ETV Bharat / sports

ಸುದ್ದಿಗೋಷ್ಠಿಯಲ್ಲಿ ಕಿವೀಸ್​ನ ರನ್ ​ಸರದಾರ ರಾಸ್​ ಟೇಲರ್ ಕಣ್ಣೀರು!

author img

By

Published : Jan 7, 2020, 5:00 PM IST

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ರಾಸ್​ ಟೇಲರ್​, ಸ್ಟೀಫನ್ ಫ್ಲೆಮಿಂಗ್​ ಅವರನ್ನು ಹಿಂದಿಕ್ಕಿ ನ್ಯೂಜಿಲ್ಯಾಂಡ್​ ಪರ ಗರಿಷ್ಠ ರನ್​ ಸ್ಕೋರರ್​ ಎನಿಸಿಕೊಂಡಿದ್ದರು.

Ross Taylor
Ross Taylor

ಸಿಡ್ನಿ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯನ್ನು 3-0 ಪಾಯಿಂಟುಗಳ ಅಂತರದಿಂದ ಕಳೆದುಕೊಂಡರೂ ನ್ಯೂಜಿಲ್ಯಾಂಡ್​ ಪರ ಅತಿ ಹೆಚ್ಚು ರನ್​ ಗಳಿಸಿದ ರಾಸ್​ ಟೇಲರ್,​ ತಾವೊಬ್ಬ ಸಂಪೂರ್ಣ ಟೆಸ್ಟ್​ ಆಟಗಾರ ಅನ್ನೋದು ತಮಗಿನ್ನೂ ಖಚಿತವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯನ್ನು 3-0 ಅಂತರದಲ್ಲಿ ನ್ಯೂಜಿಲೆಂಡ್‌ ಸೋತಿತ್ತು. ಆದರೆ ಟೇಲರ್​, ವ್ಯಾಗ್ನರ್​ ಬಿಟ್ಟರೆ ಉಳಿದ ಆಟಗಾರರು ಇಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಇದರಿಂದ ಕ್ಲೀನ್‌ಸ್ವೀಪ್​ ಅಪಮಾನಕ್ಕೆ ಕಿವೀಸ್​ ತುತ್ತಾಗಿತ್ತು. ಆದ್ರೆ, ರಾಸ್​ ಟೇಲರ್​ ಕಿವೀಸ್​ ದಿಗ್ಗಜ ಸ್ಟೀಫನ್​ ಫ್ಲೆಮಿಂಗ್‌ ಅವರನ್ನು ಹಿಂದಿಕ್ಕಿ ಹೆಚ್ಚು ರನ್​ ಸಿಡಿಸಿದ ನ್ಯೂಜಿಲ್ಯಾಂಡ್​ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆದಿದ್ದರು. ಈ ಸಂದರ್ಭದಲ್ಲಿ ಅವರು ನಾನು ದೇಶದ ಪರ ಒಂದು ಟೆಸ್ಟ್​ ಆಡಿದರೆ ಸಾಕು ಎಂದುಕೊಂಡಿದ್ದೆ ಎಂದು ಹೇಳಿರುವ ಅವರು, ತಮ್ಮ ಕೋಚ್​ ತನ್ನನ್ನು ಗರಿಷ್ಠ ಸ್ಕೋರರ್​ ಆಗಿ ನೋಡಲು ಬಯಸಿದ್ದರು ಎಂಬುದನ್ನು ನೆನೆಪು ಮಾಡಿಕೊಂಡರು.

Martin crowe
ಮಾರ್ಟಿನ್​ ಕ್ರೋವ್​

"ನನ್ನನ್ನು ಒಂದು ವಿಚಾರ ಭಾವುಕನನ್ನಾಗಿಸುತ್ತಿದೆ. ಕಾರಣ ನನ್ನ ಕೋಚ್​ ಮಾರ್ಟಿನ್​ ಕ್ರೋವ್​. ದೇಶದ ಪರ ಒಂದು ಟೆಸ್ಟ್​ ಆಡಬೇಕೆಂಬುದುಕೊಂಡಿದ್ದೆ, ಆದರೆ ನನ್ನ ಕೋಚ್​ ನಾನು ನ್ಯೂಜಿಲ್ಯಾಂಡ್​ ತಂಡದ ಗರಿಷ್ಠ ಸ್ಕೋರರ್​ ಆಗುತ್ತೇನೆಂದು ಬಯಸಿದ್ದರು. ಆದರೆ ನನಗೆ ನಂಬಿಕೆ ಇರಲಿಲ್ಲ. ಇದೀಗ ಅವರ ಆಸೆ ನೆರವೇರಿದೆ, ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರಿಂದಲೇ ಇಂದು ನಾನು ಈ ಸಾಧನೆ ಮಾಡಿದ್ದೇನೆ" ಎಂದು ತಮ್ಮ ಗುರುವನ್ನು ನೆನೆದ ಟೇಲರ್​ ಸುದ್ದಿಗೋಷ್ಟಿಯಲ್ಲಿ ಕಣ್ಣೀರಿಟ್ಟರು.

Ross Taylor
ರಾಸ್​ ಟೇಲರ್​ (ಸಂಗ್ರಹ ಚಿತ್ರ)

"ನಾನು ನ್ಯೂಜಿಲ್ಯಾಂಡ್​ ಪರ ಮೊದಲು ಆಡಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದೆ. ಟಿ20 ಫಾರ್ಮೆಟ್‌ ಆಗಷ್ಟೇ ಬಂದಿತ್ತು. ಅಲ್ಲಿಯವರೆಗೆ ನಾನು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3 ಅಥವಾ 4 ಶತಕ ಸಿಡಿಸಿದ್ದೆ. ನಾನು ಏಕದಿನ ಕ್ರಿಕೆಟ್​ ಆಡುವುದಕ್ಕೆ ಮಾತ್ರ ಉತ್ತಮ. ಟೆಸ್ಟ್​ ಆಟದಲ್ಲಿ ನಾನೊಬ್ಬ ಉತ್ತಮ ಆಟಗಾರ ಎಂದು ಖಚಿತವಾಗಿ ಹೇಳಕ್ಕಾಗುವುದಿಲ್ಲ"ಅನ್ನೋದು ಕಿವೀಸ್​ ಹಿರಿಯ ಆಟಗಾರನ ಅಭಿಪ್ರಾಯ.

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಫ್ಲೆಮಿಂಗ್​ (7,172) ಹಿಂದಿಕ್ಕಿದ ಟೇಲರ್​ (7,174) ಕಿವೀಸ್ ಪರ ಅತಿ ಹೆಚ್ಚು ರನ್​ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. ಈಗಾಗಲೇ 99 ಟೆಸ್ಟ್​ ಪಂದ್ಯಗಳನ್ನಾಡಿರುವ ಅವರು 100ನೇ ಪಂದ್ಯವನ್ನು ಭಾರತದೆದುರು ಆಡಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.