ETV Bharat / sports

ಪಂದ್ಯ ಗೆಲ್ಲುವುದಕ್ಕಾಗಿ ಹೆಚ್ಚು ಬೌಂಡರಿ ಹೊಡೆಯುವುದು ಈಗಿನ ಟ್ರೆಂಡ್ ​: ಬೈರ್​ಸ್ಟೋವ್​ - ಬೆನ್​ ಸ್ಟೋಕ್ಸ್​ ಸಿಕ್ಸರ್​

ಇದು ಪಂದ್ಯದ ಅಸಾಧಾರಣ ಸಂಖ್ಯೆಗಳು. ನಾವು ಬೌಂಡರಿಗಳನ್ನು ಹೊಡೆಯುವುದನ್ನು ಮುಂದುವರಿಸಿದರೆ ಬೌಲರ್​ಗಳನ್ನು ಒತ್ತಡಕ್ಕೆ ಸಿಲುಕಿ ತಮ್ಮ ಲೈನ್ ಅಂಡ್ ಲೆನ್ತ್‌​ಗಳನ್ನು ಕಳೆದುಕೊಳ್ಳುತ್ತಾರೆ. ನಂತರ ಸಿಕ್ಸರ್​ಗಳನ್ನು ಸಿಡಿಸಬಹುದು..

ಜಾನಿ ಬೈರ್​ಸ್ಟೋವ್
ಜಾನಿ ಬೈರ್​ಸ್ಟೋವ್
author img

By

Published : Mar 27, 2021, 4:47 PM IST

ಪುಣೆ : ಏಕದಿನ ಕ್ರಿಕೆಟ್​ನ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ತಮ್ಮ ಆಕ್ರಮಣಕಾರಿ ಮತ್ತು ಭಯರಹಿತ ಬ್ರಾಂಡ್​ ಕ್ರಿಕೆಟ್​ನ ಮುಂದುವರಿಸಿಕೊಂಡು ಹೋಗುವುದನ್ನ ಇಷ್ಟಪಡುತ್ತದೆ ಎಂದು ಶುಕ್ರವಾರ ಭಾರತ ನೀಡಿದ 337 ರನ್​ಗಳನ್ನು ಕೇವಲ 43.3 ಓವರ್​ಗಳಲ್ಲಿ ಗೆಲ್ಲಲು ಕಾರಣರಾದ ಜಾನಿ ಬೈರ್​ಸ್ಟೋವ್​ ತಿಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಆಂಗ್ಲರ ಓಪನರ್​ ಕೇವಲ 66 ಎಸೆತಗಳಲ್ಲಿ 94 ರನ್​ಗಳಿಸಿದ್ದರು. ನಂತರ 2ನೇ ಪಂದ್ಯದಲ್ಲಿ 112 ಎಸೆತಗಳಲ್ಲಿ 7 ಸಿಕ್ಸರ್​,11 ಬೌಂಡರಿಗಳ ನೆರವಿನಿಂದ 124 ರನ್​ ಗಳಿಸಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬರೋಬ್ಬರಿ 20 ಸಿಕ್ಸರ್​ಗಳನ್ನು ಸಿಡಿಸಿ 337ರನ್​ಗಳ ಬೃಹತ್ ಮೊತ್ತವನ್ನು ಸುಲಭವಾಗಿ ಚೇಸ್​ ಮಾಡಿ ಗೆದ್ದು ಮೂರನೇ ಪಂದ್ಯವನ್ನು ಮತ್ತಷ್ಟು ರೋಚಕ ಹಂತಕ್ಕೆ ಕೊಂಡೊಯ್ಯಿತು.

"ನಿಜ ಹೇಳಬೇಕೆಂದರೆ, ಅದು ಅದೇ ಮಾದರಿಯಲ್ಲಿ(ಅಗ್ರೆಸಿಟ್​ ಆಟ) ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ನಾವು ಹೆಚ್ಚು ಸಿಕ್ಸರ್‌ಗಳನ್ನು ಹೊಡೆಯಬೇಕು ಎಂಬುದರ ಕುರಿತು ಯಾವುದೇ ಸಂಭಾಷಣೆ ನಡೆದಿಲ್ಲ.

ಪ್ರಸ್ತುತ ಟಿ20 ಅಥವಾ 50 ಓವರ್​ಗಳ ಕ್ರಿಕೆಟ್​ನತ್ತ ಒಮ್ಮೆ ನೋಡಿ, ಹೆಚ್ಚು ಬೌಂಡರಿಗಳನ್ನು ಹೊಡೆಯುವ ತಂಡ ಸಾಮಾನ್ಯವಾಗಿ ಗೆಲುವು ಸಾಧಿಸುತ್ತದೆ" ಎಂದು ಬೈರ್‌ಸ್ಟೋವ್ ಶುಕ್ರವಾರದ ಏಕದಿನ ಪಂದ್ಯದ ನಂತರ ಹೇಳಿದ್ದಾರೆ.

20 ಸಿಕ್ಸರ್​ಗಳು : ಚೇಸಿಂಗ್ ವೇಳೆ 20 ಸಿಕ್ಸರ್​ ಸಿಡಿಸಿದ ಬಗ್ಗೆ ಮಾತನಾಡಿದ ಜಾನಿ, ನೀವು ಬೌಂಡರಿಯತ್ತ ಚೆಂಡನ್ನು ಬಾರಿಸಿದಾಗ ಅದು ಸಿಕ್ಸರ್ ಅಥವಾ ಫೋರ್​ ಆಗಿರಲಿ, ನಂತರ ಅದರ ಸಂಖ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಈ ಪಂದ್ಯದಲ್ಲಿ 20 ಸಿಕ್ಸರ್​ಗಳು ಬಂದವು.

ಇದು ಪಂದ್ಯದ ಅಸಾಧಾರಣ ಸಂಖ್ಯೆಗಳು. ನಾವು ಬೌಂಡರಿಗಳನ್ನು ಹೊಡೆಯುವುದನ್ನು ಮುಂದುವರಿಸಿದರೆ ಬೌಲರ್​ಗಳನ್ನು ಒತ್ತಡಕ್ಕೆ ಸಿಲುಕಿ ತಮ್ಮ ಲೈನ್ ಅಂಡ್ ಲೆನ್ತ್‌​ಗಳನ್ನು ಕಳೆದುಕೊಳ್ಳುತ್ತಾರೆ. ನಂತರ ಸಿಕ್ಸರ್​ಗಳನ್ನು ಸಿಡಿಸಬಹುದು ಎಂದು ಅವರು ಹೇಳಿದ್ದಾರೆ.

2ನೇ ಏಕದಿನ ಪಂದ್ಯದ ವೇಳೆ 337ರನ್​ಗಳನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ, ಜೇಸನ್ ರಾಯ್ 55(52ಎಸೆತ), ಜಾನಿ ಬೈರ್​ಸ್ಟೋವ್​ 124(112), ಬೆನ್​ ಸ್ಟೋಕ್ಸ್​ 99(52), ಲಿಯಾಮ್ ಲಿವಿಂಗ್​ ಸ್ಟೋನ್ 27(21) ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಬೈರ್ಸ್ಟೋವ್ 7 ಮತ್ತು ಬೆನ್ ಸ್ಟೋಕ್ಸ್​ 10 ಸಿಕ್ಸರ್​ ಸಿಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.