ಮುಂಬೈ: ನಿಯಮ ಪಾಲಿಸಲು ಭಾರತೀಯರು ಒಪ್ಪದಿದ್ರೆ ಅವರು ಬ್ರಿಸ್ಬೇನ್ನಲ್ಲಿ ಆಡಲು ಬರುವುದು ಬೇಡ ಎಂದಿದ್ದ ಕ್ವೀನ್ಸ್ಲ್ಯಾಂಡ್ಸ್ ಆರೋಗ್ಯ ಸಚಿವರನ್ನು ಭಾರತದ ಮಾಜಿ ಕ್ರಿಕೆಟಿಗ ವಾಸೀಮ್ ಜಾಫರ್ ಟ್ವಿಟರ್ನಲ್ಲಿ ಟ್ರೋಲ್ ಮಾಡಿದ್ದಾರೆ.
ಕ್ವೀನ್ಸ್ಲ್ಯಾಂಡ್ ಕೋವಿಡ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹಾಗಾಗಿ ರಾಜ್ಯಕ್ಕೆ ಬರುವವರು ತಪ್ಪದೆ 14 ದಿನಗಳ ಕ್ವಾರಂಟೈನ್ ಆಗಬೇಕಿದೆ. ಆದರೆ ಇದಕ್ಕೆ ಭಾರತೀಯ ಕ್ರಿಕೆಟಿಗರು ಈಗಾಗಲೇ ಸಿಡ್ನಿಯಲ್ಲಿ ಕ್ವಾರಂಟೈನ್ ಆಗಿರುವುದರಿಂದ ಮತ್ತೆ 14 ದಿನದ ಕ್ವಾರಂಟೈನ್ ಅಸಾಧ್ಯ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕ್ವೀನ್ಸ್ ಲ್ಯಾಂಡ್ನ ಆರೋಗ್ಯ ಸಚಿವೆ ರಾಸ್ ಬೇಟ್ಸ್, "ಭಾರತೀಯರು ನಿಯಮಗಳೊಂದಿಗೆ ಆಡಲು ಒಪ್ಪದಿದ್ದರೆ, ಅವರು ಇಲ್ಲಿಗೆ ಬರುವ ಅಗತ್ಯವಿಲ್ಲ" ಎಂದಿದ್ದರು.
-
Aus minister: "Play by our rules or don't come".
— Wasim Jaffer (@WasimJaffer14) January 3, 2021 \" class="align-text-top noRightClick twitterSection" data="
Indian team with Border-Gavaskar trophy in the bag 😉:#AUSvIND https://t.co/MRokmjL2Vy pic.twitter.com/yPhtg6Rp43
\">Aus minister: "Play by our rules or don't come".
— Wasim Jaffer (@WasimJaffer14) January 3, 2021
Indian team with Border-Gavaskar trophy in the bag 😉:#AUSvIND https://t.co/MRokmjL2Vy pic.twitter.com/yPhtg6Rp43
\Aus minister: "Play by our rules or don't come".
— Wasim Jaffer (@WasimJaffer14) January 3, 2021
Indian team with Border-Gavaskar trophy in the bag 😉:#AUSvIND https://t.co/MRokmjL2Vy pic.twitter.com/yPhtg6Rp43
ವಿಚಿತ್ರ ಮೀಮ್ ಇರುವ ಫೋಟೋಗಳನ್ನು ಬಳಸಿ ಟ್ವೀಟ್ ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿರುವ ಭಾರತದ ಮಾಜಿ ಕ್ರಿಕೆಟಿಗ ವಾಸೀಮ್ ಜಾಫರ್, ಆ ಸಚಿವರ ಹೇಳಿಕೆಯನ್ನು ಒಂದು ಫೋಟೊದೊಂದಿಗೆ ಸೇರಿಸಿ ಟ್ವೀಟ್ ಮಾಡಿದ್ದು, ಇದು ನೋಡುಗರಿಗೆ ಹಾಸ್ಯ ಉಂಟು ಮಾಡುತ್ತಿದೆ.
ಜೋಫ್ರಾ ಆರ್ಚರ್ ಬ್ಯಾಗ್ ಹಾಕಿಕೊಂಡು ನಿಂತಿರುವ ಫೋಟೋ ಶೇರ್ ಮಾಡಿದ್ದು, ಆಸ್ಟ್ರೇಲಿಯಾ ಸಚಿವರು ಭಾರತೀಯರು ಬ್ರಿಸ್ಬೇನ್ಗೆ ಬರುವುದು ಬೇಡ ಎಂದು ಹೇಳಿದ ತಕ್ಷಣ ಬಾರ್ಡರ್ ಗಾವಸ್ಕರ್ ಟ್ರೋಫಿಯನ್ನು ಬ್ಯಾಗ್ನಲ್ಲಿಟ್ಟುಕೊಂಡು ಹೊರಡುತ್ತಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.