ಪುಣೆ : ಭಾರತದೆದುರು 2ನೇ ಏಕದಿನ ಪಂದ್ಯದಲ್ಲಿ ವಿಧ್ವಂಶಕ ಬ್ಯಾಟಿಂಗ್ ನಡೆಸಿ ಭಾರತದ ಬೌಲರ್ಗಳ ದಾಳಿಯನ್ನು ಪುಡಿಗಟ್ಟಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುಂದಿನ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಇದೇ ಪ್ರದರ್ಶನ ಮುಂದುವರಿಸಿಲಿದ್ದಾರೆ ಎಂಬ ಭರವಸೆಯಿದೆ ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಿಳಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಬೆನ್ಸ್ಟೋಕ್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅವರು ಕೇವಲ 52 ಎಸೆತಗಳಲ್ಲಿ 4 ಬೌಂಡರಿ ಮತ್ತು ಬರೋಬ್ಬರಿ 10 ಸಿಕ್ಸರ್ ಸಿಡಿಸುವ ಮೂಲಕ 99 ರನ್ ಗಳಿಸಿದ್ದರು. ಅವರು ಒಂದೇ ಇನ್ನಿಂಗ್ಸ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿ ಇಂಗ್ಲೆಂಡ್ನ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ಜೋ ರೂಟ್ ಅನುಪಸ್ಥಿತಿಯಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ಬೆನ್ ಸ್ಟೋಕ್ಸ್ 2ನೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತೀಯ ಬೌಲರ್ಗಳನ್ನು ಹೈರಾಣಾಗಿಸಿದ್ದರು. ನಾಯಕ್ ಬಟ್ಲರ್ ಪ್ರಕಾರ ಇಂಗ್ಲಿಷ್ ಆಲ್ರೌಂಡರ್ ಐಪಿಎಲ್ನಲ್ಲೂ ಬೌಲರ್ಗಳನ್ನು ಇದೇ ರೀತಿ ಬೌಲಿಂಗ್ ಮಾಡಲು ಹೆದರುವಂತೆ ಮಾಡಲಿದ್ದಾರೆಂಬ ಭರವಸೆಯಲ್ಲಿರುವುದಾಗಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ಅತೀ ಸುರಕ್ಷಿತ ಆಟ 2023ರ ವಿಶ್ವಕಪ್ನಲ್ಲಿ ಭಾರತಕ್ಕೆ ಮುಳುವಾಗುತ್ತದೆ : ವಾನ್-'ರ್ನ್'
"ಅವರು (ಸ್ಟೋಕ್ಸ್) ಬೌಲಿಂಗ್ ಮಾಡುವವರನ್ನು ಬೆದರಿಸುವ ವ್ಯಕ್ತಿ, ನಾಳಿನ ಪಂದ್ಯ ಮತ್ತು ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವೂ ಇದೇ ಆಟ ಮುಂದುವರಿಯಬಹುದು ಎಂದು ಸರಣಿ ನಿರ್ಧರಿಸುವ ಕೊನೆಯ ಪಂದ್ಯಕ್ಕೂ ಮೊದಲು ನಡೆದ ಗೋಷ್ಠಿಯಲ್ಲಿ ಬಟ್ಲರ್ ಹೇಳಿದ್ದಾರೆ.
ಸ್ಟೋಕ್ಸ್ ಕಳೆದ ಕೆಲವು ವರ್ಷಗಳಿಂದ ಆಟಗಾರನಾಗಿ ವಿಕಸನಗೊಳ್ಳುತ್ತಿರುವ ರೀತಿ ಮತ್ತು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪರಿ ತಮ್ಮನ್ನು ಸಾಕಷ್ಟು ಪ್ರಭಾವಿತನನ್ನಾಗಿ ಮಾಡಿದೆ ಎಂದು ಇಂಗ್ಲೆಂಡ್ ಹಂಗಾಮಿ ಕಪ್ತಾನ ತಿಳಿಸಿದ್ದಾರೆ.
"ಸ್ಟೋಕ್ಸ್ ಇಂತಹದೇ ಕೆಲವು ಇನ್ನಿಂಗ್ಸ್ಗಳನ್ನು ಹೊಂದಿದ್ದಾರೆ. ಅದರಲ್ಲಿ ವಿಶ್ವಕಪ್ ಫೈನಲ್ಸ್ನ(80+) ಇನ್ನಿಂಗ್ಸ್ ಉತ್ತಮವಾಗಿದೆ. ಆದರೆ, ನಮೆಗೆಲ್ಲಾ ಬೆನ್ ಅವರ ಸಾಮರ್ಥ್ಯ ತಿಳಿದಿದೆ. ಅವರ ಬ್ಯಾಟಿಂಗ್ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸುಧಾರಣೆಯಾಗುತ್ತಾ ಬರುತ್ತಿದೆ ಎಂದು ನಾನು ಭಾವಿಸುತ್ತೇನೆ.
ಇದು ಮುಂದೆ ಇನ್ನು ಉನ್ನತ ಹಂತಕ್ಕೆ ಹೋಗಲಿದೆ ಮತ್ತು ಮೂರು ಮಾದರಿಯ ಕ್ರಿಕೆಟ್ನಲ್ಲೂ ನಾವು ಅದನ್ನು ನೋಡಬಹುದಾಗಿದೆ" ಎಂದು ಬಟ್ಲರ್ ತಮ್ಮ ಸಹ ಆಟಗಾರನನ್ನು ಗುಣಗಾನ ಮಾಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯ ಭಾನುವಾರ ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿ ವಶಪಡಿಸಿಕೊಳ್ಳಲು ಎರಡು ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಲಿದೆ.
ಇದನ್ನು ಓದಿ:ಪಂದ್ಯ ಗೆಲ್ಲುವುದಕ್ಕಾಗಿ ಹೆಚ್ಚು ಬೌಂಡರಿ ಹೊಡೆಯುವುದು ಈಗಿನ ಟ್ರೆಂಡ್ : ಬೈರ್ಸ್ಟೋವ್