ETV Bharat / sports

ಈ ಬಾರಿಯ ಐಪಿಎಲ್​ನಲ್ಲಿ 'ಕಾಮೆಂಟರಿ​​ ಫ್ರಮ್​​​​​​​​​​ ಹೋಮ್' ಸಾಧ್ಯತೆ!

ದಕ್ಷಿಣ ಆಫ್ರಿಕಾದ ಸೆಂಚುರಿಯನ್​ನಲ್ಲಿ ಪಂದ್ಯ ನಡೆಯುತ್ತಿದ್ದರೆ, ಇರ್ಫಾನ್​ ಪಠಾಣ್​ ತಮ್ಮ ಬರೋಡಾದ ಮನೆಯಿಂದ, ದೀಪ್​ದಾಸ್​ ಗುಪ್ತಾ ಕೋಲ್ಕತ್ತಾದಿಂದ ಹಾಗೂ ಸಂಜಯ್​ ಮಂಜ್ರೇಕರ್​ ಮುಂಬೈನ ತಮ್ಮ ಮನೆಯಿಂದ ಕಾಮೆಂಟರಿ ಮಾಡಿದ್ದರು.

ಕಾಮೆಂಟರಿ​​ ಫ್ರಂಮ್​ ಹೋಮ್
ಕಾಮೆಂಟರಿ​​ ಫ್ರಂಮ್​ ಹೋಮ್
author img

By

Published : Jul 23, 2020, 2:43 PM IST

ನವದೆಹಲಿ: ದಕ್ಷಿಣ ಆಫ್ರಿಕಾದ 3 ಟಿಸಿ ಕಪ್​ನಲ್ಲಿ ಮನೆಯಿಂದಲೇ ಕಾಮೆಂಟರಿ ಟೆಸ್ಟ್​ ಯಶಸ್ವಿಯಾಗಿದ್ದು, 2020 ಐಪಿಎಲ್​ನಲ್ಲೂ ಈ ಹೊಸ ಮಾದರಿಯನ್ನು ಪರಿಚಯಿಸಲು ಅಧಿಕೃತ ಪ್ರಸಾರಕರು ಆಲೋಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಐಸಿಸಿ 2020ರ ಟಿ-20 ವಿಶ್ವಕಪ್ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿದಂತೆಯೇ ಬಿಸಿಸಿಐ 13ನೇ ಐಪಿಎಲ್ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಇನ್ನು ಐಪಿಎಲ್ ಪ್ರಸಾರಕರಾಗಿರುವ ಸ್ಟಾರ್ ಇಂಡಿಯಾ ಕೂಡ ಈ ಶ್ರೀಮಂತ ಟೂರ್ನಿಗೆ ಸಿದ್ದವಾಗುತ್ತಿದೆ. ಜೊತೆಗೆ ಈ ಬಾರಿಯ ನೇರ ಪ್ರಸಾರದಲ್ಲಿ ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೆ ಇದು ದಕ್ಷಿಣ ಆಫ್ರಿಕಾದ 3 ಟಿಸಿ ಕಪ್​ನಲ್ಲಿ ಯಶಸ್ವಿಯಾಗಿದೆ.

ಇರ್ಫಾನ್​ ಪಠಾಣ್​
ಇರ್ಫಾನ್​ ಪಠಾಣ್​

ದಕ್ಷಿಣ ಆಫ್ರಿಕಾದ ಸೆಂಚುರಿಯನ್​ನಲ್ಲಿ ಪಂದ್ಯ ನಡೆಯುತ್ತಿದ್ದರೆ, ಇರ್ಫಾನ್​ ಪಠಾಣ್​ ತಮ್ಮ ಬರೋಡಾದ ಮನೆಯಿಂದ, ದೀಪ್​ದಾಸ್​ ಗುಪ್ತಾ ಕೋಲ್ಕತ್ತಾದಿಂದ ಹಾಗೂ ಸಂಜಯ್​ ಮಂಜ್ರೇಕರ್​ ಮುಂಬೈನ ತಮ್ಮ ಮನೆಯಿಂದ ಕಾಮೆಂಟರಿ ಮಾಡಿದ್ದರು.

ಸಾವಿರಾರು ಕಿಮೀ ದೂರದಲ್ಲಿ ನಡೆಯುವ ಪಂದ್ಯಕ್ಕೆ ಮನೆಯಿಂದ ಕಾಮೆಂಟರಿ ಮಾಡಲು ಸಾಧ್ಯವಾಗಿದ್ದಕ್ಕೆ ಭಾರತದ ಮಾಜಿ ಆಲ್​ರೌಂಡರ್ ಇದು ಮ್ಯಾಜಿಕಲ್​ ಎಂದು ಕರೆದಿದ್ದರು.

ಈ ಪ್ರಯೋಗ ಕೆಲ ಸಣ್ಣಪುಟ್ಟ ಲೋಪದೋಷಗಳಿಂದ ಕೂಡಿದ್ದರೂ ಕೂಡ ಯಶಸ್ವಿಯಾಗಿತ್ತು. ಹೀಗಾಗಿ ಮುಂದಿನ ಐಪಿಎಲ್​ನಲ್ಲಿ ಸಾಮಾನ್ಯ ಅಂಶವಾಗಿ ಅಳವಡಿಸಿಕೊಳ್ಳುವ ಚಿಂತನೆಯನ್ನು ಸ್ಟಾರ್ ಸ್ಪೋರ್ಟ್ಸ್ ನಡೆಸುತ್ತಿದೆ. ಹಿಂದಿ ಹಾಗೂ ಇಂಗ್ಲಿಷ್ ಸಾಧ್ಯವಾಗದಿದ್ದರೂ ಸ್ಥಳೀಯ ಭಾಷೆಗಳಾದ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳ ಕಾಮೆಂಟರಿಯನ್ನು ಮನೆಯಲ್ಲಿ ನಡೆಸಲು ಸ್ಟಾರ್​ ಇಂಡಿಯಾ ಸಿದ್ದತೆ ನಡೆಸಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.