ETV Bharat / sports

ಸಹಾ, ವಾರ್ನರ್ ಅಬ್ಬರ: ಡೆಲ್ಲಿಗೆ 220 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ ಹೈದರಾಬಾದ್​ - ಎಸ್​ಆರ್​ ಹೆಚ್​ vs ಡಿಸಿ ಡ್ರೀ11 ತಂಡ

ಸಹಾ(87) ಹಾಗೂ ವಾರ್ನರ್​(66) ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಹೈದರಾಬಾದ್​ 219 ರನ್​ಗಳ ಬೃಹತ್ ಮೊತ್ತ ಪೇರಿಸಿದೆ.

ಸಹಾ- ವಾರ್ನರ್
ಸಹಾ- ವಾರ್ನರ್
author img

By

Published : Oct 27, 2020, 9:25 PM IST

Updated : Oct 27, 2020, 9:46 PM IST

ದುಬೈ: ಡೇವಿಡ್ ವಾರ್ನರ್​ ಹಾಗೂ ವೃದ್ಧಿಮಾನ್ ಸಹಾ ಅವರ ಅದ್ಭುತ ಅರ್ಧ ಶತಕದ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 219 ರನ್​ಗಳಿಸಿದೆ.

ಪ್ಲೇ ಆಫ್​ ದೃಷ್ಟಿಯಿಂದ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​​​​​ಗೆ ಇಳಿದ ವಾರ್ನರ್ ಹಾಗೂ ಸಹಾ ಮೊದಲ ವಿಕೆಟ್​ಗೆ 9.4 ಓವರ್​ಗಳಲ್ಲಿ 107 ರನ್​ಗಳ ಜೊತೆಯಾಟ ನಡೆಸಿದರು.

34 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 66 ರನ್​ಗಳಿಸಿ ವಾರ್ನರ್​ ಅಶ್ವಿನ್​ಗೆ ವಿಕೆಟ್ ನೀಡಿದರು. ಆದರೆ, ವಾರ್ನರ್​ ವಿಕೆಟ್ ಕಳೆದುಕೊಂಡ ನಂತರವೂ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ಸಹಾ ಕನ್ನಡಿಗ ಮನೀಶ್ ಪಾಂಡೆ ಜೊತೆ 63 ರನ್​ಗಳ ಜೊತೆಯಾಟ ನಡೆಸಿ ಮೊತ್ತವನ್ನು ಹೆಚ್ಚಿಸಿದರು. ಸಹಾ 45 ಎಸೆತಗಳಲ್ಲಿ 12 ಬೌಂಡರಿಗಳು ಹಾಗೂ 2 ಸಿಕ್ಸರ್​ಗಳ ಸಹಿತ 87 ರನ್​ಗಳಿಸಿ ಔಟಾದರು.

ಕೊನೆಯಲ್ಲಿ ಅಬ್ಬರಿಸಿದ ಮನೀಶ್ ಪಾಂಡೆ, ವಿಲಿಯಮ್ಸನ್ ಜೊತೆಗೆ 49 ರನ್​ಗಳಿಸಿದರು. ಪಾಂಡೆ 31 ಎಸೆತಗಳಲ್ಲಿ 44 ರನ್​ಗಳಿಸಿದರೆ, ಕೇನ್ ವಿಲಿಯಮ್ಸನ್ 11 ರನ್​ಗಳಿಸಿದರು.

Last Updated : Oct 27, 2020, 9:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.