ಅಹ್ಮದಾಬಾದ್: ಉತ್ಸಾಹಿ ಅಭಿಮಾನಿಯೊಬ್ಬ ಭಾರತ ತಂಡ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಬಯೋ ಬಬಲ್ ಮತ್ತು ಭದ್ರತಾ ಪ್ರೋಟೋಕಾಲ್ಗಳನ್ನು ಮುರಿದು ಮೈದಾನಕ್ಕೆ ಬಂದು ನಾಯಕ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಆದರೆ ಅಭಿಮಾನಿ ಮೈದಾನಕ್ಕೆ ಬರುತ್ತಿದ್ದಂತೆ ಭಾರತ ತಂಡದ ನಾಯಕ ತಕ್ಷಣ ಸ್ವಲ್ಪ ದೂರ ಸರಿದು ಆ ಅಭಿಮಾನಿಗೆ ಹಿಂತಿರುಗುವಂತೆ ಸೂಚಿಸಿದ್ದಾರೆ. ಕೊಹ್ಲಿ ಮಾತನ್ನು ಕೇಳಿದ ತಕ್ಷಣ ತನ್ನ ತಪ್ಪನ್ನು ಅರಿತುಕೊಂಡ ಅಭಿಮಾನಿ ತಕ್ಷಣ ಹಿಂದಿರುಗಿದ್ದಾನೆ. ಅಭಿಮಾನಿಯ ಹುಚ್ಚು ಸಾಹಸ ಕಂಡು ಮೈದಾನದಲ್ಲಿ ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರು ಚಿಯರ್ ಮಾಡಿದ್ದಾರೆ.
-
Fan breaches security to meet Virat Kohli#INDvsENG pic.twitter.com/qCF7QQn2hj
— Trollmama_ (@Trollmama3) February 24, 2021 " class="align-text-top noRightClick twitterSection" data="
">Fan breaches security to meet Virat Kohli#INDvsENG pic.twitter.com/qCF7QQn2hj
— Trollmama_ (@Trollmama3) February 24, 2021Fan breaches security to meet Virat Kohli#INDvsENG pic.twitter.com/qCF7QQn2hj
— Trollmama_ (@Trollmama3) February 24, 2021
ಈ ಕುರಿತು ಎಎನ್ಐ ಜೊತೆ ಮಾತನಾಡಿರುವ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು, "ನಾವು ಈ ವಿಚಾರವನ್ನು ಪರಿಶೀಲನೆ ನಡೆಸುತ್ತೇವೆ. ಆ ಅಭಿಮಾನಿ ಯಾರೆಂದು ಹುಡುಕಲಿದ್ದೇವೆ. ಈ ವಿಷಯ ಗಂಭೀರವಾಗಿರವುದರಿಂದ ಮತ್ತು ಎಲ್ಲರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
-
Fan breached the security. Virat Kohli moves away, fan goes back! pic.twitter.com/6RHj3GuwFu
— Cheeru (@_sobermonk) February 24, 2021 " class="align-text-top noRightClick twitterSection" data="
">Fan breached the security. Virat Kohli moves away, fan goes back! pic.twitter.com/6RHj3GuwFu
— Cheeru (@_sobermonk) February 24, 2021Fan breached the security. Virat Kohli moves away, fan goes back! pic.twitter.com/6RHj3GuwFu
— Cheeru (@_sobermonk) February 24, 2021
ಇದನ್ನು ಓದಿ: ಪಂದ್ಯದ ವೇಳೆ ಆಕಸ್ಮಿಕವಾಗಿ ಚೆಂಡಿಗೆ ಲಾಲಾರಸ ಹಚ್ಚಿದ ಸ್ಟೋಕ್ಸ್... ಸ್ಯಾನಿಟೈಸ್ ಮಾಡಿದ ಅಂಪೈರ್!