ETV Bharat / sports

ಸ್ಯಾಮ್ ಕರ್ರನ್​ ಧೋನಿಯಂತೆ ಕೊನೆವರೆಗೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ್ರು: ಜೋಸ್ ಬಟ್ಲರ್ - ಬೆಸ್ಟ್ ಫಿನಿಶರ್ ಎಂಎಸ್ ಧೋನಿ

ಎಂ ಎಸ್​ ಧೋನಿ ಎಂತಹ ಅದ್ಭುತ ಕ್ರಿಕೆಟರ್​, ಫಿನಿಷರ್​ ಎಂಬುದು ನಮಗೆಲ್ಲಾ ಗೊತ್ತಿದೆ. ಎಂ ಎಸ್​ ಜೊತೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ಳುವ ನಮ್ಮೆಲ್ಲಾ ಆಟಗಾರರಿಗೂ ಆಟದ ರಚನೆ ಕಲಿಯಲು ಒಂದು ಅದ್ಭುತ ಅವಕಾಶ. ಆ ಆಟಗಾರರ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಬಟ್ಲರ್​ ತಿಳಿಸಿದ್ದಾರೆ.

ಸ್ಯಾಮ್ ಕರ್ರನ್- ಎಂಎಸ್ ಧೋನಿ
ಸ್ಯಾಮ್ ಕರ್ರನ್- ಎಂಎಸ್ ಧೋನಿ
author img

By

Published : Mar 29, 2021, 3:40 PM IST

ಪುಣೆ: ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಆಕರ್ಷಕ 95 ರನ್​ಗಳಿಸಿ ಬಲಿಷ್ಠ ಭಾರತದೆದುರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಯಾಮ್​ ಕರ್ರನ್​ರ ಹೋರಾಟದ ವಿಧಾನವನ್ನು ಮೆಚ್ಚಿಕೊಂಡಿರುವ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್​, ಕರ್ರನ್​ ಧೋನಿಯ ನೆರಳನ್ನು ಹೊಂದಿದ್ದಾರೆ ಎಂದು ಭಾನುವಾರ ಪಂದ್ಯದ ನಂತರ ತಿಳಿಸಿದ್ದಾರೆ​.

ಭಾನುವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಆಸೋಸಿಯೇಷನ್​ ಸ್ಟೇಡಿಯಂನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 330ರನ್​ಗಳ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್​ ತಂಡ ಸುಲಭವಾಗಿ ಸೋಲುವ ಹಂತ ತಲುಪಿತ್ತು. ಆದರೆ ಕೊನೆಯ ಬಾಲಂಗೋಸಿಗಳ ನೆರವಿನಿಂದ ಅದ್ಭುತ ಆಟ ಪ್ರದರ್ಶನ ತೋರಿದ 22 ವರ್ಷ ಯುವ ಆಟಗಾರ ಸ್ಯಾಮ್ ಕರ್ರನ್ 83 ಎಸೆತಗಳಲ್ಲಿ ಅಜೇಯ 95 ರನ್​ಗಳಿಸಿದರು. ಆದರೆ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು. ಇಂಗ್ಲೆಂಡ್ 322 ರನ್​ಗಳಿಸಿ 7ರನ್​ಗಳಿಂದ ಸೋಲುಂಡಿತು. ಆದರೆ ಇವರ ಆಟ ಕ್ರಿಕೆಟ್​ ತಜ್ಞರ ಮತ್ತು ಅಭಿಮಾನಿಗಳ​ ಮೆಚ್ಚುಗೆಗೆ ಪಾತ್ರವಾಯಿತು.

ಜೋಶ್ ಬಟ್ಲರ್​ ಪ್ರತಿಕ್ರಿಯೆ

" ಸ್ಯಾಮ್ ​ ಈ ಪಂದ್ಯದಲ್ಲಿನ ಇನ್ನಿಂಗ್ಸ್​ ಕುರಿತು ಎಂ ಎಸ್​ ಜೊತೆ ಮಾತನಾಡಲು ಬಯಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಸ್ಯಾಮ್,​ ಧೋನಿಯ ನೆರಳನ್ನು ಹೊಂದಿದ್ದಾರೆ ಎಂದು ನಾನು ಖಾತ್ರಿ ಪಡಿಸುತ್ತೇನೆ. ಏಕೆಂದರೆ ಧೋನಿ ಕೂಡ ಇಂತಹ ಪರಿಸ್ಥಿತಿಯಲ್ಲಿ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುತ್ತಿದ್ದರು. ಸ್ಯಾಮ್​ ಕರ್ರನ್​ಗೆ ಭೇಟಿಯಾದಾಗ ಸಂಭಾಷಣೆ ನಡೆಸಲು ಖಂಡಿತ ಧೋನಿ ಮಹಾನ್ ವ್ಯಕ್ತಿ" ಎಂದು ಮಾರ್ಗನ್ ಅನುಪಸ್ಥಿತಿಯಲ್ಲಿ ಆಂಗ್ಲರ ನಾಯಕತ್ವ ವಹಿಸಿದ್ದ ಬಟ್ಲರ್ ತಿಳಿಸಿದ್ದಾರೆ.

ಎಂ ಎಸ್​ ಧೋನಿ ಎಂತಹ ಅದ್ಭುತ ಕ್ರಿಕೆಟರ್​, ಫಿನಿಷರ್​ ಎಂಬುದು ನಮಗೆಲ್ಲಾ ಗೊತ್ತಿದೆ. ಎಂ ಎಸ್​ ಜೊತೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ಳುವ ನಮ್ಮೆಲ್ಲಾ ಆಟಗಾರರಿಗೂ ಆಟದ ರಚನೆ ಕಲಿಯಲು ಒಂದು ಅದ್ಭುತ ಅವಕಾಶ. ಆ ಆಟಗಾರರ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಬಟ್ಲರ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.