೆ, ಈ ಘಟನೆ ನಂತರ ಯಾವುದೇ ಬೌಲರ್‌ಗಳನ್ನು ಎದುರಿಸುವ ವಿಶ್ವಾಸ ಬೆಳೆಯುತ್ತದೆ. ಮುಂದಿನ ಪಂದ್ಯಗಳಲ್ಲಿ ಎಲ್ಲಾ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮೊದಲ ಟೆಸ್ಟ್ನಲ್ಲಿ ಅದ್ದೂರಿಯಾಗಿ ಬ್ಯಾಟಿಂಗ್ ನಡೆಸಿದ್ದ ಸ್ಟಿವ್ ಸ್ಮಿತ್ ಎರಡೂ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಎರಡನೇ ಟೆಸ್ಟ್ನಲ್ಲಿ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಬೌನ್ಸರ್ ತಗುಲಿ ಗಂಭೀರ ಗಾಯಗೊಂಡು ಎರಡನೆ ಇನ್ನಿಂಗ್ಸ್ನಿಂದ ಹೊರಬಿದ್ದಿದ್ದರು. ಇವರ ಬದಲು ಕನ್ಕ್ಯುಷನ್ ಸಬ್ಸ್ಟಿಟ್ಯೂಟ್ ಆಗಿ ಮಾರ್ನಸ್ ಲಾಬುಶೇನ್ ಎರಡನೇ ಇನ್ನಿಂಗ್ಸ್ನಲ್ಲಿ ಆಡಿದ್ದರು.
-
That deadly bouncer from #JofraArcher to #stevesmith49 #Ashes2019 Battle between bat and bowl@englandcricket @cricketcomau pic.twitter.com/CDUmt8TLL5
— Ali Sher (@AliSherChohan) August 18, 2019 " class="align-text-top noRightClick twitterSection" data="
">That deadly bouncer from #JofraArcher to #stevesmith49 #Ashes2019 Battle between bat and bowl@englandcricket @cricketcomau pic.twitter.com/CDUmt8TLL5
— Ali Sher (@AliSherChohan) August 18, 2019That deadly bouncer from #JofraArcher to #stevesmith49 #Ashes2019 Battle between bat and bowl@englandcricket @cricketcomau pic.twitter.com/CDUmt8TLL5
— Ali Sher (@AliSherChohan) August 18, 2019
ಸಬ್ಸ್ಟಿಟ್ಯೂಟ್ ಆಗಿ ತಂಡ ಸೇರಿಕೊಂಡು ಬ್ಯಾಟಿಂಗ್ ನಡೆಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂದ ಶ್ರೇಯಕ್ಕೆ ಪಾತ್ರರಾದ ಮಾರ್ನಸ್ ಲಾಬುಶೇನ್ ಆರ್ಚರ್ರಿಂದ ಪೆಟ್ಟು ತಿಂದರೂ, ಧೃತಿಗೆಡದೆ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿದ್ದರು. ಇವರ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಸೋಲಿನ ಆಘಾತವನ್ನು ತಪ್ಪಿಸಿಕೊಂಡಿತು. ಅವರು ಔಟಾಗುವ ಮುನ್ನ 100 ಎಸೆತಗಳನ್ನು ಎದುರಿಸಿದ 59 ರನ್ಗಳಿಸಿದ್ದರು. ಇವರ ಆಟದ ನೆರವಿನಿಂದ ಆಸೀಸ್ 44 ಓವರ್ಗಳನ್ನು ಯಶಸ್ವಿಯಾಗಿ ಎದುರಿಸಿ ಪಂದ್ಯವನ್ನು ಡ್ರಾಗೊಳ್ಳುವಂತೆ ಮಾಡಿತು.