ಶಾರ್ಜಾ: 2020ರಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿರುವ ಆರ್ಸಿಬಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಯಶಸ್ಸಿನ ಶ್ರೇಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಗೆ ಅರ್ಪಿಸಿದ್ದಾರೆ.
2020ರ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಯಶಸ್ಸಿನಲ್ಲಿ ಕೊಹ್ಲಿ, ಪಡಿಕ್ಕಲ್, ವಿಲಿಯರ್ಸ್, ಚಹಾಲ್ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ವಾಷಿಂಗ್ಟನ್ ಇದೆ. ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಿಂದ ಕೇವಲ 6 ವಿಕೆಟ್ ಪಡೆದಿದ್ದಾರೆ. ಆದರೆ ಅವೆಲ್ಲವೂ ದೊಡ್ಡ ಬ್ಯಾಟ್ಸ್ಮನ್ಗಳು ಎನ್ನುವುದು ಒಂದು ಕಡೆಯಾದರೆ, ಸುಂದರೆ ಎಕಾನಮಿ ರೇಟ್ 4.9 ಎನ್ನುವುದೇ ಅವರ ಬೌಲಿಂಗ್ನ ವಿಶೇಷತೆ.
13ನೇ ಆವೃತ್ತಿಯಲ್ಲಿ ಪವರ್ಪ್ಲೇ ಒಳಗೆ ಸುಂದರ್ ಅವರನ್ನು ಬಳಸಿಕೊಳ್ಳುವ ಮೂಲಕ ಅವರನ್ನು ಒಬ್ಬ ಅದ್ಭುತ ಸ್ಪಿನ್ನರ್ ಅಗಿ ನಿಗ್ರಹಿಸಿದ್ದಕ್ಕಾಗಿ ಎಲ್ಲರೂ ನಾಯಕ ವಿರಾಟ್ ಕೊಹ್ಲಿಗೆ ಮನ್ನಣೆ ನೀಡುತ್ತಿದ್ದರೆ, ಯುವ ಬೌಲರ್ ಮಾತ್ರ ತಾವೂ ಒಬ್ಬ ಕ್ರಿಕೆಟಿಗನಾಗಿ ಯಶಸ್ವಿಯಾಗಲು ಭಾರತ ತಂಡದ ಮಾಜಿ ಹಾಗೂ ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಎಂದು ಹೇಳಿದ್ದಾರೆ.
-
No other bowler has done it on more occasions than Washi. 🔝
— Royal Challengers Bangalore (@RCBTweets) October 15, 2020 " class="align-text-top noRightClick twitterSection" data="
Master of his craft. 🌟🌟@Sundarwashi5#PlayBold #IPL2020 #WeAreChallengers #Dream11IPL #RCBvKXIP pic.twitter.com/4m9JwysQpz
">No other bowler has done it on more occasions than Washi. 🔝
— Royal Challengers Bangalore (@RCBTweets) October 15, 2020
Master of his craft. 🌟🌟@Sundarwashi5#PlayBold #IPL2020 #WeAreChallengers #Dream11IPL #RCBvKXIP pic.twitter.com/4m9JwysQpzNo other bowler has done it on more occasions than Washi. 🔝
— Royal Challengers Bangalore (@RCBTweets) October 15, 2020
Master of his craft. 🌟🌟@Sundarwashi5#PlayBold #IPL2020 #WeAreChallengers #Dream11IPL #RCBvKXIP pic.twitter.com/4m9JwysQpz
2017ರಲ್ಲಿ ಪುಣೆ ಸೂಪರ್ಜೇಂಟ್ಸ್ ಪರ ಆಡುವ ವೇಳೆ ಧೋನಿ ತಮ್ಮನ್ನು ಒಬ್ಬ ಉತ್ತಮ ಬೌಲರ್ ಆಗಲು ನೆರವಾಗಿದ್ದರು ಎಂದಿದ್ದಾರೆ. ಸುಂದರ್ ಆವೃತ್ತಿಯಲ್ಲಿ 11 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದರು.
" ನಾನು ಮಾಹಿ ಭಾಯ್ ನೇತೃತ್ವದಲ್ಲಿ ಆರ್‌ಪಿಎಸ್ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ನಾನೊಬ್ಬ ಕ್ರಿಕೆಟಿಗನಾಗಿ ಬೆಳೆಯಲು ಸಾಕಷ್ಟು ನೆರವಾಯಿತು. ಆಗಿನಿಂದಲೂ ನಾನು ಬೌಲರ್ ಆಗಿ ಸಾಕಷ್ಟು ಕಲಿಯುತ್ತಿದ್ದೇನೆ ಹಾಗೂ ಒಬ್ಬ ಬೌಲರ್ ಆಗಿ ಬೆಳೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿರುವ 21 ವರ್ಷದ ಆಟಗಾರ, 'ವಿರಾಟ್ ನನ್ನ ಮೇಲೆ ಸಾಕಷ್ಟು ವಿಶ್ವಾಸ ಇರಿಸಿರುವುದಕ್ಕೆ ಹಾಗೂ ಪವರ್ ಪ್ಲೇ ನಲ್ಲಿ ನನಗೆ ಬೌಲಿಂಗ್ ಮಾಡಲು ಅವಕಾಶ ನೀಡುತ್ತಿರುವುದಕ್ಕೆ ತುಂಬಾ ಸಂತೋಷವಿದೆ. ಒಬ್ಬ ಫ್ರಿಂಗರ್ ಸ್ಪಿನ್ನರ್ಗೆ ನಾಯಕ ತನ್ನ ಮೇಲೆ ಹೊಂದಿರುವ ವಿಶ್ವಾಸವು ತುಂಬಾ ಪ್ರಮುಖವಾಗಿರುತ್ತದೆ. ನಾನು ಆರ್ಸಿಬಿಗೆ ಬ್ಯಾಟ್ ಮೂಲಕ ಗೆಲುವು ತಂದುಕೊಡಲು ಇಷ್ಟಪಡುತ್ತೇನೆ. ಅದಕ್ಕಾಗಿ ಬ್ಯಾಟಿಂಗ್ ಕಡೆಯೂ ಗಮನ ನೀಡುತ್ತಿರುವುದಾಗಿ ಹೇಳಿದ್ದಾರೆ.