ETV Bharat / sports

ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಮೊದಲ ದಿನವೇ ಪಿಚ್​ ಟರ್ನಿಂಗ್ ಕಾಣಲಿದೆ: ಖಚಿತಪಡಿಸಿದ ರೋಹಿತ್​

ಅದ್ಭುತ ಶತಕದ ಮೂಲಕ ಎರಡನೇ ಟೆಸ್ಟ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೋಹಿತ್ ಶರ್ಮಾ, ಪಿಚ್‌ಗಳ ಸುತ್ತ ಈ ರೀತಿ ಚರ್ಚೆ ನಡೆಯುತ್ತಿರುವುದು ಹೇಗೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ
author img

By

Published : Feb 22, 2021, 2:17 PM IST

ಅಹ್ಮದಾಬಾದ್​: ಭಾರತದಲ್ಲಿನ ಸ್ಪಿನ್​ ಸ್ನೇಹಿ ಪಿಚ್​ಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ 3ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಮೊದಲ ದಿನವೇ ಟರ್ನಿಂಗ್ ಪಿಚ್​ ನಿರೀಕ್ಷೆ ಮಾಡಬಹುದು ಎಂದು ಖಚಿತಪಡಿಸಿದ್ದಾರೆ. ಅಹ್ಮದಾಬಾದ್​ನ ಮೊಟೆರಾದಲ್ಲಿ ನವೀಕರಣಗೊಂಡ ನಂತರ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ.

ಅದ್ಭುತ ಶತಕದ ಮೂಲಕ ಎರಡನೇ ಟೆಸ್ಟ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೋಹಿತ್ ಶರ್ಮಾ, ಪಿಚ್‌ಗಳ ಸುತ್ತ ಈ ರೀತಿ ಚರ್ಚೆ ನಡೆಯುತ್ತಿರುವುದು ಹೇಗೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

"ದೀರ್ಘ ಸಮಯದಿಂದಲೂ ಭಾರತದಲ್ಲಿ ಈ ರೀತಿಯ ಪಿಚ್​ಗಳನ್ನು ತಯಾರು ಮಾಡಲಾಗುತ್ತಿದೆ. ಹಾಗಾಗಿ ಇದರಲ್ಲಿ ಯಾವುದೇ ಬದಲಾವಣೆ ಕಂಡು ಬಂದಿದೆ ಅಥವಾ ಬದಲಾವಣೆ ಬೇಕು ಎಂದು ನಾನು ಭಾವಿಸುವುದಿಲ್ಲ. ಪ್ರತಿಯೊಬ್ಬರೂ ತವರಿನ ಲಾಭ ಪಡೆಯಲು ಬಯಸುತ್ತಾರೆ. ನಾವು ವಿದೇಶಗಳಿಗೆ ಹೋದ ಸಂದರ್ಭದಲ್ಲೂ ಇದೇ ರೀತಿ ಅನುಭವವಾಗಿದೆ. ಅಲ್ಲಿ ನಮ್ಮ ಬಗ್ಗೆ ಯಾರೂ ಅಲೋಚಿಸುವುದಿಲ್ಲ. ಹಾಗಾಗಿ ನಾವೇಕೆ ಬೇರೆಯವರ ಬಗ್ಗೆ ಆಲೋಚನೆ ಮಾಡಬೇಕು? ಎಂದು ಅವರು ತಿಳಿಸಿದ್ದಾರೆ.

ರೋಹಿತ್ ಶರ್ಮಾ

ಮೊಟೆರಾ ಮೈದಾನದ ಬಗ್ಗೆ ಮಾತನಾಡಿದ ಹಿಟ್​ಮ್ಯಾನ್, ಇದೊಂದು ಅತ್ಯುತ್ತಮ ಸ್ಟೇಡಿಯಂ. ಇಲ್ಲಿ ಪ್ರೇಕ್ಷಕರನ್ನು ಬರುತ್ತಾರೆ ಎಂದು ತಿಳಿದಾಗ ನನಗೆ ಕಾಯುವುದಕ್ಕೆ ಆಗುತ್ತಿಲ್ಲ. ಪಿಂಕ್ ಬಾಲ್​ ಟೆಸ್ಟ್​ಗೆ ಕ್ರೀಡಾಂಗಣದ ಸುತ್ತಲೂ ಅಭಿಮಾನಿಗಳು ಆಗಮಿಸಿ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಇದು ಅದ್ಭುತವೆನಿಸಲಿದೆ. ಇನ್ನು ಪಿಚ್​ ಬಗ್ಗೆ ಸಂಬಂಧಿಸಿದಂತೆ ನಿಮಗೆ ತಿಳಿದಿದೆ. ಇದು ಆರಂಭಿಕ ದಿನಗಳಾಗಿರುವುದಿಂದ ಇದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಆದ್ರೂ ಇಲ್ಲಿ ಯಾವುದೇ ಬದಲಾಣೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಎರಡನೇ ಟೆಸ್ಟ್​ ಪಂದ್ಯವನ್ನಾಡಿದ ಚೆಪಾಕ್​ನಂತೆಯೇ ಈ ಪಿಚ್​ಕೂಡ ಹೆಚ್ಚು ಅಥವಾ ಕಡಿಮೆ ಹಾಗೆ ಇರಲಿದೆ. ಇಲ್ಲಿ ಚೆಂಡು ಉತ್ತಮವಾಗಿ ತಿರುವು ಪಡೆಯಲಿದೆ. ಹೌದು, ನಾವು ಅದೇ ಪ್ರಕಾರವಾಗಿ ಪಿಚ್​ ತಯಾರು ಮಾಡುತ್ತಿದ್ದೇವೆ. ಆದರೆ, ಟೆಸ್ಟ್​ ಆರಂಭವಾದ ನಂತರ ಪಿಚ್​ ಹೇಗೆ ವರ್ತಿಸಲಿದೆ ಎಂದು ಕಾದು ನೋಡೋಣ ಎಂದು ಹಿಟ್​ಮ್ಯಾನ್​ ಹೇಳಿದ್ದಾರೆ.

2014ರ ನಂತರ ಇದೇ ಮೊದಲ ಬಾರಿಗೆ ಸರ್ದಾರ್​ ಪಟೇಲ್ ಸ್ಟೇಡಿಯಂ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ನವೀಕರಿಸಲಾಗಿರುವ ಈ ಸ್ಟೇಡಿಯಂ ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಆಗಿದ್ದು, ಇದರಲ್ಲಿ 1,10,000 ಮಂದಿ ಕುಳಿತು ಕ್ರಿಕೆಟ್​ ವೀಕ್ಷಣೆ ಮಾಡಬಹುದಾಗಿದೆ.

ಇದನ್ನು ಓದಿ:ತವರಿನ ತಂಡ ತನಗೆ ಬೇಕಾದಂತೆ ಪಿಚ್​ ಸಿದ್ಧಪಡಿಸಿಕೊಳ್ಳುವುದು ಹೊಸದೇನಲ್ಲ; ರೋಹಿತ್​ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.