ETV Bharat / sports

'ವಾಷಿಂಗ್ಟನ್' ಸುಂದರ್​ಗೆ​ ಆ ಹೆಸರಿಡಲು ಕಾರಣ ಬಹಿರಂಗ ಪಡಿಸಿದ ತಂದೆ

ಸೀಮಿತ ಓವರ್​ಗಳ ಕ್ರಿಕೆಟ್​ ಮುಗಿದ ಮೇಲೂ ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದ ಸುಂದರ್ ಅಶ್ವಿನ್ ಮತ್ತು ಜಡೇಜಾ ಗಾಯದಿಂದ ತೆರವಾದ ಆಲ್​ರೌಂಡರ್​ ಹಾಗೂ ಸ್ಪಿನ್​ ಬೌಲರ್​ ಸ್ಥಾನಕ್ಕೆ ಆಯ್ಕೆ ಆಗಿದ್ದರು. ಇದೀಗ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿದ್ದಾರೆ.

ವಾಷಿಂಗ್ಟನ್​ ಸುಂದರ್​
ವಾಷಿಂಗ್ಟನ್​ ಸುಂದರ್​
author img

By

Published : Jan 17, 2021, 9:32 PM IST

ಚೆನ್ನೈ: ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಬೌಲಿಂಗ್​ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ್ದ ವಾಷಿಂಗ್ಟನ್ ಸುಂದರ್​, ಭಾನುವಾರ ಬ್ಯಾಟಿಂಗ್​ನಲ್ಲೂ 62 ರನ್​ಗಳಿಸಿ ಮಿಂಚಿದ್ದಾರೆ.

ಸೀಮಿತ ಓವರ್​ಗಳ ಕ್ರಿಕೆಟ್​ ಮುಗಿದ ಮೇಲೂ ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಿದ್ದ ಸುಂದರ್ ಅಶ್ವಿನ್ ಮತ್ತು ಜಡೇಜಾ ಗಾಯದಿಂದ ತೆರವಾದ ಆಲ್​ರೌಂಡರ್​ ಹಾಗೂ ಸ್ಪಿನ್​ ಬೌಲರ್​ ಸ್ಥಾನಕ್ಕೆ ಆಯ್ಕೆ ಆಗಿದ್ದರು. ಇದೀಗ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿದ್ದಾರೆ.

ಇನ್ನು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಂತೆ ಅವರಿಗೆ ವಾಷಿಂಗ್ಟನ್​ ಎಂಬ ಹೆಸರು ಬರಲು ಕಾರಣ ಏನಿರಬಹುದು ಎಂದು ಕ್ರೀಡಾಭಿಮಾನಿಗಳು ಅಂತರ್ಜಾಲದಲ್ಲಿ ಹುಡುಕಲು ಶುರು ಮಾಡಿದ್ದರು. ಆದರೆ ತಮ್ಮ ಮಗನ ಪ್ರದರ್ಶನದ ಬಗ್ಗೆ ಸುದ್ದಿ ಸಂಸ್ಥೆಯ ಜೊತೆ ಮಾತನಾಡುವ ವೇಳೆ ವಾಷಿಂಗ್ಟರ್​ ಸುಂದರ್​ ತಂದೆ ಎಂ. ಸುಂದರ್​ ಮಗನ ಹೆಸರಿನ ವಿಶೇಷತೆಯನ್ನು ತಿಳಿಸಿದ್ದಾರೆ.

"ನಾನು ಚಿಕ್ಕವನಿದ್ದಾಗ ಕ್ರಿಕೆಟಿಗನಾಗಬೇಕೆಂಬ ಕನಸಿತ್ತು. ಆದರೆ ಅದಕ್ಕೆ ಮನೆಯಲ್ಲಿ ಅನುಕೂಲವಿರಲಿಲ್ಲ. ಆದರೆ ಪಕ್ಕದ ಮನೆಯಲ್ಲಿ ಪಿ.ಡಿ. ವಾಷಿಂಗ್ಟನ್ ಎಂಬ ನಿವೃತ್ತ ಯೋಧರೊಬ್ಬರು ನನಗೆ ಕ್ರಿಕೆಟ್ ಬ್ಯಾಟು, ಚೆಂಡು ಸೇರಿದಂತೆ ನನ್ನ ವಿದ್ಯಾಭ್ಯಾಸಕ್ಕೂ ನೆರವಾಗಿದ್ದರು. ಅವರ ಸಹಾಯದಿಂದ ನಾನು ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗುವ ಮಟ್ಟಕ್ಕೆ ಬೆಳೆದೆ. ಆದರೆ ಅಲ್ಲಿಂದ ಮುಂದೆ ಹೋಗಲಾಗಲಿಲ್ಲ. ಆದರೆ ನನಗೆ ಕ್ರಿಕೆಟಿಗನಾಗಿ ಗುರುತಿಸುವ ಮಟ್ಟಕ್ಕೆ ಬೆಳೆಯಲು ಕಾರಣರಾದವರ ಕೃತಜ್ಞತಾ ಭಾವದಿಂದ ನನ್ನ ಮಗನಿಗೆ ವಾಷಿಂಗ್ಟನ್​ ಎಂದು ನಾಮಕರಣ ಮಾಡಿದೆ " ಎಂದು ಎಂ. ಸುಂದರ್​ ತಿಳಿಸಿದ್ದಾರೆ.

ಆದರೆ ಮೊದಲು ಅವನಿಗೆ ಶಾಸ್ತ್ರದಂತೆ ಶ್ರೀನಿವಾಸನ್​ ಎಂದು ಹೆಸರಿಟ್ಟಿದ್ದಾಗಿಯೂ ತಿಳಿಸಿರುವ ಅವರು, ತಮ್ಮಿಂದ ಅಂದು ಭಾರತಕ್ಕಾಗಿ ಆಡುವ ಕನಸು ಸಾಧ್ಯವಾಗದಿದ್ದರೂ ಇಂದು ತಮ್ಮ ಮಗ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ವಾಷಿಂಗ್ಟನ್ ಸುಂದರ್​ ಭಾರತ ತಂಡದ ಪರ 1 ಏಕದಿನ ಪಂದ್ಯ, 26 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು ಏಕದಿನ ಪಂದ್ಯದಲ್ಲಿ 1 ವಿಕೆಟ್​ ಮತ್ತು ಟಿ20ಯಲ್ಲಿ 20 ವಿಕೆಟ್​ ಪಡೆದಿದ್ದಾರೆ.

ಇದನ್ನು ಓದಿ:ಸುಂದರ್ ಶತಕ ಮಿಸ್​ ಮಾಡಿಕೊಂಡಿದ್ದಕ್ಕೆ ಬೇಸರವಿದೆ: ವಾಶಿಂಗ್ಟನ್ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.