ಅಡಿಲೇಡ್: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ 134 ರನ್ಗಳ ಭರ್ಜರಿ ವಿಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಅಬ್ಬರದ ಬ್ಯಾಟಿಂಗ್ ನಡೆಸಿ ಶ್ರೀಲಂಕಾ ಬೌಲಿಂಗ್ ದಾಳಿಯನ್ನು ಧ್ವಂಸ ಮಾಡಿದೆ. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ 4 ಸಿಕ್ಸರ್ 10 ಬೌಂಡರಿ ಸಹಿತ 100 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಆ್ಯರೋನ್ ಫಿಂಚ್ 36 ಎಸೆತಗಳಲ್ಲಿ 64, ಮ್ಯಾಕ್ಸ್ವೆಲ್ 28 ಎಸೆತಗಳಲ್ಲಿ 62 ರನ್ ಸಿಡಿಸಿ 233 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.
-
Australia record their biggest T20I win (by runs) in Adelaide!
— ICC (@ICC) October 27, 2019 " class="align-text-top noRightClick twitterSection" data="
They restrict Sri Lanka to 99/9 to set up a massive 134-run victory in the first #AUSvSL clash.
📝 SCORECARD: https://t.co/C0puszBAjz pic.twitter.com/0GbBjT3nEB
">Australia record their biggest T20I win (by runs) in Adelaide!
— ICC (@ICC) October 27, 2019
They restrict Sri Lanka to 99/9 to set up a massive 134-run victory in the first #AUSvSL clash.
📝 SCORECARD: https://t.co/C0puszBAjz pic.twitter.com/0GbBjT3nEBAustralia record their biggest T20I win (by runs) in Adelaide!
— ICC (@ICC) October 27, 2019
They restrict Sri Lanka to 99/9 to set up a massive 134-run victory in the first #AUSvSL clash.
📝 SCORECARD: https://t.co/C0puszBAjz pic.twitter.com/0GbBjT3nEB
234 ರನ್ಗಳ ದೊಡ್ಡ ಮೊತ್ತದ ಗುರಿ ಪಡೆದ ಶ್ರೀಲಂಕಾ ಕೇವಲ 99 ರನ್ಗಳಿಗೆ ಆಲೌಟ್ ಆಗುವ ಮೂಲಕ 134 ರನ್ಗಳ ಹೀನಾಯ ಸೋಲನುಭವಿಸಿತು. ದಾಸುನ್ ಸನಾಕ 17 ರನ್ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮಿಚೆಲ್ ಸ್ಟಾರ್ಕ್ 2 , ಆ್ಯಡಂ ಝಂಪಾ 3, ಪ್ಯಾಟ್ ಕಮ್ಮಿನ್ಸ್ 2 ಹಾಗೂ ಅಶ್ಟನ್ ಅಗರ್ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶತಕಗಳಿಸಿದ ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.