ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ನ ನಿಷೇಧ ಶಿಕ್ಷೆಯಿಂದ ಹೊರಬಂದಿರುವ ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್ ದೇಶಿ ಕ್ರಿಕೆಟ್ಗೆ ಮರಳಿದ್ದಾರೆ. ಜನವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇರಳ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುವಾಗ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ಆಜೀವ ನಿಷೇಧಕ್ಕೊಳಗಾಗಿದ್ದರು. ನಂತರ ಅವರ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿತ್ತು. ಕಳೆದ ಸೆಪ್ಟೆಂಬರ್ನಲ್ಲಿ ಅವರ ನಿಷೇಧ ಅಂತ್ಯಗೊಂಡಿದ್ದು, ಇದೀಗ ಕ್ರಿಕೆಟ್ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲಿದ್ದಾರೆ.
-
“There is nothing stronger than a broken man ,who has rebuilt himself..” Thnks a lot for all the Supoort nd love ..#Gods grace #humbled #cricket #keralacricketassociation #bcci #grateful #respect #love #bestisyettocome pic.twitter.com/U0xyEg9XHu
— Sreesanth (@sreesanth36) December 30, 2020 " class="align-text-top noRightClick twitterSection" data="
">“There is nothing stronger than a broken man ,who has rebuilt himself..” Thnks a lot for all the Supoort nd love ..#Gods grace #humbled #cricket #keralacricketassociation #bcci #grateful #respect #love #bestisyettocome pic.twitter.com/U0xyEg9XHu
— Sreesanth (@sreesanth36) December 30, 2020“There is nothing stronger than a broken man ,who has rebuilt himself..” Thnks a lot for all the Supoort nd love ..#Gods grace #humbled #cricket #keralacricketassociation #bcci #grateful #respect #love #bestisyettocome pic.twitter.com/U0xyEg9XHu
— Sreesanth (@sreesanth36) December 30, 2020
"ತನ್ನನ್ನು ತಾನೆ ಪುನರ್ ನಿರ್ಮಿಸಿಕೊಳ್ಳುವ ಮನನೊಂದ ಮನುಷ್ಯನಿಗಿಂತ ಬಲಶಾಲಿ ಬೇರೇನೂ ಇರುವುದಿಲ್ಲ... ನನಗೆ ಕಠಿಣ ಸಂದರ್ಭದಲ್ಲಿ ಬೆಂಬಲ ಮತ್ತು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು." ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.
ಕೇರಳ ಕ್ರಿಕೆಟ್ ಅಸೋಸಿಯೇಷನ್ ಘೋಷಿಸಿರುವ ತಂಡದಲ್ಲಿ ಸಂಜು ಸಾಮ್ಸನ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸಚಿನ್ ಬೇಬಿ ಉಪನಾಯಕನಾಗಿದ್ದಾರೆ. ಇದೇ ತಂಡದಲ್ಲಿ ಶ್ರೀಶಾಂತ್, ರಾಬಿನ್ ಉತ್ತಪ್ಪ, ಬಾಸಿಲ್ ತಂಪಿ ಅವರಂಥ ಅನುಭವಿಕ ಆಟಗಾರರು ಇದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡ
ಸಂಜು ಸಾಮ್ಸನ್ (ನಾಯಕ), ಸಚಿನ್ ಬೇಬಿ (ಉಪನಾಯಕ), ಜಲಜ್ ಸಕ್ಷೇನಾ, ರಾಬಿನ್ ಉತ್ತಪ್ಪ, ವಿಷ್ಣು ವಿನೋದ್, ಸಲ್ಮಾನ್ ನಿಝಾರ್, ಬಾಸಿಲ್ ತಂಪಿ, ಎಸ್. ಶ್ರೀಶಾಂತ್, ನಿಧೀಶ್ ಎಂ.ಡಿ, ಆಸಿಫ್ ಕೆ.ಎಂ, ಅಕ್ಷಯ್ ಚಂದ್ರನ್, ಮಿಧುನ್ ಪಿಕೆ, ಅಭಿಷೇಕ್ ಮೋಹನ್ ಎಸ್ಎಲ್, ವಿನೂಪ್ ಎಸ್ ಮನೋಹರನ್, ಮೊಹಮ್ಮದ್ ಅಜರುದ್ದೀನ್ ಎಂ, ರೋಹನ್ ಎಸ್ ಕಣ್ಣುಮ್ಮಲ್, ಮಿಧುನ್ ಎಸ್, ವತ್ಸಲ್ ಗೋವಿಂದ್ ಶರ್ಮಾ, ರೋಜಿತ್ ಕೆಜಿ, ಶ್ರೀರೂಪ್ ಎಂ.ಪಿ.