ಹೈದರಾಬಾದ್: ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದು, ಕಿವಿಸ್ ನೆಲದಲ್ಲಿ ಅಬ್ಬರಿಸುತ್ತಿದೆ. ನ್ಯೂಜಿಲ್ಯಾಂಡ್ನಲ್ಲಿ ಭಾರತ ತಂಡ 5 ಟಿ-20, 3 ಏಕದಿನ, 2 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಈಗಾಗಲೇ ಭಾರತ ತಂಡ ಟಿ-20 ಸರಣಿಯನ್ನು 5-0 ದಿಂದ ಗೆದ್ದು ಐತಿಹಾಸಿಕ ದಾಖಲೆಯೊಂದಿಗೆ ಬೀಗಿದೆ.
ಸದ್ಯ ಏಕದಿನ ಸರಣಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಬುತ ಪ್ರದರ್ಶನದ ನಡುವೆಯೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಕನ್ನಡಿಗೆ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಆಟವಾಡಿ ತಂಡವನ್ನು ಬೃಹತ್ತ ಮೊತ್ತದತ್ತ ಕೊಂಡೊಯ್ದಿದ್ದರು. ಇವರಿಬ್ಬರ ಆಟಕ್ಕೆ ಹಲವು ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರು ಫಿದಾ ಆಗಿದ್ದಾರೆ.
-
Kadak Ladka Rahul -Naam toh suna hi hoga.
— Virender Sehwag (@virendersehwag) February 5, 2020 " class="align-text-top noRightClick twitterSection" data="
Shreyas Iyer, it’s your year !#NZvInd pic.twitter.com/OYupaiDtLC
">Kadak Ladka Rahul -Naam toh suna hi hoga.
— Virender Sehwag (@virendersehwag) February 5, 2020
Shreyas Iyer, it’s your year !#NZvInd pic.twitter.com/OYupaiDtLCKadak Ladka Rahul -Naam toh suna hi hoga.
— Virender Sehwag (@virendersehwag) February 5, 2020
Shreyas Iyer, it’s your year !#NZvInd pic.twitter.com/OYupaiDtLC
ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಕೆ.ಎಲ್.ರಾಹುಲ್ ಅವರನ್ನು ಖಡಕ್ ಲಡ್ಕಾ ರಾಹುಲ್ ಎಂದು ಹಾಡಿ ಹೊಗಳಿದ್ದಾರೆ. ಜೊತೆಗೆ ಶ್ರೇಯಸ್ ಅಯ್ಯರ್ ಅವರಿಗೆ ಇದು ನಿನ್ನ ವರ್ಷ ಎಂದು ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಕೀಪಿಂಗ್ ಮೂಲಕ ಮಿಂಚಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವ ಕೆ.ಎಲ್.ರಾಹುಲ್, ಏಕದಿನ ಸರಣಿಯಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬೀಸಿ ಕಿವೀಸ್ ಬೌಲರ್ಗಳ ಬೆವರಿಳಿಸಿದ್ದಾರೆ. 64 ಎಸೆತಗಳಲ್ಲಿ 3 ಬೌಂಡರಿ 6 ಭರ್ಜರಿ ಸಿಕ್ಸರ್ಗಳ ನೇರವಿನಿಂದ ರಾಹುಲ್ 88 ರನ್ಗಳಿಸಿ ಔಟಾಗದೆ ಉಳಿದಿದ್ದರು.