ETV Bharat / sports

ಆಸೀಸ್‌ನ ಈ ಕ್ರಿಕೆಟಿಗ ಅತ್ಯುತ್ತಮ ಟೆಸ್ಟ್​ ಬ್ಯಾಟ್ಸ್​ಮನ್​, ಏಕದಿನದಲ್ಲಿ ಕೊಹ್ಲಿಯೇ ಬೆಸ್ಟ್​: ಜಾಫರ್​ - ವಾಸಿಮ್​ ಜಾಫರ್​

ಸ್ಟೀವ್​ ಸ್ಮಿತ್​ ಬಾಲ್​ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾದರೂ ಮತ್ತೆ ಕ್ರಿಕೆಟ್​ಗೆ ಮರಳಿ ಟೆಸ್ಟ್​ ಕ್ರಿಕೆಟ್​ನಲ್ಲಿ ನಂಬರ್​ ಒನ್​ ಸ್ಥಾನಕ್ಕೇರಿದ್ದಾರೆ.

ಸ್ಟಿವ್​ ಸ್ಮಿತ್​- ವಾಸಿಮ್​ ಜಾಫರ್​
ಸ್ಟಿವ್​ ಸ್ಮಿತ್​- ವಾಸಿಮ್​ ಜಾಫರ್​
author img

By

Published : Jun 7, 2020, 11:00 AM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಗಿಂತ ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ವಾಸೀಂ ಜಾಫರ್​ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಕ್ರಿಕೆಟ್​ನಲ್ಲಿ ಬೆಸ್ಟ್​ ಬ್ಯಾಟ್ಸ್​ಮನ್ ಸ್ಪರ್ಧೆಯಲ್ಲಿ ಭಾರತದ ಕೊಹ್ಲಿ ಹಾಗೂ ಆಸೀಸ್​ನ ಸ್ಟೀವ್​ ಸ್ಮಿತ್​ಗೂ ಭಾರಿ ಪೈಪೋಟಿ ನಡೆಯುತ್ತಿದೆ. ಇಬ್ಬರು ಕ್ರಿಕೆಟ್​ ಆಟವನ್ನು ತಮ್ಮದೇ ಆದ ಪ್ರದರ್ಶನದ ಮೂಲಕ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಹ ಬ್ಯಾಟ್ಸ್​​ಮನ್​ಗಳಾಗಿದ್ದಾರೆ. ಆದರೆ ಕ್ರಿಕೆಟ್​ ದಿಗ್ಗಜರು ತಮ್ಮದೇ ಆದ ಆಯಾಮದಲ್ಲಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಿದ್ದಾರೆ. ಅದರಂತೆ ಮುಂಬೈನ ಮಾಜಿ ಬ್ಯಾಟ್ಸ್​ಮನ್​ ವಾಸೀಂ​ ಜಾಫರ್​ ಕೂಡ ಕೊಹ್ಲಿ-ಸ್ಮಿತ್​ ಇಬ್ಬರಲ್ಲಿ ಸ್ಮಿತ್​ರನ್ನು ಅತ್ಯುತ್ತಮ ಬ್ಯಾಟ್ಸ್​ಮನ್ ಎಂದು ಆಯ್ಕೆ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಪ್ರಸ್ತುತ ಕ್ರಿಕೆಟ್​ನ ಮೂರು ವಿಭಾಗದಲ್ಲೂ 50 ರ ಸರಾಸರಿ ಹೊಂದಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್ ಆಗಿದ್ದಾರೆ. ಈಗಾಗಲೆ ಅವರು 70 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಜೊತೆಗೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಮೊದಲ 10 ಶ್ರೇಯಾಂಕ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೂ ಜಾಫರ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಮಿತ್​, ಕೊಹ್ಲಿಗಿಂತ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಟೀವ್ ​ಸ್ಮಿತ್​ ಬಾಲ್​ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾದರೂ ಮತ್ತೆ ಕ್ರಿಕೆಟ್​ಗೆ ಮರಳಿ ಟೆಸ್ಟ್​ ಕ್ರಿಕೆಟ್​ನಲ್ಲಿ ನಂಬರ್​ ಒನ್​ ಸ್ಥಾನಕ್ಕೇರಿದ್ದಾರೆ. ಇದೇ ಅವರ ಪರ ಬ್ಯಾಟಿಂಗ್​ ಮಾಡಲು ಕಾರಣ. ಅಲ್ಲದೆ ಅವರು ಬ್ರಾಡ್ಮನ್​ರಂತೆಯೇ ಶ್ರೇಷ್ಠ ಟೆಸ್ಟ್​ ಬ್ಯಾಟ್ಸ್​ಮನ್ ಎಂದು ಅವರು​ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ 73 ಪಂದ್ಯಗಳಿಂದ 62.84ರ ಸರಾಸರಿಯಲ್ಲಿ ಸ್ಮಿತ್​ 7227 ರನ್​ಗಳಿಸಿದ್ದಾರೆ. ಬ್ರಾಡ್ಮನ್​(99.94) ಬಿಟ್ಟರೆ ಸ್ಮಿತ್​ ಅತಿ ಹೆಚ್ಚು ಸರಾಸರಿ ಹೊಂದಿರುವ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ 26 ಶತಕ ಸೇರಿವೆ. ವಿರಾಟ್​ ಕೊಹ್ಲಿ 86 ಟೆಸ್ಟ್​ ಪಂದ್ಯಗಳಲ್ಲಿ 53.68 ರ ಸರಾಸರಿಯಲ್ಲಿ 7240 ರನ್​ಗಳಿಸಿದ್ದಾರೆ. ಇದರಲ್ಲಿ 27 ಶತಕಗಳಿವೆ.

ಏಕದಿನ ಕ್ರಿಕೆಟ್​ನಲ್ಲಿ ರೋಹಿತ್​ಗಿಂತ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದಿದ್ದಾರೆ. 2019ರ ವಿಶ್ವಕಪ್​​ನಲ್ಲಿ 5 ಶತಕ ಬಾರಿಸಿದ್ದರೂ ಸ್ಥಿರತೆಯ ಕಾಪಾಡಿಕೊಳ್ಳುವಲ್ಲಿ ಕೊಹ್ಲಿ ಮುಂದಿದ್ದಾರೆ ಅನ್ನೋದು ಜಾಫರ್​ ಅಭಿಮತ.

ಸ್ಥಿರತೆಯಲ್ಲಿ ಕೊಹ್ಲಿ ರೋಹಿತ್​ರನ್ನು ಮೀರಿಸಲಿದ್ದಾರೆ. ಆದರೆ ರೋಹಿತ್ ​ಆರಂಭ ಪಡೆದ ನಂತರ ರನ್​ಗಳಿಸುವ ವಿಚಾರದಲ್ಲಿ ಮುಂದಿದ್ದಾರೆ ಎಂದು ಜಾಫರ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.