ETV Bharat / sports

ಭಾವನಾತ್ಮಕ ವಿಡಿಯೋ ಮೂಲಕ ತಂದೆಗೆ ಗೌರವ ಸಮರ್ಪಿಸಿದ ಹಾರ್ದಿಕ್ ಪಾಂಡ್ಯ

author img

By

Published : Jan 23, 2021, 5:18 PM IST

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯ ನಂತರ ಭಾರತಕ್ಕೆ ಮರಳಿದ್ದ ಹಾರ್ದಿಕ್ ಪಾಂಡ್ಯ ಫೆಬ್ರವರಿಯ ಮೊದಲ ವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್​ ಸರಣಿಗೆ ದೀರ್ಘಕಾಲದ ನಂತರ ಮರಳಲಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ನವದೆಹಲಿ: ಭಾರತ ಕ್ರಿಕೆಟ್​​ ತಂಡದ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ತಮ್ಮನ್ನು ಅಗಲಿದ ತಮ್ಮ ತಂದೆಗೆ ಗೌರವ ಸಮರ್ಪಿಸಿದ್ದು, ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ಬಾಲ್ಯದಿಂದ ಇಲ್ಲಿಯವರೆಗೆ ತಂದೆಯ ಜೊತೆ ಕಳೆದ ಪ್ರೀತಿಯ ಕ್ಷಣಗಳ ಹಲವಾರು ಫೋಟೋಗಳನ್ನು ಸೇರಿಸಿದ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ತಂದೆಗೆ ಮೊದಲ ಕಾರು ಕೊಡಿಸಿದ್ದ ಸಂದರ್ಭ, ಅವರ ನೆಚ್ಚಿನ ನಟ ಅಮಿತಾಬ್​ ಬಚ್ಚನ್​ ಭೇಟಿ ಮಾಡಿಸಿದ್ದ ಸಂದರ್ಭದ ವಿಡಿಯೋವನ್ನು ಕೂಡ ಸೇರಿಸಿದ್ದಾರೆ. ಈ ವಿಡಿಯೋ ನಿಮಗಾಗಿ(ಟು ಡ್ಯಾಡ್​) ಎಂದು 27 ವರ್ಷದ ಆಲ್​ರೌಂಡರ್​ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯ ನಂತರ ಭಾರತಕ್ಕೆ ಮರಳಿದ್ದ ಹಾರ್ದಿಕ್ ಪಾಂಡ್ಯ ಫೆಬ್ರವರಿಯ ಮೊದಲ ವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್​ ಸರಣಿಗೆ ದೀರ್ಘಕಾಲದ ನಂತರ ಮರಳಲಿದ್ದಾರೆ.

  • My daddy
    As I said to your yesterday
    Your last one ride.
    Now rest in peace my king
    You were a Happy soul!

    I will miss you everyday dad
    Love you always pic.twitter.com/hUipWOdjxL

    — hardik pandya (@hardikpandya7) January 17, 2021 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.