ETV Bharat / sports

ತೋಟದ ಮನೆಯಲ್ಲೇ ಪುತ್ರಿ ಜೊತೆ ಧೋನಿ ಜಾಲಿ ರೈಡ್

author img

By

Published : Apr 21, 2020, 8:34 PM IST

ಧೋನಿ ತಮ್ಮ ಪುತ್ರಿ ಜೀವಾ ಜೊತೆ ಬೈಕ್​ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋವನ್ನು ಸಿಎಸ್​​ಕೆ ತಂಡ ಟ್ವೀಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.

MS Dhoni and his daughter Ziva enjoying a bike ride
ತೋಟದ ಮನೆಯಲ್ಲೆ ಪುತ್ರಿ ಜೊತೆ ಧೋನಿ ಜಾಲಿ ರೈಡ್

ರಾಂಚಿ( ಜಾರ್ಖಂಡ್​​): ಕಳೆದ ಒಂದು ತಿಂಗಳ ಹಿಂದೆ ಐಪಿಲ್ ಟೂರ್ನಿಗಾಗಿ ಸಿದ್ದರಾಗುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಲಾಕ್​ಡೌನ್ ಪರಿಣಾಮ ತವರಿಗೆ ಮರಳಿದ್ದರು. ತಮ್ಮ ಊರಿನ ತೋಟದ ಮನೆಯಲ್ಲಿರುವ ಮಾಹಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಇತ್ತೀಚೆಗೆ, ಧೋನಿ ತಮ್ಮ ಪುತ್ರಿ ಜೀವಾ ಜೊತೆ ಬೈಕ್​ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋವನ್ನು ಪತ್ನಿ ಸಾಕ್ಷಿ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಮಾಡಿದ್ದರು. ಆ ವಿಡಿಯೋವನ್ನು ಸಿಎಸ್​​ಕೆ ತಂಡ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಲಾಕ್​ಡೌನ್​ ಪರಿಣಾಮದಿಂದಾಗಿ ಹೊರ ಹೋಗಲು ಸಾಧ್ಯವಾಗದ ಕಾರಣ ತೋಟದ ಮನೆಯಲ್ಲಿ ಮಗಳನ್ನು ಬೈಕ್​ ಮೇಲೆ ಕೂರಿಸಿಕೊಂಡು ಒಂದು ಸುತ್ತು ಸುತ್ತಿಸಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪ್ರಸ್ತುತ ಐಪಿಎಲ್‌ನ 13ನೇ ಆವೃತ್ತಿಯಲ್ಲಿ ಮಾಹಿ ಕಂಬ್ಯಾಕ್ ಮಾಡುತ್ತಿದ್ದರು. ಆದರೆ, ಕೊರೊನಾ ವೈರಸ್ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್​ ಲೀಗ್​ ಅನ್ನು ಬಿಸಿಸಿಐ ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ. ಹೀಗಾಗಿ ಮತ್ತೆ ಧೋನಿ ಆಟ ಕಾಣಬೇಕೆಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್​​​​​​​‌ ವಿರುದ್ಧ ಭಾರತ ಸೋತ ನಂತರ ಕ್ರಿಕೆಟ್​ನಿಂದ ದೂರ ಸರಿದಿದ್ದ ಮಾಹಿ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.