ETV Bharat / sports

ಮ್ಯಾಕ್ಸ್​ವೆಲ್ ಸಿಕ್ಸ್​ಗೆ ಮುರಿದ ಕುರ್ಚಿ: ಹರಾಜಿಗೆ ಇಡಲು ನಿರ್ಧಾರ - Glenn Maxwell's six breaks chair in stands

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬಾರಿಸಿದ ಸಿಕ್ಸರ್​ನಿಂದ ಸ್ಟೇಡಿಯಂನಲ್ಲಿದ್ದ ಕುರ್ಚಿ ಮುರಿದಿದೆ. ಇನ್ನು ಮುರಿದ ಕುರ್ಚಿಯನ್ನು ಹರಾಜು ಮಾಡಿ, ಆ ಹಣವನ್ನು ಮನೆಯಿಲ್ಲದ ಜನರಿಗೆ ಬಳಸಲಾಗುವುದು ಎಂದು ಕ್ರೀಡಾಂಗಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇನ್ ಹಾರ್ಮನ್ ತಿಳಿಸಿದ್ದಾರೆ.

Glenn Maxwell
ಗ್ಲೆನ್ ಮ್ಯಾಕ್ಸ್‌ವೆಲ್
author img

By

Published : Mar 4, 2021, 2:16 PM IST

ಹೈದರಾಬಾದ್: ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಇನ್ನು ಇವರು ನ್ಯೂಜಿಲ್ಯಾಂಡ್​ ವಿರುದ್ಧದ ಟಿ 20 ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ 70 ರನ್ ಗಳಿಸಿ ಮತ್ತೆ ಮಿಂಚಿದ್ದಾರೆ. ಇನ್ನು ಮ್ಯಾಕ್ಸ್​ವೆಲ್​ ಬಾರಿಸಿದ ಚೆಂಡು ಸ್ಟೇಡಿಯಂನಲ್ಲಿದ್ದ ಕುರ್ಚಿಗೆ ತಗುಲಿದ್ದು, ಅದು ಮುರಿದಿದೆ.

ಮ್ಯಾಕ್ಸ್‌ವೆಲ್ ಎಂಟು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿ 70 ರನ್ ಗಳಿಸಿದ್ದರು. ನ್ಯೂಜಿಲ್ಯಾಂಡ್​ನ ಆಲ್‌ರೌಂಡರ್ ಜಿಮ್ಮಿ ನೀಶಮ್ ಎಸೆತದ 16ನೇ ಓವರ್‌ನ ಎರಡನೇ ಎಸೆತದಲ್ಲಿ ಮ್ಯಾಕ್ಸ್​ವೆಲ್​ ಬೃಹತ್ ಸಿಕ್ಸರ್‌ ಬಾರಿಸಿದ್ದಾರೆ. ಆ ಚೆಂಡು ಸ್ಟ್ಯಾಂಡ್‌ನಲ್ಲಿದ್ದ ಕುರ್ಚಿ ಮುರಿಯಲು ಕಾರಣವಾಗಿದೆ.

ಅಚ್ಚರಿ ಏನಂದರೆ, ಮುರಿದ ಕುರ್ಚಿಯನ್ನು ಹರಾಜು ಮಾಡಿ, ಆ ಹಣವನ್ನು ಮನೆಯಿಲ್ಲದ ಜನರಿಗೆ ಬಳಸಲಾಗುವುದು ಎಂದು ಕ್ರೀಡಾಂಗಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇನ್ ಹಾರ್ಮನ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಪಂದ್ಯದ ನಂತರ, ಮ್ಯಾಕ್ಸ್‌ವೆಲ್ ಆ ಕುರ್ಚಿಗೆ ಸಹಿ ಹಾಕಿ, ಅದರೊಂದಿಗೆ ಫೋಟೋ ಕ್ಲಿಕ್ ಮಾಡಿದ್ದಾರೆ.

ಇನ್ನು ಟಿ 20 ಪಂದ್ಯ 5 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ತಂಡವನ್ನು 64 ರನ್‌ಗಳಿಂದ ಸೋಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.