ETV Bharat / sports

ಹುತಾತ್ಮ ಯೋಧರಿಗೆ ಕೊಹ್ಲಿ, ರೋಹಿತ್​ ಸೆಲ್ಯೂಟ್​​... ಹೀರೋಗಳಿಗೊಂದು ನಮನ ಎಂದ ಕ್ರಿಕೆಟರ್ಸ್​! - ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

ಚೀನಾದೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾಗಿರುವ ಭಾರತೀಯ ವೀರ ಯೋಧರಿಗೆ ಟ್ವೀಟ್​ ಮಾಡುವ ಮೂಲಕ ಕ್ರಿಕೆಟರ್ಸ್​ ಸಂತಾಪ ಸೂಚಿಸಿದ್ದಾರೆ.

Virat, rohit sharm tribute
Virat, rohit sharm tribute
author img

By

Published : Jun 17, 2020, 9:41 PM IST

ನವದೆಹಲಿ: ಲಡಾಖ್​​ನ ಗಾಲ್ವನ್‌ ಕಣಿವೆಯಲ್ಲಿ ನಡೆದ ಭಾರತ-ಚೀನಾ ಯೋಧರ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಅವರ ಬಲಿದಾನಕ್ಕೆ ಇದೀಗ ಕ್ರಿಕೆಟರ್ಸ್​​​ ಸೆಲ್ಯೂಟ್​ ಹೇಳಿದ್ದು, ಅವರ ತ್ಯಾಗ, ಬಲಿದಾನಕ್ಕೆ ಇಡೀ ದೇಶವೇ ತಲೆಬಾಗುತ್ತದೆ ಎಂದಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಆರಂಭಿಕ ಆಟಗಾರ ರೋಹಿತ್​ ಶರ್ಮಾ ಸೇರಿದಂತೆ ಅನೇಕರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದು, ವೀರ ಯೋಧರ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.

  • Salute and deepest respect to the soldiers who sacrificed their lives to protect our country in the Galwan Valley. NO one is more selfless and brave than a soldier. Sincere condolences to the families. I hope they find peace through our prayers at this difficult time. 🙏

    — Virat Kohli (@imVkohli) June 17, 2020 " class="align-text-top noRightClick twitterSection" data=" ">

ದೇಶದ ರಕ್ಷಣೇ ವೇಳೆ ಗಾಲ್ವನ್​ ಕಣಿವೆಯಲ್ಲಿ ಪ್ರಾಣ ತ್ಯಾಗ ಮಾಡಿರುವ ನಮ್ಮ ದೇಶದ ಸೈನಿಕರಿಗೆ ನನ್ನದೊಂದು ಸೆಲ್ಯೂಟ್​. ಸೈನಿಕರಿಗಿಂತ ಯಾರು ನಿಸ್ವಾರ್ಥ ಹಾಗೂ ಧೈರ್ಯಶಾಲಿಗಳಾಗಿರಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.

  • Salute to our REAL HEROES who laid their lives protecting and honouring our border. May god give their families utmost strength #GalwanValley

    — Rohit Sharma (@ImRo45) June 17, 2020 " class="align-text-top noRightClick twitterSection" data=" ">

ನಮ್ಮ ಗಡಿ ರಕ್ಷಣೆ ವೇಳೆ ಪ್ರಾಣ ತ್ಯಜಿಸಿರುವ ರಿಯಲ್​ ಹೀರೋಗಳಿಗೆ ಸೆಲ್ಯೂಟ್​. ದೇವರು ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರೋಹಿತ್​ ಟ್ವೀಟ್​ ಮಾಡಿದ್ದಾರೆ. ಸೋಮವಾರ ರಾತ್ರಿ ಪೂರ್ವ ಲಡಾಕ್​ನ ಗಡಿಯಲ್ಲಿ ನಡೆದ ಸಂಘರ್ಷದ ವೇಳೆ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು. ಚೀನಾ ದೇಶದ 43 ಯೋಧರು ಘಟನೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರಬಿದಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಇರ್ಫಾನ್​ ಪಠಾಣ್​ ಕೂಡ ಟ್ವೀಟ್​ ಮಾಡಿದ್ದು, ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.