ETV Bharat / sports

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಚೆನ್ನೈಗೆ ಬಂದಿಳಿದ ಕೊಹ್ಲಿ: ವಿಡಿಯೋ - ಇಂಗ್ಲೆಂಡ್​ ಭಾರತ ಟೆಸ್ಟ್​ ಸರಣಿ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಒಂದು ಟೆಸ್ಟ್​ ಪಂದ್ಯವನ್ನಾಡಿ ಪಿತೃತ್ವ ರಜೆ ಪಡೆದು ತವರಿಗೆ ಮರಳಿದ್ದ ಕೊಹ್ಲಿ, ಇದೀಗ ಮತ್ತೆ ಕ್ರಿಕೆಟ್​ಗೆ ಮರಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೊಹ್ಲಿ ನೇತೃತ್ವದ ಭಾರತ ತಂಡ ಏಕದಿನ ಸರಣಿಯನ್ನು 2-1ರಲ್ಲಿ ಕಳೆದುಕೊಂಡರೆ, ಟಿ-20 ಸರಣಿಯನ್ನು 2-1ರಲ್ಲಿ ಗೆದ್ದು ಸೇಡು ತೀರಿಸಿಕೊಂಡಿತ್ತು.

ಇಂಗ್ಲೆಂಡ್ ಟೆಸ್ಟ್​ಗಾಗಿ ವಿರಾಟ್​ ಕೊಹ್ಲಿ ಚೆನ್ನೈಗೆ ಆಗಮನ

author img

By

Published : Jan 28, 2021, 6:08 PM IST

ಚೆನ್ನೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳನ್ನಾಡುವುದಕ್ಕಾಗಿ ಬುಧವಾರ ಚೆನ್ನೈಗೆ ಆಗಮಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಒಂದು ಟೆಸ್ಟ್​ ಪಂದ್ಯವನ್ನಾಡಿ ಪಿತೃತ್ವ ರಜೆ ಪಡೆದು ತವರಿಗೆ ಮರಳಿದ್ದ ಕೊಹ್ಲಿ, ಇದೀಗ ಮತ್ತೆ ಕ್ರಿಕೆಟ್​ಗೆ ಮರಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೊಹ್ಲಿ ನೇತೃತ್ವದ ಭಾರತ ತಂಡ ಏಕದಿನ ಸರಣಿಯನ್ನು 2-1ರಲ್ಲಿ ಕಳೆದುಕೊಂಡರೆ, ಟಿ-20 ಸರಣಿಯನ್ನು 2-1ರಲ್ಲಿ ಗೆದ್ದು ಸೇಡು ತೀರಿಸಿಕೊಂಡಿತ್ತು.

ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ

ಜನವರಿ 11ರಂದು ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಒಂದು ತಿಂಗಳಿನಿಂದ ಪತ್ನಿಯ ಜೊತೆಯಲ್ಲಿದ್ದ ಕೊಹ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುತ್ತಿದ್ದು, ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ನಾಯಕತ್ವ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಫೆಬ್ರವರಿ 5ರಂದು ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಇದೇ ಮೈದಾನದಲ್ಲಿ ಫೆಬ್ರವರಿ 13ರಿಂದ 17ರವರೆಗೆ 2ನೇ ಟೆಸ್ಟ್​ ನಡೆಯಲಿದೆ. ಕೊನೆಯ ಎರಡು ಟೆಸ್ಟ್​ಗಳು ನೂತನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿವೆ.

ಇದನ್ನು ಓದಿ:ಹೊಸ ಮನೆ ಕೊಳ್ಳಲು ಯಾವ ಸ್ಥಳ ಸೂಕ್ತ ಎಂದು ಕೇಳಿದ ಪಂತ್​ಗೆ ಬಂದ ಉತ್ತರಗಳೆಷ್ಟು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.